Rachita Ram :ರಚಿತಾ ರಾಮ್ ಟ್ಯಾಟೋ ಅನ್ನು ಬೆನ್ನ ಮೇಲೆ ಹಾಕಿಸಿಕೊಂಡ ಅಭಿಮಾನಿ!
ತಮ್ಮ ನೆಚ್ಚಿನ ನಟರ ಟ್ಯಾಟೊಗಳನ್ನು (Tatto) ದೇಹದ ಮೇಲೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಅಭಿಮಾನಿ ರಚಿತಾ ರಾಮ್ (Rachita Ram) ಟ್ಯಾಟೋ (Fans) ಅನ್ನು ಬೆನ್ನ ಮೇಲೆ ಹಾಕಿಸಿಕೊಂಡಿದ್ದಾರೆ. ಅದಕ್ಕೆ ನಮ್ಮನೆ ದೇವರು ಎಂದು ಬರೆಯಿಸಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಡಿಂಪಲ್ ಕ್ವೀನ್ ಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಹಲವಾರು ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡಿರುವ ಕಾರಣದಿಂದಾಗಿ ಅವರೆಲ್ಲರ ಅಭಿಮಾನಿಗಳು ಕೂಡ ರಚಿತಾ ಅವರನ್ನು ಆರಾಧಿಸುತ್ತಾರೆ. ಹೀಗಾಗಿಯೇ ಡಿಂಪಲ್ ಅಂದರೆ, ಅನೇಕ ಅಭಿಮಾನಿಗಳಿಗೆ ಗೌರವ. ಆ ಗೌರವದ ಕಾರಣದಿಂದಾಗಿಯೇ ಟ್ಯಾಟೋ ಹಾಕಿಸಿಕೊಂಡಿದ್ದಾರೆ.
ಈ ಹಿಂದೆ ಟ್ಯಾಟೋ ಹಾಕಿಸಿಕೊಳ್ಳಬೇಡಿ ಎಂದು ಅನೇಕ ಕಲಾವಿದರು ಹೇಳಿದ್ದರು. ತಮ್ಮ ಅಭಿಮಾನಿಗಳು ಟ್ಯಾಟೋ ಹಾಕಿಸಿಕೊಂಡರು ಎನ್ನುವ ಕಾರಣದಿಂದಾಗಿ ಸ್ವತಃ ದರ್ಶನ್ ಅವರು ಅಭಿಮಾನಿಗಳ ಟ್ಯಾಟೋ ಅನ್ನು ತಮ್ಮ ದೇಹದ ಮೇಲೆ ಬರೆಯಿಸಿಕೊಂಡು ಹೊಸ ಸಂಪ್ರಯದಾಯಕ್ಕೆ ನಾಂದಿ ಹಾಡಿದರು. ಅದು ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ಸಿನಿಮಾಗಳ ಜೊತೆ ಜೊತೆಗೆ ರಿಯಾಲಿಟಿ ಶೋಗಳಲ್ಲೂ ರಚಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಅಭಿಮಾನಿಗಳು ಮಾತ್ರವಲ್ಲ, ಕಿರುತೆರೆಯ ಪ್ರೇಕ್ಷಕರು ಕೂಡ ಅಭಿಮಾನಿಗಳಾಗಿ ಸೇರ್ಪಡೆ ಆಗಿದ್ದಾರೆ. ಹಾಗಾಗಿ ರಚಿತಾಗೆ ಡಬಲ್ ಸಂಭ್ರಮ ದೊರೆಯುತ್ತಿದೆ.