ಬುಧವಾರ, ಜನವರಿ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಹಮಾಸ್ ಉಗ್ರರ ಮೇಲೆ ಇಸ್ರೇಲ್ ಭೀಕರ ದಾಳಿ ; ಗಾಜಾ ಪಟ್ಟಿ ಬಳಿ 1500 ಉಗ್ರರ ಶವ ಪತ್ತೆ!

Twitter
Facebook
LinkedIn
WhatsApp
ಹಮಾಸ್ ಉಗ್ರರ ಮೇಲೆ ಇಸ್ರೇಲ್ ಭೀಕರ ದಾಳಿ ; ಗಾಜಾ ಪಟ್ಟಿ ಬಳಿ 1500 ಉಗ್ರರ ಶವ ಪತ್ತೆ!

Israel-Hamas war updates: ಹಮಾಸ್‌ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್‌ ಭೀಕರ ದಾಳಿ ಮಾಡುತ್ತಿದೆ. ಗಾಜಾ ಪಟ್ಟಿಯಲ್ಲಿ ಬಾಂಬುಗಳ ಸುರಿಮಳೆಗೈಯುತ್ತಿದೆ. ಹಮಾಸ್‌ ಉಗ್ರರ ಅಡಗುದಾಣಗಳನ್ನು ನಿರ್ನಾಮ ಮಾಡುತ್ತಿದೆ. ಇದೇ ವೇಳೆ, ಗಾಜಾ ಪಟ್ಟಿ ಬಳಿ 1,500 ಹಮಾಸ್ ಉಗ್ರರ ಶವ ಪತ್ತೆಯಾಗಿದೆ ಎಂದು ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ.
ಗಾಜಾದಲ್ಲಿ ಹಮಾಸ್ ಉಗ್ರರನ್ನು ಗುರಿಯಾಗಿಸಿ ಭಾರಿ ಪ್ರಮಾಣದಲ್ಲಿ ವಾಯು ಮತ್ತು ಫಿರಂಗಿ ಬಾಂಬ್ ದಾಳಿಗಳನ್ನು ಇಸ್ರೇಲ್‌ ನಡೆಸುತ್ತಿದೆ ಎಂದು ವರದಿಯಾಗಿದೆ.
ಗಾಜಾ ಪಟ್ಟಿಯ ಸುತ್ತ ಸುಮಾರು 1,500 ಹಮಾಸ್ ಉಗ್ರರ ಶವಗಳು ಪತ್ತೆಯಾಗಿವೆ ಎಂದು ಸೈನ್ಯವು ಮಂಗಳವಾರ ತಿಳಿಸಿದೆ.

‘ಗಾಜಾ ಪಟ್ಟಿಯ ಸುತ್ತ ( ಇಸ್ರೇಲ್‌ ಒಳಗೆ ) ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ’ ಎಂದು ಮಿಲಿಟರಿ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗಾಜಾದೊಂದಿಗೆ ಅಂಟಿಕೊಂಡಿರುವ ಗಡಿಯ ಮೇಲೆ ಇಸ್ರೇಲ್‌ ನಿಯಂತ್ರಣ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.
‘ಕಳೆದ ರಾತ್ರಿಯಿಂದ ಯಾರೂ ಒಳಗೆ ಬಂದಿಲ್ಲವೆಂಬುದ ನನಗೆ ಗೊತ್ತಾಗಿದೆ. ಆದರೆ ಒಳನುಸುಳುವಿಕೆಗಳು ಇನ್ನೂ ಸಂಭವಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಗಡಿಯ ಸುತ್ತಲಿನ ಎಲ್ಲಾ ಸಮುದಾಯಗಳ ಸ್ಥಳಾಂತರ ಪ್ರಕ್ರಿಯೆಯನ್ನು ಸೇನೆಯು ಬಹುತೇಕ ಪೂರ್ಣಗೊಳಿಸಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಶನಿವಾರ ಬೆಳಿಗ್ಗೆ ರಾಕೆಟ್ ಮೂಲಕ ಗುಂಡಿನ ದಾಳಿಯನ್ನು ಹಮಾಸ್‌ ಉಗ್ರರು ಇಸ್ರೇಲ್‌ನಲ್ಲಿ ಆರಂಭಿಸಿದರು. ಗಡಿಗಳ ಮೂಲಕ ನುಗ್ಗಿರುವ ಹಮಾಸ್‌ ಉಗ್ರರು ಇಸ್ರೇಲ್‌ನಲ್ಲಿ ಈ ವರೆಗೂ 900 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ. ಹಮಾಸ್ ಉಗ್ರರ ಮಾರಣಾಂತಿಕ ದಾಳಿಗೆ ಇಸ್ರೇಲ್ ತತ್ತರಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳ ಮೇಲೆ ಬೃಹತ್ ವಾಯು ಮತ್ತು ಫಿರಂಗಿ ಬಾಂಬ್ ದಾಳಿಯನ್ನು ಇಸ್ರೇಲ್‌ ನಡೆಸುತ್ತಿದೆ.

ಗಾಜಾದಲ್ಲಿ 1,00,000 ಕ್ಕೂ ಹೆಚ್ಚು ಜನರ ಸ್ಥಳಾಂತರ

ವಿಶ್ವಸಂಸ್ಥೆ ಪ್ರಕಾರ, ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. ಮನೆಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳ ಮೇಲೆ ಶೆಲ್ ದಾಳಿಗಳು ನಡೆದಿವೆ. ಗಾಜಾದಲ್ಲಿ ಈ ವರೆಗೂ ಸುಮಾರು 1,23,538 ಜನರನ್ನು ಸ್ಥಳಾಂತರ ಮಾಡಲಾಗಿದೆ.
ನಾಗರಿರಕರನ್ನು ತಮ್ಮ ಮನೆಗಳಿಂದ ಪಲಾಯನ ಮಾಡವಂತೆ ಅಲ್ಲಿನ ಆಡಳಿತ ಸೂಚಿಸಿದೆ. ಅನೇಕರು ಕರಾವಳಿ ತೀರದಲ್ಲಿರುವ ಸುಮಾರು 64 ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಯುಎನ್ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ತನ್ನ ಇತ್ತೀಚಿನ ಮಾಹಿತಿಯಲ್ಲಿ ತಿಳಿಸಿದೆ.

ಇಸ್ರೇಲಿ ದಾಳಿಯಲ್ಲಿ ನಾಶವಾದ ಕಟ್ಟಡಗಳು ಬಹುತೇಕ ವಸತಿ ಘಟಕಗಳಾಗಿವೆ. ಬಹು ಮಹಡಿ ಕಟ್ಟಡಗಳನ್ನೇ ಇಸ್ರೇಲ್‌ ನಾಶಪಡಿಸುತ್ತಿದೆ. ಈ ವರೆಗೆ ಒಟ್ಟು 159 ವಸತಿ ಘಟಕಗಳು ನಾಶವಾಗಿವೆ. 1,210 ಕಟ್ಟಡಗಳು ತೀವ್ರ ಹಾನಿಯನ್ನು ಅನುಭವಿಸಿವೆ ಎಂಬ ಮಾಹಿತಿಯನ್ನು ಯುಎನ್ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ನೀಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist