ವೆಂಟಿಲೇಟರ್ನಲ್ಲಿ ಶಾರುಖ್ ಖಾನ್ ನ ‘ಜವಾನ್’ ಸಿನೆಮಾ ನೋಡಲು ಬಂದ ವಿಕಲಾಂಗ..!

ಅಭಿಮಾನಿಗಳು ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಮೇಲಿನ ಪ್ರೀತಿಯನ್ನು ತೋರಿಸುವಾಗ ಮಿತಿಮೀರಿ ಹೋಗುತ್ತಾರೆ ಮತ್ತು ಆಗಾಗ್ಗೆ ಅವರ ಹೆಸರು ಅಥವಾ ಮುಖವನ್ನು ಅವರ ದೇಹದ ಮೇಲೆ ಹಚ್ಚೆ ಹಾಕುವ ಮಟ್ಟಕ್ಕೆ ಹೋಗುತ್ತಾರೆ. ಅದರಲ್ಲೂ ಶಾರೂಖ್ಗೆ ಇರುವ ಫ್ಯಾನ್ ಬೇಸ್ ತುಂಬಾ ದೊಡ್ಡದು, ಸಿನಿರಂಗದ ಎಲ್ಲಾ ಭಾಷೆಯಲ್ಲೂ ಶಾರುಖ್ ಖಾನ್ಗೆ ಫ್ಯಾನ್ ಫಾಲೋವರ್ಸ್ ಇದ್ದಾರೆ.
ಇದೀಗ ವೆಂಟಿಲೇಟರ್ನಲ್ಲಿದ್ದರೂ ತನ್ನ ಪ್ರೀತಿಯ ನಟನ ‘ಜವಾನ್’ ಸಿನೆಮಾ ನೋಡಲು ದಿವ್ಯಾಂಗ ವ್ಯಕ್ತಿಯೊಬ್ಬರು ಥಿಯೇಟರ್ ಕಡೆಗೆ ಮುಖ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Xನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನ ಸಾಕಷ್ಟು ಮಂದಿ ರೀ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ದಿವ್ಯಾಂಗವುಳ್ಳ ಅನೀಸ್ ಫಾರೂಕಿ ಎಂಬ ಶಾರುಖ್ ಖಾನ್ ಅಭಿಮಾನಿ ವೆಂಟಿಲೇಟರ್ನಲ್ಲಿದ್ದರೂ ತನ್ನ ಪ್ರೀತಿಯ ನಟನ ‘ಜವಾನ್’ ಸಿನೆಮಾ ನೋಡಲು ಥಿಯೇಟರಿಗೆ ಹೋಗಿದ್ದ ವಿಡಿಯೋ ಇದೀಗ ವೈರಲ್ ಆಗಿದೆ. ಗಾಲಿಕುರ್ಚಿಯಲ್ಲಿ ಅವಶ್ಯಕ ಚಿಕಿತ್ಸಾ ಸಾಧನಗಳೊಂದಿಗೆ ಅನೀಸ್ ಬರೋದನ್ನ ಕಾಣಬಹುದು.
ವಿಡಿಯೋ ನೋಡಿದ ನೆಟ್ಟಿಗರು ಈತನ ಆಸ್ಥೆ, ಅಭಿಮಾನದ ಪಾರಕ್ಕೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಅನೀಸ್ ಬೇಗ ಗುಣಮುಖಹೊಂದಲಿ ಎಂದು ಹಾರೈಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಲಠಾದ ಈ ವಿಡಿಯೋ ಅನ್ನು ಈತನಕ 1.3 ಲಕ್ಷ ಜನರು ನೋಡಿದ್ದಾರೆ. ಸುಮಾರು 4,000 ಲೈಕ್ ಮಾಡಿದ್ದಾರೆ. 805 ಜನರು ರೀಪೋಸ್ಟ್ ಮಾಡಿದ್ದಾರೆ.
ಸ್ಟೇಜ್ ಮೇಲೆ ನಿರೂಪಕಿ ಜೊತೆ ಅನುಚಿತವಾಗಿ ವರ್ತಿಸಿದ ನಟ ಕೂಲ್ ಸುರೇಶ್; ಮುಂದೇನಾಯ್ತು?
ತಮಿಳು ನಟ ಕೂಲ್ ಸುರೇಶ್ ವಿವಾದವೊಂದನ್ನು ಸುಖಾಸುಮ್ಮನೆ ಮೈಮೇಲೆ ಎಳೆದುಕೊಂಡಿದ್ದಾರೆ. ‘ಸರಕ್ಕು’ ಸಿನಿಮಾದ ಪ್ರೆಸ್‌ಮೀಟ್ ವೇಳೆ ಭಾಗಿಯಾಗಿದ್ದ ಅವರು, ಆ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ನಿರೂಪಕಿ ಐಶ್ವರ್ಯಾ ರಘುಪತಿ ಜೊತೆಗೆ ಅನುಚಿತವಾಗಿ ವರ್ತಿಸಿ, ಸುದ್ದಿಯಾಗಿದ್ದಾರೆ. ಸುರೇಶ್ ತೋರಿದ ಈ ಅಸಭ್ಯ ವರ್ತನೆ ಕಂಡು ಅಲ್ಲಿದ್ದವರು ಬೇಸರ ವ್ಯಕ್ತಪಡಿಸಿದ್ದಾರೆ. ಅತ್ತ ಸುರೇಶ್ ವರ್ತನೆಗೆ ನಿರೂಪಕಿ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಸರಕ್ಕು’ ಸಿನಿಮಾದ ಕಾರ್ಯಕ್ರಮಕ್ಕೆ ಹಿರಿಯ ನಟ ಮನ್ಸೂರ್ ಅಲಿ ಖಾನ್ ಸೇರಿದಂತೆ ಅನೇಕರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು. ಆಗ ಅಲ್ಲಿಯೇ ಇದ್ದ ನಟ ಕೂಲ್ ಸುರೇಶ್, ಎಲ್ಲರಿಗೂ ಹಾರ ಹಾಕಿ ಸ್ವಾಗತ ಮಾಡಲಾಗಿದೆ, ನಮ್ಮನ್ನೆಲ್ಲ ಇಷ್ಟೊಂದು ಚೆಂದವಾಗಿ ಹೊಗಳಿ, ಸ್ವಾಗತ ಮಾಡುತ್ತಿರುವ ಇವರಿಗೆ (ನಿರೂಪಕಿ) ಹಾರ ಹಾಕಿಲ್ಲ..’ ಎನ್ನುತ್ತ ನಿರೂಪಕಿಗೆ ಹೂವಿನ ಹಾರವನ್ನು ಹಾಕಿಯೇ ಬಿಟ್ಟರು. ನಟನ ಈ ವರ್ತನೆಯಿಂದ ನಿರೂಪಕಿ ಮುಜುಗರಕ್ಕೆ ಒಳಗಾದರು. ತಕ್ಷಣವೇ ಹಾರನ್ನು ಕಿತ್ತೆಸೆದರು. ಜೊತೆಗೆ ಕೂಲ್ ಸುರೇಶ್ ಮೇಲೆ ಅಸಮಾಧಾನ ಹೊರಹಾಕಿದರು.
ಇದನ್ನೆಲ್ಲ ಗಮನಿಸಿದ ನಟ ಮನ್ಸೂರ್ ಅಲಿ ಖಾನ್, ‘ಕೂಲ್ ಸುರೇಶ್ ತಪ್ಪು ಮಾಡಿದ್ದಾರೆ. ಅವರ ಈ ವರ್ತನೆ ನನಗೆ ಆಘಾತವಾಯಿತು. ನಾನು ಅವರ ಪರವಾಗಿ ಕ್ಷಮೆಯಾಚಿ ಕೇಳುತ್ತಿದ್ದೇನೆ..’ ಎಂದು ಹೇಳಿ, ನಟ ಕೂಲ್ ಸುರೇಶ್‌ಗೆ ‘ಬಹಿರಂಗವಾಗಿ ಕ್ಷಮೆ ಕೇಳು..’ ಅಂತ ತಾಕೀತು ಮಾಡಿದರು. ನಡೆದ ಘಟನೆ ಬಗ್ಗೆ ಕೂಲ್ ಸುರೇಶ್ ಸ್ಪಷ್ಟನೆ ನೀಡುವುದಕ್ಕೆ ಮುಂದಾದರು, ಆಗ, ‘ಯಾವುದೇ ಸ್ಪಷ್ಟನೆ ಬೇಕಾಗಿಲ್ಲ, ನೇರವಾಗಿ ಕ್ಷಮೆ ಕೇಳು’ ಎಂದು ನಟ ಮನ್ಸೂರ್ ಗಟ್ಟಿ ಧ್ವನಿಯಲ್ಲಿ ಆದೇಶಿಸಿದರು. ‘ತಂಗಿ ನನ್ನನ್ನು ಕ್ಷಮಿಸಿಬಿಡು..’ ಎಂದು ಬಹಿರಂಗವಾಗಿ ಹೇಳಿದರು ನಟ ಕೂಲ್ ಸುರೇಶ್. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ದೃಶ್ಯಗಳು ವೈರಲ್ ಆಗಿವೆ.
ನಟ ಕೂಲ್ ಸುರೇಶ್ ಕಳೆದ 22 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದಾರೆ. ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಘಟನೆಯಿಂದ ಕೂಲ್ ಸುರೇಶ್ ವಿರುದ್ಧ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತಂತೆ ವಿಡಿಯೋ ಮೂಲಕ ಮತ್ತೊಮ್ಮೆ ಕ್ಷಮೆಯನ್ನು ಕೂಲ್ ಸುರೇಶ್ ಕೇಳಿದ್ದಾರೆ. ‘ನಾನು ಆ ಪ್ರೆಸ್‌ಮೀಟ್‌ನಲ್ಲಿ ನಿರೂಪಕಿಗೆ ಮಾಲೆ ಹಾಕಬಾರದಾಗಿತ್ತು, ಅದು ತಪ್ಪು. ನಾನೇನೋ ತಮಾಷೆ ಮಾಡಲು ಹೋದೆ, ಅದು ಈ ರೀತಿ ಆಯಿತು. ಈಗ ಸೋಶಿಯಲ್ ಮೀಡಿಯಾದಲ್ಲೆಲ್ಲ ಅದು ಭಾರಿ ಸುದ್ದಿಯಾಗುತ್ತಿದೆ. ನನಗೇ ಒಂಥರಾ ಸಂಕಟ ಆಗುತ್ತಿದೆ. ಆ ನಿರೂಪಕಿಯ ಹೆಸರು ನನಗೆ ಗೊತ್ತಿಲ್ಲ, ಅವರಲ್ಲಿ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೇನೆ’ ಎಂದು ಕೂಲ್ ಸುರೇಶ್ ಹೇಳಿದ್ದಾರೆ.