ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಇಳಿಕೆ ಕಂಡ ಈರುಳ್ಳಿ ದರ ; ಮಾರುಕಟ್ಟೆಯಲ್ಲಿ ಎಷ್ಟಿದೆ ದರ!

Twitter
Facebook
LinkedIn
WhatsApp
ಇಳಿಕೆ ಕಂಡ ಈರುಳ್ಳಿ ದರ ; ಮಾರುಕಟ್ಟೆಯಲ್ಲಿ ಎಷ್ಟಿದೆ ದರ!

ಬೆಂಗಳೂರು: ನವೆಂಬರ್‌ ಬಂತೆಂದರೆ ಈರುಳ್ಳಿ ದರ ಸೆಂಚುರಿ ಬಾರಿಸುತ್ತಿತ್ತು. ಗ್ರಾಹಕರು ಬೆಲೆ ಏರಿಕೆ ಬಿಸಿಯಿಂದ ತತ್ತರಿಸುತ್ತಿದ್ದರು. ಆದರೆ, ಇನ್ನು ಮುಂದೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿಯಿಲ್ಲ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಈರುಳ್ಳಿ ದಾಸ್ತಾನು ಬಂದ ಹಿನ್ನೆಲೆ ದರ ಇಳಿಕೆ ಆರಂಭವಾಗಿದೆ.
ಈರುಳ್ಳಿ ದರ ಸಮರವನ್ನು ಎದುರಿಸಲು ಕೇಂದ್ರ ಸರ್ಕಾರ ಈ ಬಾರಿ ಮುಂಚಿತವಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನು ಮಾಡಿಟ್ಟಿದೆ. ಜತೆಗೆ ಗ್ರಾಹಕರಿಗೆ 25 ರೂ.ಗೆ ಈರುಳ್ಳಿಯನ್ನು ಸರ್ಕಾರ ವತಿಯಿಂದಲೇ ಮಾರಾಟ ಮಾಡುವುದಾಗಿ ಹೇಳಿತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಅತಿವೃಷ್ಟಿಯಿದ್ದರೂ ಬೆಲೆ ನಿಯಂತ್ರಣದಲ್ಲಿದೆ.

ಈರುಳ್ಳಿ ದರ 65 ರೂಪಾಯಿಯಿಂದ 50 ರೂಪಾಯಿಗೆ ಇಳಿಕೆ

ಕಳೆದ ಎರಡು ವಾರಗಳ ಹಿಂದಷ್ಟೇ ಯಶವಂತಪುರ ಎಪಿಎಂಸಿಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 65 ರೂ.ವರೆಗೆ ತಲುಪಿತ್ತು. ಇದೀಗ ಗುಣಮಟ್ಟದ ಮೊದಲ ದರ್ಜೆಯ ಈರುಳ್ಳಿ ಕೆ.ಜಿ.ಗೆ 50 ರೂ.ಗೆ ಇಳಿದಿದೆ. ಎರಡು ಮತ್ತು ಮೂರನೇ ದರ್ಜೆಯ ಈರುಳ್ಳಿ ದರವೂ ಇಳಿಕೆಯಾಗಿದೆ.

ಮಾರುಕಟ್ಟೆಗೆ ಬರುತ್ತಿದೆ ಈರುಳ್ಳಿ

ಯಶವಂತಪುರ ಎಪಿಎಂಸಿಗೆ ಈ ಹಿಂದೆ ವಾರಗಳಲ್ಲಿ ನಿತ್ಯ 2,500 ಟನ್‌ ಈರುಳ್ಳಿ ಬರುತ್ತಿತ್ತು. ಇದೀಗ ಬರೋಬ್ಬರಿ ನಾಲ್ಕು ಸಾವಿರ ಟನ್‌ ಈರುಳ್ಳಿ ಬರುತ್ತಿದೆ. ಮಹಾರಾಷ್ಟ್ರದಿಂದ 2 ಸಾವಿರ ಟನ್‌ ಹಳೆಯ ಈರುಳ್ಳಿ ಬಂದರೆ, ಕರ್ನಾಟಕದ ಚಿತ್ರದುರ್ಗ, ಚಳ್ಳಕೆರೆ, ಗದಗ ಮತ್ತಿತರ ಭಾಗಗಳಿಂದ 2 ಸಾವಿರ ಟನ್‌ನಷ್ಟು ಈರುಳ್ಳಿ ಬಂದಿದೆ. ಹೀಗಾಗಿ, ಬೆಲೆ ಇಳಿಕೆಯಾಗಿದೆ ಎಂದು ಯಶವಂತಪುರ ಎಪಿಎಂಸಿ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಬಿ. ರವಿಶಂಕರ್‌ ತಿಳಿಸಿದರು.

ಬೆಲೆ ಮತ್ತಷ್ಟು ಇಳಿಕೆಯಾಗುವ ಸಾದ್ಯತೆ

ಬೆಲೆ ಸ್ವಲ್ಪ ಇಳಿಕೆಯಾಗುತ್ತಿದ್ದಂತೆಯೇ ಹಲವು ರೈತರು ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ. ಸಾಕಷ್ಟು ಈರುಳ್ಳಿ ಬರುತ್ತಿರುವುದರಿಂದ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾದ್ಯತೆಯಿದೆ. ಒಂದು ವೇಳೆ ಮಾಲು ಕಡಿಮೆಯಾದರೆ ಆಗ ಬೆಲೆ ಸ್ವಲ್ಪ ಏರಿಕೆಯಾಗಬಹುದು. ಆದರೆ, ಹೆಚ್ಚು ಬೆಲೆ ಏರುವುದಿಲ್ಲಎಂದು ಅವರು ನುಡಿದರು.

ಮಾರುಕಟ್ಟೆ ಹೊರತು ಪಡಿಸಿ ಎಷ್ಟಿದೆ ದರ?

ಚಿಲ್ಲರೆ ದರದಲ್ಲಿಈರುಳ್ಳಿ ಕೆ.ಜಿ.ಗೆ 50-60 ರೂ. ನಂತೆ ಮಾರಾಟವಾಗುತ್ತಿದೆ. ಆದರೆ, ಕೆಲವು ಮಳಿಗೆಗಳನ್ನು ದರ ತಗ್ಗಿದರೂ ಕೂಡಾ ತಮ್ಮ ಮಾರಾಟ ದರವನ್ನು ಇಳಿಕೆ ಮಾಡಲು ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಕೆಲವರು ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಮಾರುಕಟ್ಟೆಗಳು, ಹಾಪ್‌ಕಾಮ್ಸ್‌ ಮಳೆಗಗಳಲ್ಲಿ ಮಾತ್ರ ಈರುಳ್ಳಿ ದರ ಇಳಿಕೆಯಾಗಿದೆ.

ಡಿಸೆಂಬರ್‌ನಲ್ಲಿ ಮತ್ತಷ್ಟು ಅಗ್ಗ!

ಡಿಸೆಂಬರ್‌ನಲ್ಲಿ ಮತ್ತೆ ಮಹಾರಾಷ್ಟ್ರದ ಕೆಂಪು ಈರುಳ್ಳಿ ಬೆಳೆ ಕೊಯ್ಲಿಗೆ ಬರಲಿದೆ. ಜತೆಗೆ, ಗುಜರಾತ್‌, ರಾಜಸ್ಥಾನದ ಬೆಳೆಯೂ ಬರಲಿದೆ. ಮಹಾರಾಷ್ಟ್ರದ ಕೆಂಪು ಈರುಳ್ಳಿ ಹೆಚ್ಚು ದಿನ ಸಂಗ್ರಹಿಸಲು ಯೋಗ್ಯವಾದ ಈರುಳ್ಳಿಯಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿಈರುಳ್ಳಿ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

ಎಪಿಎಂಸಿಯಲ್ಲಿಈರುಳ್ಳಿ ದರ ( ಪ್ರತಿ ಕೆಜಿ)
  • ಮೊದಲ ದರ್ಜೆ ಈರುಳ್ಳಿ – 40 ರಿಂದ 50 ರೂ.
  • ಎರಡನೇ ದರ್ಜೆ ಈರುಳ್ಳಿ – 30 ರಿಂದ40 ರೂ.
  • ಮೂರನೇ ದರ್ಜೆ ಈರುಳ್ಳಿ – 20 ರಿಂದ 30 ರೂ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist