ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸೀಕ್ರೆಟ್ ಡೇಟಿಂಗ್ ವದಂತಿ ಗಳ ನಡುವೆ ಮತ್ತೆ ಒಟ್ಟೊಟ್ಟಾಗಿ ಕಾಣಿಸಿಕೊಂಡ ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್!

Twitter
Facebook
LinkedIn
WhatsApp
ಸೀಕ್ರೆಟ್ ಡೇಟಿಂಗ್ ವದಂತಿ ಗಳ ನಡುವೆ ಮತ್ತೆ ಒಟ್ಟೊಟ್ಟಾಗಿ ಕಾಣಿಸಿಕೊಂಡ ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್!

ಟೀಮ್ ಇಂಡಿಯಾ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill) ಮತ್ತು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಇಬ್ಬರು ರಹಸ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ವರದಿಯಾಗಿದೆ. ಆದರೆ ಒಟ್ಟೊಟ್ಟಿಗೆ ‌ಎಂದೂ ಕಾಣಿಸಿಕೊಂಡಿಲ್ಲ. ಹಲವು ‌ವದಂತಿಗಳ‌ ನಡುವೆ ಗಿಲ್-ಸಾರಾ‌ ಒಟ್ಟಿಗೆ‌ ಕಾಣಿಸಿಕೊಂಡು ತಮ್ಮ ಸೀಕ್ರೆಟ್ ಡೇಟಿಂಗ್ ಸುದ್ದಿ ನಿಜ ಎನ್ನುವಂತೆ ಮಾಡಿದೆ.

ಮುಂಬೈನಲ್ಲಿ ನಡೆದ ಮುಕೇಶ್ ಅಂಬಾನಿ (Mukesh Ambani) ಒಡೆತನದ ಜಿಯೋ‌ ವರ್ಲ್ಡ್ ಪ್ಲಾಜಾ (Jio world Plaza) ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿತ್ತು. ಬಾಲಿವುಡ್ ನಟರು‌ ಸೇರಿದಂತೆ ಉದ್ಯಮಿಗಳು, ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಂತೆ ಸಾರಾ ಮತ್ತು ಶುಭ್ಮನ್ ಸಹ ಭಾಗವಹಿಸಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿದೆ.

ತಲೆಮರೆಸಿಕೊಳ್ಳಲು ಯತ್ನಿಸಿದ ಗಿಲ್

ಸಾರಾ ಮತ್ತು ಗಿಲ್ ಒಟ್ಟಿಗೆ ನಡೆದುಕೊಂಡು ಬರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಕ್ಯಾಮೆರಾಗಳನ್ನು ಕಂಡ ಗಿಲ್ ಕದ್ದುಮುಚ್ಚಿ ಓಡಾಡುತ್ತಿದ್ದರು. ತನಗೇನು ತಿಳಿಯದಂತೆ ತಪ್ಪಿಸಿಕೊಳ್ಳಲು ಗಿಲ್ ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಅತ್ತಿಂದತ್ತ ಓಡಾಡಿದ್ದಾರೆ. ಮೊಬೈಲ್ ಫೋನ್ ಹಿಡಿದು ನೋಡುತ್ತಿದ್ದವರಂತೆ ಮಾಡಿದ್ದಾರೆ.

