ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Glen Maxwell : ದ್ವಿಶತಕ ಭಾರಿಸಿ ಐತಿಹಾಸಿಕ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್ವೆಲ್ ; ಏನ್ ಮ್ಯಾಚ್ ಗುರು ಎಂದ ಫ್ಯಾನ್ಸ್...!

Twitter
Facebook
LinkedIn
WhatsApp
Glen Maxwell : ದ್ವಿಶತಕ ಭಾರಿಸಿ ಐತಿಹಾಸಿಕ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್ವೆಲ್ ; ಏನ್ ಮ್ಯಾಚ್ ಗುರು ಎಂದ ಫ್ಯಾನ್ಸ್...!

Gl\en Maxwell: ICC ODI ವಿಶ್ವಕಪ್ 2023ನಲ್ಲಿ ಇಂದು ಮತ್ತೊಂದು ಕುತೂಹಲಕಾರಿ ಯುದ್ಧ ನಡೀತಯ. ಮುಂಬೈನ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ (AUS vs AFG) ನಡುವಿನ ನಿರ್ಣಾಯಕ ಪಂದ್ಯ ನಡೀತು. ಎರಡೂ ತಂಡಗಳು ಸೆಮಿಸ್‌ ರೇಸ್‌ನಲ್ಲಿವೆ.  ಅಫ್ಘಾನಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಅಫ್ಘನ್ 291 ರನ್‌ಗಳಿಸಿತ್ತು. ಇದೇನು ಹೆಚ್ಚು ಸ್ಕೋರ್‌ ಅಲ್ಲದಿದ್ರೂ, ಅಫ್ಘನ್ ಬಳಿ ಇರೋ ಸ್ಪಿನ್ನರ್‌ಗಳನ್ನು ನೋಡಿದ್ರೆ ಆಸ್ಟ್ರೇಲಿಯಾ ಚೇಸ್ ಮಾಡುತ್ತಾ ಅನ್ನೋ ಪ್ರಶ್ನೆ ಮೂಡಿತ್ತು. ಆದರೆ ಈ ಟಾರ್ಗೆಟ್‌ ಚೇಸ್‌ ಮಾಡೋದ್ರಲ್ಲಿ ಆಸ್ಟ್ರೇಲಿಯಾ  ಗೆದ್ದಿದೆ. ಆಸೀಸ್‌ಗೆ ರೋಚಕ ಜಯ ಗಳಿಸಿದೆ. ಇಂದಿನ ಪಂದ್ಯ ನೋಡೋದನ್ನು ನೀವು ಮಿಸ್‌ ಮಾಡಿಕೊಂಡಿದ್ರೆ ನೀವು ನಿಜವಾದ ಕ್ರಿಕೆಟ್‌ನ ನೋಡೇ ಇಲ್ಲ ಅನ್ನಬಹುದು.

 

ಇನ್ನೂ ಒಂದೆಡೆ ಆಸೀಸ್ ವಿಕೆಟ್‌ ಕಳೆದುಕೊಳ್ಳುತ್ತಿದ್ದರೆ ಅತ್ತ ಮ್ಯಾಕ್ಸ್‌‌ವೆಲ್‌ ಏಕಾಂಗಿ ಹೋರಾಟ ನಡೆಸಿದರು. ಅವಕಾಶ ಸಿಕ್ಕಾಗೆಲ್ಲಾ ಬಾಲ್‌ನ ಬೌಂಡರಿಗಟ್ಟುತ್ತಿದ್ದರು.ಅಫ್ಘಾನಿಸ್ತಾನ ಬೌಲರ್​ಗಳ ದಾಳಿಗೆ ಸಿಲುಕಿ ಆಸ್ಟ್ರೇಲಿಯಾ ಬ್ಯಾಟರ್​ಗಳು ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಗ್ಲೇನ್ ಮ್ಯಾಕ್ಸ್​ವೆಲ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಇದು ಆಸೀಸ್‌ ಗೆಲುವಲ್ಲ. ಮ್ಯಾಕ್ಸ್‌‌ವೆಲ್‌ ಸಿಕ್ಕ ಗೆಲುವು.  ಮ್ಯಾಕ್ಸ್‌ವೆಲ್‌ ಒಬ್ಬರೆ ಗೆಲುವು ತಂದುಕೊಟ್ಟಿದ್ದಾರೆ.

ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ, ಮತ್ತೊಂದು ಕಡೆ ಬೆನ್ನು ನೋವು, ಕಾಲು ನೋವು ಎಲ್ಲವನ್ನೂ ಸಹಿಸಿಕೊಂಡು ಬ್ಯಾಟಿಂಗ್ ಮಾಡಿದ ಮ್ಯಾಕ್ಸ್​ವೆಲ್ ಹೆಚ್ಚು ಕಡಿಮೆ 40 ಓವರ್​ಗಳ ಕಾಲ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಿ ತಂಡಕ್ಕೆ ಅಸಾಧ್ಯವಾಗಿದ್ದ ಗೆಲುವುನ್ನು ತಂದುಕೊಟ್ಟರು.

