ಆಪರೇಷನ್ ಸದ್ದು; ದೀಪಾವಳಿ ಬಳಿಕ ಹಲವು ಬಿಜೆಪಿ -ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ : ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಪರೇಷನ್ ಸದ್ದು ಮಾಡ್ತಿದೆ. ಆಪರೇಷನ್ ಗಣೇಶ ಹಬ್ಬ, ಆಪರೇಷನ್ ಆಯುಧಪೂಜೆ ಆಯ್ತು. ಈಗ ಆಪರೇಷನ್ ದೀಪಾವಳಿ ಶುರುವಾಗಿದೆ. 3 ಪಕ್ಷಗಳಲ್ಲೂ ಆಪರೇಷನ್ ತಳಮಳ ಸೃಷ್ಟಿಸಿದೆ. ಬಿಜೆಪಿ ಬಿಡ್ತಾರೆ ಅಂತಿರುವ ಯಶವಂತಪುರ ಶಾಸಕ ಸೋಮಶೇಖರ್ಸ್ವ ಪಕ್ಷದ ಮೇಲೆ ವಿಷದ ಬಾಂಬ್ ಹಾಕಿದ್ದಾರೆ.
ದೀಪಾವಳಿ ಮುಗಿದ ನಂತರ ರಾಜಕೀಯದಲ್ಲಿ ಬದಲಾವಣೆ
ಕಾಂಗ್ರೆಸ್‌ನಿಂದ ಆಪರೇಷನ್ ಗುಸುಗುಸು ಬೆನ್ನಲ್ಲೇ ದೆಹಲಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ಆಪರೇಷನ್ ಸುಳಿವು ನೀಡಿದ್ದಾರೆ. ನವೆಂಬರ್ 15ನೇ ತಾರೀಖು, ದೀಪಾವಳಿ ಮುಗಿದ ನಂತರ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುತ್ತೆ ಅಂತ ಡಿ.ಕೆ ಶಿವಕುಮಾರ್ ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ.
50 ಜನರನ್ನ ಕರೆತರಲು ಟಾಸ್ಕ್
ಇದರ ಬೆನ್ನಲ್ಲೇ ಹಾಸನದಲ್ಲಿ ಮಾತಾಡಿದ ಕುಮಾರಸ್ವಾಮಿ ಕಾಂಗ್ರೆಸ್ ಆಪರೇಷನ್ ಬಗ್ಗೆ ಸಿಎಂ, ಡಿಸಿಎಂ ಸಚಿವರಿಗೆ 50 ಜನರನ್ನ ಕರೆತರಲು ಟಾಸ್ಕ್ ಕೊಟ್ಟಿದ್ದಾರೆ ಅನ್ನೋ ಮೂಲಕ ಆಪರೇಷನ್ ಹಸ್ತ ನಡೆಯುತ್ತಿದೆ ಅನ್ನೋದನ್ನ ಜೀವಂತವಾಗಿರಿಸಿದ್ದಾರೆ.
ಕಾಂಗ್ರೆಸ್ ಮುಳುಗುವ ಹಡಗು
ರಾಜ್ಯದಲ್ಲಿ ಬಿಜೆಪಿ ಈಗಿರುವ ಪರಿಸ್ಥಿತಿಯಲ್ಲಿ ನಮ್ಮ ಒಬ್ಬ ಶಾಸಕರನ್ನೂ ಅವರಿಗೆ ಕರೆದುಕೊಳ್ಳಲು ಆಗಲ್ಲ. ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆಯೇ ತೀರ್ಮಾನ ಮಾಡಲು ಆಗಿಲ್ಲ. ಅವರು ಕೇವಲ ಗೊಂದಲ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರು ಯಾರು ಕಾಂಗ್ರೆಸ್ ಗೆ ಹೋಗಲ್ಲ, ಕಾಂಗ್ರೆಸ್ ಮುಳುಗುವ ಹಡಗು. ಐದೇ ತಿಂಗಳಲ್ಲಿ ಕಾಂಗ್ರೆಸ್ ಮುಳುಗುವ ಹಡಗಿನಲ್ಲಿದೆ. ಈಗ ಮುಳುಗುವ ಹಡಗಿನಲ್ಲಿ ಯಾರು ಶಾಸಕರು ಕೂರಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಈ ನಡುವೆ ಜೆಡಿಎಸ್ಗೂ ಆಪರೇಷನ್ ಹಸ್ತದ ಆತಂಕ ಶುರುವಾಗಿದೆ. ತಮ್ಮ ಶಾಸಕರನ್ನ ಕಾಂಗ್ರೆಸ್ ಸೆಳೆಯುವ ಶಂಕೆ ಹಿನ್ನೆಲೆ ಹಾಸನದಲ್ಲಿ ಶಾಸಕರ ಜೊತೆ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬಿಜೆಪಿ ಜೊತೆ ಮೈತ್ರಿಗೆ ಮಾತ್ರ ನನ್ನ ವಿರೋಧ
ಇವತ್ತು ಎಲ್ಲರನ್ನೂ ಕರ್ಕೊಂಡ್ ಹಾಸನಾಂಬೆ ದರ್ಶನಕ್ಕೂ ಹೋಗಿದ್ದರು. ಆದರೆ ಶಾಸಕ ಶರಣಗೌಡ ಕಂದಕೂರ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಜೊತೆ ಮೈತ್ರಿಗೆ ಮಾತ್ರ ನನ್ನ ವಿರೋಧ, ಆದರೆ ಪಕ್ಷದಿಂದ ದೂರವಾಗಲ್ಲ ಎಂದು ಕಂದಕೂರ ಸ್ಪಷ್ಟನೆ ಕೊಟ್ಟಿದ್ದಾರೆ. ಕಾಂಗ್ರೆಸ್‌ಗೆ ಹೋಗಲ್ಲ ಎಂದು ತಿಳಿಸಿದ್ದಾರೆ.
ಆಪರೇಷನ್ ಹಸ್ತ, ಆಪರೇಷನ್ ಕಮಲ, ಆಪರೇಷನ್ ದಳಪತಿಗಳು ಅನ್ನೋದು ಸರ್ಕಾರ ಬಂದ 3 ತಿಂಗಳಿಂದಲೂ ಜೋರಾಗೇ ಸದ್ದು ಮಾಡ್ತಿದೆ. ಇದಕ್ಕೆಲ್ಲಾ ಇತಿಶ್ರೀ ಹಾಡಿ ಯಾವಾಗ ರಾಜ್ಯದ ಅಭಿವೃದ್ಧಿ ಕಡೆ ಸರ್ಕಾರ ಮತ್ತ ವಿಪಕ್ಷಗಳು ಗಮನ ಕೊಡ್ತಾವೋ ಏನೋ.