ಮಂಡ್ಯ ಬಿಜೆಪಿಯಿಂದ ಕಾವೇರಿಗಾಗಿ ಪಲ್ಟಿ ಚಳವಳಿ!
ಮಂಡ್ಯ: ಕಾವೇರಿ (Cauvery) ನೀರಿನ ವಿಚಾರದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರದ ಧೋರಣೆಯಿಂದ ಹಾಗೂ ಕೋರ್ಟ್‌ನ ಆದೇಶದಿಂದ ರೈತರು ಪಲ್ಟಿ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಇಂದು (ಶುಕ್ರವಾರ) ಮಂಡ್ಯದಲ್ಲಿ (Mandya) ಬಿಜೆಪಿ (BJP) ಕಾರ್ಯಕರ್ತರು ಪಲ್ಟಿ ಚಳವಳಿ (Palti Movement) ನಡೆಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು 53ನೇ ದಿನದ ಕಾವೇರಿ ಹೋರಾಟದ ಪ್ರಯುಕ್ತ ಪಲ್ಟಿ ಚಳವಳಿ ಮಾಡುವ ಮೂಲಕ ಸರ್ಕಾರವನ್ನು ಗಮನ ಸೆಳೆಯಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಸದ್ಯ ಕೆಆರ್‌ಎಸ್ ಅಣೆಕಟ್ಟಿನಲ್ಲಿ 100 ಅಡಿಗಿಂತ ಕಡಿಮೆ ನೀರು ಇದೆ. ಹೀಗಿದ್ದರೂ ಸಹ ತಮಿಳುನಾಡಿಗೆ ನೀರು ಬಿಡಲು ಸರ್ಕಾರ ಸಮ್ಮತಿ ನೀಡುತ್ತಾ ಇದೆ. ಇತ್ತ ಕೋರ್ಟ್ ತಮಿಳುನಾಡಿಗೆ ನೀರು ಬಿಡಿ ಎಂದು ಮಂಡ್ಯ ರೈತರನ್ನು ಪಲ್ಟಿ ಹೊಡೆಸುತ್ತಿದೆ.
ಇದಕ್ಕೆ ವಿಡಂಬನೆ ಮಾಡಲು ಬಿಜೆಪಿ ಕಾರ್ಯಕರ್ತರು ಪಲ್ಟಿ ಹೊಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ನೀರು ನಿಲ್ಲಿಸಲು ಮನವಿ ಪತ್ರ ನೀಡಿದರು.
ವಿದ್ಯಾರ್ಥಿನಿ ಮೇಲೆ ಆಸಿಡ್ – ಮುಖ್ಯಶಿಕ್ಷಕ ಅಮಾನತು
ಚಿತ್ರದುರ್ಗ: ವಿದ್ಯಾರ್ಥಿನಿ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ ಶಾಲೆಯ (School) ಮುಖ್ಯಶಿಕ್ಷಕನ್ನು (Teacher) ಡಿಡಿಪಿಐ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜೋಡಿಚಿಕ್ಕೇನಹಳ್ಳಿಯ ಸರ್ಕಾರಿ ಪ್ರಾಥಾಮಿಕ ಶಾಲೆಯಲ್ಲಿ ಅ.25 ರಂದು ಶಾಲಾ ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದರು. ಈ ವೇಳೆ 2ನೇ ತರಗತಿ ವಿದ್ಯಾರ್ಥಿನಿ ಒಬ್ಬಳ ಮೇಲೆ ಮುಖ್ಯಶಿಕ್ಷಕ ರಂಗಸ್ವಾಮಿ ಆಸಿಡ್ ಎರಚಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆಯಿಂದಾಗಿ ಬಾಲಕಿಯ ಬೆನ್ನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ.
ಈ ಸಂಬಂಧ ಪೋಷಕರು ಹಾಗೂ ಗ್ರಾಮಸ್ಥರು ಮುಖ್ಯ ಶಿಕ್ಷಕನ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಡಿಡಿಪಿಐ ರವಿಶಂಕರ್ ರೆಡ್ಡಿಯವರು ಮುಖ್ಯಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ.
ಈ ಸಂಬಂಧ ಶಾಲೆಯ ಮುಖ್ಯಶಿಕ್ಷಕ ರಂಗಸ್ವಾಮಿ ವಿರುದ್ಧ ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.