ಕೇಂದ್ರ ಸಚಿವರ ಟ್ವೀಟ್ ನಿಂದ ಪ್ರಖ್ಯಾತಿ ಗಳಿಸಿದ್ಳ ಚೈತ್ರ? ಹಳೆ ಟ್ವೀಟ್ ವೈರಲ್..!

ಈ ಮಧ್ಯೆ ವಂಚಕಿ ಚೈತ್ರಾ ಕುಂದಾಪುರಳ ಹಿನ್ನೆಲೆ ಬಗ್ಗೆಯೂ ಅನೇಕ ಮಂದಿ ಕೆದಕುತ್ತಿದ್ದಾರೆ. ಆಕೆ ಪ್ರಸಿದ್ಧಿ ಹೊಂದಿದ್ದು ಹೇಗೆ? ಆಕೆಯ ಹಿನ್ನೆಲೆ ಏನು? ಇಷ್ಟು ದೊಡ್ಡ ಮಟ್ಟಿಗೆ ಫಾಲೋವರ್ಸ್ ಹೊಂದಲು ಕಾರಣವೇನು ಅನ್ನೋದರ ಬಗ್ಗೆ ಜನರು ಹುಡುಕಾಟ ನಡೆಸುತ್ತಿದ್ದಾರೆ.
ಹೀಗಾಗಿ ಚೈತ್ರಾ ಕುಂದಾಪುರಳನ್ನು ಪ್ರಖ್ಯಾತಿಗೆ ತಂದಿದ್ದ ಹಳೇ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಉಡುಪಿಯ ಬೀದಿಯಲ್ಲಿ ರಾದ್ಧಾಂತ ಎಬ್ಬಿಸಿದ್ದ ಚೈತ್ರಾ ಕುಂದಾಪುರ ಆ ಟ್ವೀಟ್ ಮೂಲಕವೇ ಪ್ರಖ್ಯಾತಿ ಗಳಿಸಿದ್ಳು ಎಂದು ಹೇಳಲಾಗ್ತಿದೆ.
ಕೇಂದ್ರ ಸಚಿವೆ ಮಾಡಿದ್ದ ಆ ಟ್ವೀಟ್‌ನಿಂದ ಪ್ರವರ್ಧಮಾನಕ್ಕೆ ಬಂದಿದ್ದ ಚೈತ್ರಾ ಕುಂದಾಪುರ, ಆ ಬಳಿಕ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ.

2018ರಲ್ಲಿ ನಡೆದ ಕಾಂಗ್ರೆಸ್, ಎಡಪಕ್ಷಗಳ ಭಾರತ್ ಬಂದ್ ವಿರೋಧಿಸಿದ್ದ ಚೈತ್ರಾ ಕುಂದಾಪುರ, ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಜಗಳಕ್ಕಿಳಿದಿದ್ದಳು. ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದಳು.
ಅಂದ ಹಾಗೆ, 2018 ರಲ್ಲಿ ನಡೆದ ಈ ಪ್ರತಿಭಟನೆ ವೇಳೆ ಚೈತ್ರಾ ಡೇರಿಂಗ್ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಟ್ವೀಟ್ ಮಾಡಿದ್ದರು. ಚೈತ್ರಾ ಕುಂದಾಪುರಳನ್ನು ‘ಡೇರಿಂಗ್ ಗರ್ಲ್’ ಎಂದು ಕರೆದಿದ್ದರು. ಇದು ಆಕೆಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತ್ತು.
ಇದು ಅಂದು ನಿರ್ಮಲಾ ಸೀತಾರಾಮನ್ ಮಾಡಿದ್ದ ಟ್ವೀಟ್
ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದ ಚೈತ್ರಾ ಕುಂದಾಪುರ, ಕಾಂಗ್ರೆಸ್ ವಿರುದ್ಧ ಒಬ್ಬಂಟಿಯಾಗಿ ಮಾಡಿದ ಹೋರಾಟದ ವೀಡಿಯೋ ಭಾರೀ ಸದ್ದು ಮಾಡಿತ್ತು. ಇದು ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿತ್ತು.
ಅಲ್ಲದೇ, ನರೇಂದ್ರ ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಅಂದು ಅಬ್ಬರಿಸಿದ್ದಳು. ಜೊತೆಗೆ ನಿರ್ಮಲಾ ಸೀತರಾಮನ್ ಟ್ವೀಟ್ ನಿಂದ ತನಗೆ ಬಿಜೆಪಿಯ ಕೇಂದ್ರದ ಜೊತೆಗೆ ಲಿಂಕ್ ಇರುವುದಾಗಿ ಬಿಂಬಿಸಿಕೊಂಡಿದ್ದಳು. ಇದನ್ನೇ ಗೋವಿಂದ ಪೂಜಾರಿಗೆ ನಂಬಿಸಿ ಪಂಗನಾಮ ಹಾಕಿದ್ರು ಎನ್ನಲಾಗಿದೆ.