LPG Rate : ಎಲ್ಪಿಜಿ ಸಿಲಿಂಡರ್ ಬೆಲೆ 103ರೂ. ಏರಿಕೆ!
ತೈಲ ಕಂಪನಿಗಳು ತಿಂಗಳ ಮೊದಲ ದಿನವೇ ಶಾಕ್ ನೀಡಿವೆ. ಹೌದು, ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇದು ಹಲವರ ಜೇಬಿಗೆ ಹೊರೆ ಆಗಲಿದೆ.ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 100 ರಿಂದ 103 ರೂಪಾಯಿವರೆಗೆ ಏರಿಕೆಯಾಗಿದೆ. ಈ ಬೆಲೆ ಏರಿಕೆ ಗೃಹ ಬಳಕೆ ಸಿಲಿಂಡರ್ ಬಳಕೆದಾರರಿಗೆ ಅನ್ವಯ ಆಗಲ್ಲ.
ದರ ಏರಿಕೆ ಬೆನ್ನಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಹೊಸ ಬೆಲೆಗಳು ಇಂದಿನಿಂದಲೇ ಅನ್ವಯವಾಗಲಿವೆ. 19 ಕೆಜಿ ವಾಣಿಜ್ಯ ಬಳಕೆಯ ಸಿಲಂಡರ್ ಬೆಲೆ ದೆಹಲಿಯಲ್ಲಿ 1,833 ರೂಪಾಯಿ, ಕೋಲ್ಕತ್ತಾದಲ್ಲಿ 1,943 ರೂಪಾಯಿ, ಮುಂಬೈನಲ್ಲಿ 1,785 ರೂಪಾಯಿ ಮತ್ತು ಚೆನ್ನೈನಲ್ಲಿ 1,999 ರೂಪಾಯಿ ಆಗಿದೆ.
ಅಕ್ಟೋಬರ್ ನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳವಾಗಿತ್ತು. ಅಕ್ಟೋಬರ್ ನಲ್ಲಿ 209 ರೂಪಾಯಿವರೆಗೆ ಏರಿಕೆಯಾಗಿತ್ತು. ಈ ತಿಂಗಳು 100 ರೂಪಾಯಿ ಏರಿಕೆಯಾಗಿದೆ. ಎರಡು ತಿಂಗಳಲ್ಲಿ ಬರೋಬ್ಬರಿ 310 ರೂ.ಯಷ್ಟು ಹೆಚ್ಚಾಗಿದೆ.
ಇನ್ನು ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ ಸ್ಥಿರವಾಗಿವೆ. ಆಗಸ್ಟ್ 30ರಂದು ಕೊನೆಯ ಬಾರಿ ಗೃಹ ಬಳಕೆ ಸಿಲಿಂಡರ್ ಬೆಲೆ ಕಡಿಮೆಯಾಗಿತ್ತು.ಸದ್ಯ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 903 ರೂಪಾಯಿ, ಕೋಲ್ಕತ್ತಾದಲ್ಲಿ 929 ರೂಪಾಯಿ, ಮುಂಬೈನಲ್ಲಿ 902 ರೂಪಾಯಿ ಮತ್ತು ಚೆನ್ನೈನಲ್ಲಿ 918 ರೂಪಾಯಿ ಇದೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 905.50 ರೂಪಾಯಿ ಇದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,813 ರೂಪಾಯಿ ಇದೆ.