KSRTC ಬಸ್ ಡಿಕ್ಕಿ: ಬೈಕ್ ಸವಾರರಿಬ್ಬರು ಸಾವು
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 17: ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಿಸಲಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರು ಮೂಲದ ಕೀರ್ತಿ(25), ಆತನ ಸ್ನೇಹಿತ ಮೃತರು. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಲಗಿದ್ದಲ್ಲೇ ಅಸುನೀಗಿದ ಲಾರಿ ಚಾಲಕ:
ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ತಮಿಳುನಾಡಿನ ರಾಜೇಂದ್ರ ಚೋಜಾನ್ ಕಲಿಯಾಪೆರುಮಾಳ (41) ಸಾವನ್ನಪ್ಪಿದ ಚಾಲಕ. ತಮಿಳುನಾಡಿನಿಂದ ರಾಯಾಪುರದ ಕೃಷ್ಣ ವೇರ್ಹೌಸ್ಗೆ ವಾಷಿಂಗ್ ಮಶಿನ್ ಬಿಡಿ ಭಾಗಗಳನ್ನು ಈ ಚಾಲಕ ತಂದಿದ್ದ. ರಾತ್ರಿ ಲಾರಿಯಲ್ಲಿ ಮಲಗಿದ್ದ ಚಾಲಕನಿಗೆ ಅಲ್ಲೇ ಹೃದಯಾಘಾತವಾಗಿದೆ.
ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆ ನಂತರ ಶವವನ್ನು ತಮಿಳುನಾಡಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಭೀಕರ ಅಪಘಾತ – ಮಾಜಿ ಸೈನಿಕ ಸಾವು, ನಾಲ್ವರಿಗೆ ಗಂಭೀರ ಗಾಯ
ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ (Expressway) ಭೀಕರ ಅಪಘಾತ ಸಂಭವಿಸಿದ ಪರಿಣಾಮ ಅಪಘಾತದಿಂದ ಸ್ಥಳದಲ್ಲಿ ಮಾಜಿ ಸೈನಿಕರೊಬ್ಬರು ಸಾವನ್ನಪ್ಪಿದ್ದು, ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿದೆ.
ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ನಗುವಿನಹಳ್ಳಿ ಬಳಿಯ ಎಕ್ಸ್ಪ್ರೆಸ್ ವೇಯಲ್ಲಿ ಭಾನುವಾರ ಬೆಳಗ್ಗೆ 6:30ರ ವೇಳೆಯಲ್ಲಿ ಈ ಘಟನೆ ಜರುಗಿದೆ. ಆನೇಕಲ್ (Anekal) ಮೂಲದ ಮಾಜಿ ಸೈನಿಕ ಕಿಶೋರ್ ಬಾಬು (45) ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಆನೇಕಲ್ನಿಂದ ತಮಿಳುನಾಡಿಗೆ ಎಕ್ಸ್ಯುವಿ (XUV) ಮಹೇಂದ್ರ ಕಾರಿನಲ್ಲಿ ಕಿಶೋರ್ ಹಾಗೂ ನಾಲ್ವರು ಹೋಗುತ್ತಿದ್ದರು. ಈ ವೇಳೆ ನಗುವಿನಹಳ್ಳಿ ಬಳಿ ಭೀಕರ ಅಪಘಾತ (Accident) ನಡೆದಿದೆ.
ಅತಿ ವೇಗವಾಗಿ ಬರುತ್ತಿದ್ದ ಮಹೇಂದ್ರ ಕಾರು ನಿಯಂತ್ರಣ ತಪ್ಪಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಲ್ಟಿ ಹೊಡೆದಿದ್ದು, ಸ್ಥಳದಲ್ಲಿಯೇ ಕಿಶೋರ್ ಸಾವನ್ನಪ್ಪಿದ್ದಾರೆ. ನಂತರ ಇದ್ದಕ್ಕಿದ್ದಂತೆ ಕಾರು ಹೊತ್ತಿ ಉರಿದಿದ್ದು, ಬಳಿಕ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಪಘಾತದಲ್ಲಿ ಕಾರಿನಲ್ಲಿದ್ದ ಉಳಿದ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ (Mysuru) ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಈ ಸಂಬಂಧ ಪ್ರಕರಣ ದಾಖಲಾಗಿದೆ.