8 ತಿಂಗಳು ಗರ್ಭಿಣಿಯಾಗಿದ್ದ ಮಲಯಾಳಂ ನಟಿ ಪ್ರಿಯಾ ಹೃದಯಾಘಾತದಿಂದ ನಿಧನ!
ಕಳೆದ ಎರಡು ದಿನಗಳ ಹಿಂದೆ ರೆಂಜುಶಾ (Renjusha Menon) ಎಂಬ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ. 8 ತಿಂಗಳು ಗರ್ಭಿಣಿಯಾಗಿದ್ದ ಮಲಯಾಳಂ ನಟಿ ಪ್ರಿಯಾ ಹೃದಯಾಘಾತದಿಂದ ಇಂದು (ನ.1) ವಿಧಿವಶರಾಗಿದ್ದಾರೆ.
ವೈದ್ಯ ಪ್ರಿಯಾ (Dr.Priya) ಅವರು ಹಲವು ಸೀರಿಯಲ್ಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಕಿರುತೆರೆಯಲ್ಲಿ ಬೇಡಿಕೆಯ ನಟಿಯಾಗಿದ್ರು. ಮದುವೆಯ ಬಳಿಕ ನಟನೆಗೆ ಪ್ರಿಯಾ ಬ್ರೇಕ್ ನೀಡಿದ್ದರು. 35ನೇ ವಯಸ್ಸಿನ ಪ್ರಿಯಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಎಂದಿನಂತೆ ಹೆಲ್ತ್ ಚೆಕಪ್ಗೆ ಖಾಸಗಿ ಆಸ್ಪತ್ರೆಗೆ ಹೋದಾಗ ನಟಿಗೆ ಹೃದಯಾಘಾತವಾಗಿದೆ. ನವಜಾತ ಶಿಶುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಬ್ಬಳೇ ಮಗಳಾಗಿರುವ ಪ್ರಿಯಾಳ ಸಾವು ಕಂಡು ತಾಯಿ ಆಘಾತಕ್ಕೆ ಒಳಗಾಗಿದ್ದಾರೆ. ಇದೀಗ ಪ್ರಿಯಾ ನಿಧನಕ್ಕೆ ನಟ ಕಿಶೋರ್ ಸತ್ಯ ಸೇರಿದಂತೆ ಅನೇಕ ಕಿರುತೆರೆ ನಟ-ನಟಿಯರು ಕಂಬಿನಿ ಮಿಡಿದಿದ್ದಾರೆ.
ಯುವ ನಟಿ ರೆಂಜುಶಾ ಆತ್ಮಹತ್ಯೆ: ಕಾರಣ ತಿಳಿಸಿದ ಪತಿ
ನಿನ್ನೆಯಷ್ಟೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ನಟಿ ರೆಂಜುಶಾ ಮೆನನ್ (Renjusha Menon), ಸಾವಿನ ಬಗ್ಗೆ ಅವರ ಪತಿ, ನಿರ್ದೇಶಕರೂ ಆಗಿರುವ ಮನೋಜ್ ಶ್ರೀಲಕಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ಎಂದಿನಂತೆ ನಾನು ಬೆಳಗ್ಗೆ ಶೂಟಿಂಗ್ ಗೆ ಹೋಗಿದ್ದೆ. ರೆಂಜುಶಾಗೆ ಕರೆ ಮಾಡಿದರೂ, ಅವರು ಸ್ವೀಕರಿಸಲಿಲ್ಲ. ಅನುಮಾನ ಬಂದ ಮನೆಗೆ ಬಂದಾಗ ಅವರು ಫ್ಯಾನಿಗೆ ನೇಣು ಹಾಕಿಕೊಂಡಿದ್ದರು’ ಎಂದು ತಿಳಿಸಿದ್ದಾರೆ.
ರೆಂಜುಶಾ ಸಾವಿಗೆ ಖಿನ್ನತೆಯೇ ಕಾರಣ ಎಂದೂ ಹೇಳಲಾಗುತ್ತಿದೆ. ಸಾಲದ ಬಾಧೆ ತಾಳದೇ ಅವರು ಖಿನ್ನತೆಗೆ ಜಾರಿದ್ದರು. ಇದೇ ಅವರು ಸಾವಿಗೆ ಕಾರಣವಾಗಿರಬಹುದು ಎಂದೂ ಹೇಳಲಾಗುತ್ತಿದೆ. ಮಲಯಾಳಂ (Malayalam) ಸಿನಿಮಾ ಮತ್ತು ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ರೆಂಜುಶಾ ಮೆನನ್ ಕೇವಲ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ನಿಜಲಟ್ಟಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ರೆಂಜುಶಾ ಮೆನನ್ ಸಿನಿಮಾ ಮತ್ತು ಕಿರುತೆರೆ ಎರಡೂ ರಂಗದಲ್ಲಿ ಗುರುತಿಸಿಕೊಂಡವರು. ರೆಂಜುಶಾ ತಿರುವನಂತಪುರಂನ (Thiruvananthapuram) ಶ್ರೀಕಾರ್ಯಂನಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿದ್ದರು. ವಾಸವಿದ್ದ ಮನೆಯಲ್ಲೇ ಅವರ ಮೃತದೇಹ ಪತ್ತೆಯಾಗಿತ್ತು.
ಹಣಕಾಸಿನ ಸಮಸ್ಯೆಯಿಂದ ಅವರು ನೇಣಿಗೆ ಶರಣಾಗಿರಬಹುದು ಎಂದು ಹಲವು ಮಾಧ್ಯಮಗಳು ವರದಿ ಮಾಡಿ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಟಿಯಾಗಿ, ಲೈನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದ ರೆಂಜುಶಾ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಉತ್ತಮ ಡಾನ್ಸರ್ ಕೂಡ ಆಗಿದ್ದರು. ಸಾಕಷ್ಟು ಜನಪ್ರಯ ಶೋಗಳಲ್ಲಿ ಭಾಗಿಯಾಗಿರುವ ಹೆಗ್ಗಳಿಕೆ ಇವರದ್ದಾಗಿತ್ತು.