ನಾಯಕ ಪ್ಯಾಟ್ ಕಮಿನ್ಸ್ ಜೊತೆಗೂಡಿದ ಮ್ಯಾಕ್ಸ್​ವೆಲ್ ಮುರಿಯದ 8ನೇ ವಿಕೆಟ್​ಗೆ 202ರನ್​ಗಳ ಜೊತೆಯಾಟ ನಡೆಸಿ ಆಸ್ಟ್ರೇಲಿಯಕ್ಕೆ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು. ಇದರಲ್ಲಿ ಕಮಿನ್ಸ್ ಪಾಲು ಕೇವಲ 12 ರನ್​!. ಉಳಿದ ಎಲ್ಲಾ ರನ್​ ಗ್ಲೇನ್ ಮ್ಯಾಕ್ಸ್​ವೆಲ್ ಬ್ಯಾಟಿನಿಂದ ಸಿಡಿದಿತ್ತು. 128 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್​ವೆಲ್ 21 ಬೌಂಡರಿ ಹಾಗೂ 10 ಸಿಕ್ಸರ್​ಗಳ ಸಹಿತ ಅಜೇಯ 201ರನ್​ ಸಿಡಿಸಿ ಗೆಲುವಿನ ರೂವಾರಿಯಾದರು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಚೇಸಿಂಗ್​ನಲ್ಲಿ ಬಂದ ಮೊದಲ ದ್ವಿಶತಕ ಹಾಗೂ ಗರಿಷ್ಠ ಸ್ಕೋರ್​ ಆಗಿದೆ.

ಮ್ಯಾಕ್ಸ್​ವೆಲ್​ರ ಸಿಡಿಲಬ್ಬರದ ಬ್ಯಾಟಿಂಗ್ ನೆರೆವಿನಿಂದ ಆಸ್ಟ್ರೇಲಿಯಾ ತಂಡ ತನ್ನ ಖಾತೆಗೆ 2 ಅಂಕ ಸೇರಿಸಿಕೊಂಡು 3ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. ಈಗಾಗಲೇ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ಸ್ಥಾನ ಖಚಿತಗೊಳಿಸಿಕೊಂಡಿವೆ.

292 ರನ್‌ಗಳ ಟಾರ್ಗೆಟ್ ಇಟ್ಟುಕೊಂಡು ಬ್ಯಾಟಿಂಗ್‌ ಇಳಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ ಎದುರಾಯ್ತು. ಕೇವಲ 4 ರನ್‌ಗಳಿಸಿದ್ದಾಗ ಹೆಡ್‌ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ತಂಡ 43 ರನ್‌ಗಳಿಸಿದ್ದಾಗ ಮಿಚೆಲ್‌ ಮಾರ್ಷ್‌ ವಿಕೆಟ್‌ ಒಪ್ಪಿಸಿದರು. ಇದರ ಬೆನ್ನಲ್ಲೇ ಅಂದ್ರೆ ತಂಡ 49ರನ್‌ಗಳಿಸಿದ್ದಾಗ ಡೇವಿಡ್‌ ವಾರ್ನರ್‌ ವಿಕೆಟ್ ಒಪ್ಪಿಸಿದ್ರು. ಇದಾದ ಮೇಲೆ ಆಸ್ಟ್ರೇಲಿಯಾ ಚೇತರಿಸಿಕೊಳ್ಳಲೇ ಇಲ್ಲ. ತಂಡ 69 ರನ್‌ಗಳಿಸಿದ್ದಾಗ ಲಬುಶಿನ್‌ ಔಟಾದ್ರು. ಇವರ ಹಿಂದೆ ಸ್ಟೋನಿಸ್‌ ಕೂಡ ಔಟಾದ್ರು. 91 ರನ್‌ಗಳಿಸಿದ್ದಾಗ ಸ್ಟಾರ್ಕ್ ಕೂಡ ವಿಕೆಟ್‌ ಒಪ್ಪಿಸಿದ್ರು.

 

ಇನ್ನಿಂಗ್ಸ್ ಆರಂಭಿಸಿದ ಇಬ್ರಾಹಿಂ ಝದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಉತ್ತಮ ಆರಂಭ ನೀಡಿದರು. ಆದರೆ ತಂಡದ ಮೊತ್ತ 38 ರನ್‌ಗಳಾಗಿದ್ದಾಗ ರಹಮಾನುಲ್ಲಾ ಗುರ್ಬಾಜ್ 25 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು. ನಂತರ ಬಂದ ರಹಮತ್ ಷಾ ಕೂಡ ಆಸೀಸ್ ಬೌಲರ್‌ಗಳಿಗೆ ಪ್ರತಿರೋಧ ತೋರಿ 44 ಎಸೆತಗಳಲ್ಲಿ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಬ್ರಾಹಿಂ ಝದ್ರಾನ್ 143 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ ಅಜೇಯ 129 ರನ್ ಬಾರಿಸಿದರು. ಇನ್ನು ಇಬ್ರಾಹಿಂ ಝದ್ರಾನ್ ಅವರಿಗೆ ಉತ್ತಮ ಸಾಥ್ ನೀಡಿದ ರಶೀದ್ ಖಾನ್ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ 35 ರನ್ ಬಾರಿಸಿದರು.

 

ಇನ್ನೂ ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ 2 ವಿಕೆಟ್ ಪಡೆದ್ರೆ, ಮಿಚೆಲ್ ಸ್ಟಾರ್ಕ್ 1 ವಿಕೆಟ್‌ ಪಡೆದರು.ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆಡಮ್ ಝಂಪಾ ತಲಾ ಒಂದೊಂದು ವಿಕೆಟ್ ಪಡೆದರು

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