ಮಾರಕಾಸ್ತ್ರಗಳಿಂದ ಕೊಚ್ಚಿ ದಲಿತ ಮುಖಂಡನ ಬರ್ಬರ ಹತ್ಯೆ!
ರಾಯಚೂರು, ಅ.30: ಮಾರಕಾಸ್ತ್ರಗಳಿಂದ ಕೊಚ್ಚಿ ದಲಿತ ಮುಖಂಡನ ಬರ್ಬರ ಹತ್ಯೆ ಮಾಡಲಾಗಿದೆ (Murder). ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮದ್ಲಾಪುರ ಬಳಿ ದಲಿತ ಮುಖಂಡ (Dalit Leader) ಪ್ರಸಾದ್(40) ಹತ್ಯೆ ಮಾಡಲಾಗಿದೆ.
ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, ಮುಂಗೈ ತುಂಡರಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ರಾಯಚೂರು SP ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನ್ವಿ ತಾಲೂಕು ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.
ಬೆಂಗಳೂರಿನ ಎಲ್ಲ ವರ್ಕ್ಶಾಪ್ಗಳ ಪರಿಶೀಲನೆಗೆ ಸೂಚನೆ ನೀಡಿದ್ದೇನೆ: ರಾಮಲಿಂಗಾ ರೆಡ್ಡಿ
ಬೆಂಗಳೂರು ಅ.30: ನಗರದ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಎಸ್ವಿ ಕೋಚ್ ವರ್ಕ್ಸ್ನಲ್ಲಿ ಸಂಭವಿಸಿದ ಖಾಸಗಿ ಬಸ್ (Privet Bus) ಅಗ್ನಿ ಅವಘಡ (Fire Accident) ಸ್ಥಳಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅಗ್ನಿ ಅವಘಡದಲ್ಲಿ ಸುಮಾರು 19 ಬಸ್ಗಳು ಸುಟ್ಟು ಹೋಗಿವೆ. ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ವರ್ಕ್ಶಾಪ್ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಗರದ ಎಲ್ಲಾ ವರ್ಕ್ಶಾಪ್ಗಳ ಪರಿಶೀಲನೆಗೆ ಸೂಚನೆ ನೀಡಿದ್ದೇನೆ ಎಂದರು.
ಎಲ್ಲೇಲ್ಲಿ ಬೆಂಕಿ ಅನಾಹುತ ಆಗುವಂತಹ ಸಾಧ್ಯತೆ ಇರುತ್ತೇ, ಅಲ್ಲಿ ಎಚ್ಚರಿಕೆಯಿಂದ ಇರಬೇಕು. ಈ ಪ್ರಕರಣದಲ್ಲಿ ಮಾಲೀಕನ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಪದೇ ಪದೇ ಅಗ್ನಿ ಅವಘಡಗಳು ಆಗುತ್ತಿವೆ. ವರ್ಕ್ ಶಾಪ್ಗೆ ಲೈಸನ್ಸ್ ಬೇಕು. ವರ್ಕ್ ಶಾಪ್ ನಡೆಸುವವರು ನಿರ್ಲಕ್ಷ್ಯ ಮಾಡಿದ್ದಾರೆ. ತಪ್ಪು ಯಾರದ್ದು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಬೆಂಕಿ ನಂದಿಸುವ ಸಿಲಿಂಡರ್ ಜಾಸ್ತಿ ಇರಲಿಲ್ಲ. ಇಲ್ಲಿ ಸಾಕಷ್ಟು ಬಸ್ಗಳು ಇದ್ದರೂ ಒಳಗೆ ಪ್ರವೇಶಿಸುವ ಗೇಟ್ ಮಾತ್ರ ಇದೆ, ನಿರ್ಗಮನ ಗೇಟ್ ಇಲ್ಲ ಎಂದು ತಿಳಿಸಿದರು.
ಪೊಲೀಸರ ಪ್ರಕಾರ ವೆಲ್ಡಿಂಗ್ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂದೆ ಯಾರೇ ಆಗಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮತ್ತೆ ಇಂತಹ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳುತ್ತೇವೆ. ಅಗ್ನಿಶಾಮಕದಳ ಮತ್ತು ಪೋಲಿಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.