Gold Rate : ಸತತ ಇಳಿಕೆ ಕಂಡ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ - ಬೆಳ್ಳಿಯ ದರದ ಅಪ್ಡೇಟ್ಸ್
ಬೆಂಗಳೂರು, ಸೆಪ್ಟೆಂಬರ್ 28: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇಳಿಕೆ (Gold and silver Rates) ಇನ್ನಷ್ಟು ಮುಂದುವರಿದಿದೆ. ಭಾರತ ಮತ್ತು ವಿಶ್ವದ ಬಹುತೇಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯಲ್ಲೂ ಸಾಕಷ್ಟು ಕಡಿಮೆ ಆಗಿದೆ. ಕಳೆದ ಕೆಲ ತಿಂಗಳುಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಸತತವಾಗಿ ಏರಿಳಿತ ಕಾಣುತ್ತಿದೆ. ದಿಢೀರ್ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಕಳೆದ ಒಂದು ವರ್ಷದಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಸದ್ಯ ನಿರಾಸೆಯಾಗಿರಬಹುದು. ಆದರೆ, ಚಿನ್ನದ ಆಭರಣ ಖರೀದಿಸುವವರಿಗೆ ಇದಿನ್ನೂ ಸಕಾಲವೇ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,420 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,300 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 28ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,450 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 742 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,450 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,500 ರೂ
- ಚೆನ್ನೈ: 54,800 ರೂ
- ಮುಂಬೈ: 54,500 ರೂ
- ದೆಹಲಿ: 54,650 ರೂ
- ಕೋಲ್ಕತಾ: 54,500 ರೂ
- ಕೇರಳ: 54,500 ರೂ
- ಅಹ್ಮದಾಬಾದ್: 54,550 ರೂ
- ಜೈಪುರ್: 54,650 ರೂ
- ಲಕ್ನೋ: 54,650 ರೂ
- ಭುವನೇಶ್ವರ್: 54,500 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,830 ರಿಂಗಿಟ್ (49,938 ರುಪಾಯಿ)
- ದುಬೈ: 2,125 ಡಿರಾಮ್ (48,127 ರುಪಾಯಿ)
- ಅಮೆರಿಕ: 585 ಡಾಲರ್ (48,654 ರುಪಾಯಿ)
- ಸಿಂಗಾಪುರ: 810 ಸಿಂಗಾಪುರ್ ಡಾಲರ್ (49,136 ರುಪಾಯಿ)
- ಕತಾರ್: 2,200 ಕತಾರಿ ರಿಯಾಲ್ (50,189 ರೂ)
- ಓಮನ್: 231.50 ಒಮಾನಿ ರಿಯಾಲ್ (50,015 ರುಪಾಯಿ)
- ಕುವೇತ್: 183 ಕುವೇತಿ ದಿನಾರ್ (49,227 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,300 ರೂ
- ಚೆನ್ನೈ: 7,700 ರೂ
- ಮುಂಬೈ: 7,420 ರೂ
- ದೆಹಲಿ: 7,420 ರೂ
- ಕೋಲ್ಕತಾ: 7,420 ರೂ
- ಕೇರಳ: 7,700 ರೂ
- ಅಹ್ಮದಾಬಾದ್: 7,420 ರೂ
- ಜೈಪುರ್: 7,420 ರೂ
- ಲಕ್ನೋ: 7,420 ರೂ
- ಭುವನೇಶ್ವರ್: 7,700 ರೂ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)