ಅಧಿಕೃತವಾಗುವುದೊಂದೇ ಬಾಕಿ

ಕೊನೆಗೂ ಈ ಇಬ್ಬರ ಪ್ರೇಮಾಂಕುರ ಇದೆ ಎಂಬುದನ್ನು ಈ ಘಟನೆ ಸಾಕ್ಷಿ ಸಮೇತ ನೀಡಿದೆ. ಹಲವು ವರ್ಷಗಳ ಕಾಲ ದೀರ್ಘ ಕಾಲದಿಂದ ಡೇಟಿಂಗ್ ನಡೆಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಿಂದ ಸುದ್ದಿ ಹರಿದಾಡುತ್ತಿದೆ‌. ಆದರೆ ಈ ಸೆಲೆಬ್ರೆಟಿಗಳು ಈ ಬಗ್ಗೆ ಅಧಿಕೃತಗೊಳಿಸಿಲ್ಲ. ಇದಕ್ಕೆ ಅಧಿಕೃತ ಮುದ್ರೆಯೊಂದೆ ಬೀಳುವುದೊಂದು ಬಾಕಿ ಉಳಿದಿದೆ. ಗಿಲ್ ಕಪ್ಪ ಬಣ್ಣದ ಜಾಕೆಟ್ ಧರಿಸಿದ್ದರೆ, ಸಾರಾ ಕೆಂಪು ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.

ಬಾಂಗ್ಲಾ ಪಂದ್ಯಕ್ಕೆ ಹಾಜರಿದ್ದ ಸಾರಾ

ಅಕ್ಟೋಬರ್ 19ರಂದು ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಸಾರಾ ತೆಂಡೂಲ್ಕರ್ ಹಾಜರಿದ್ದರು. ಈ ಪಂದ್ಯದಲ್ಲಿ ಗಿಲ್ ಅರ್ಧಶತಕ ಸಿಡಿಸಿದರು. ಗಿಲ್‌ ಬೌಂಡರಿ ಸಿಡಿಸಿದಾಗೆಲ್ಲಾ ಸಾರಾ ಚಪ್ಪಾಳೆ ತಟ್ಟುವ ಮೂಲಕ ಗಿಲ್ ಅವರನ್ನು‌ ಹುರಿದುಂಬಿಸಿದ್ದರು. ಈ ಕುರಿತ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

ವಿಶ್ವಕಪ್‌ನಲ್ಲಿ ಗಿಲ್ ಫ್ಲಾಪ್

ಹಾಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶುಭ್ಮನ್ ಗಿಲ್ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಇಡೀ ವರ್ಷ ಏಕದಿನದಲ್ಲಿ ಅಬ್ಬರಿಸಿದ ಗಿಲ್, ಡೆಂಗ್ಯೂ ಕಾರಣ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಬಳಿಕ ಕಣಕ್ಕಿಳಿದ ನಾಲ್ಕು ಪಂದ್ಯಗಳಲ್ಲಿ 26ರ ಬ್ಯಾಟಿಂಗ್ ಸರಾಸರಿಯಲ್ಲಿ 104 ರನ್ ಮಾತ್ರ ಗಳಿಸಿದ್ದಾರೆ. ಇಂದು ಶ್ರೀಲಂಕಾ ಎದುರು ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ ಯುವ ಆರಂಭಿಕ ಆಟಗಾರ.

ಸಿಕ್ತು ಸ್ಪಷ್ಟನೆ ಎಂದ ಫ್ಯಾನ್ಸ್

ಸಾರಾ-ಗಿಲ್ ವದಂತಿ ಬಗ್ಗೆ ಅಭಿಮಾನಿಗಳಿಗೆ ಈವರೆಗೂ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಒಟ್ಟಾಗಿ ಕಾಣಿಸಿಕೊಂಡ ನಂತರ ನಮಗೆ ಕ್ಲಾರಿಟಿ ಸಿಕ್ಕಿದೆ ಎಂದು ಫ್ಯಾನ್ಸ್ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಗಿಲ್ ಪ್ರೇಯಸಿ ಸಾರಾ ಎಂದು ಪೋಸ್ಟ್‌ ಹಾಕುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿತ್ತು. ಗಿಲ್ ಅದ್ಭುತ ಬ್ಯಾಟಿಂಗ್ ನಡೆಸಿದಾಗಲೆಲ್ಲಾ ಸಾರಾ ಎಕ್ಸ್​​ನಲ್ಲಿ ಪೋಸ್ಟ್​ ಮಾಡುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist