ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆ ರನ್ವೇಯಿಂದ ಜಾರಿ ಪ್ರೈವೇಟ್ ಜೆಟ್ ಅಪಘಾತ!
ಮುಂಬೈ(ಸೆ.14) ವಿಶಾಖಪಟ್ಟಣದಿಂದ 6 ಪ್ರಯಾಣಿಕರನ್ನು ಹೊತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರೈವೇಟ್ ಜೆಟ್ ಅಪಘಾತಕ್ಕೀಡಾಗಿದೆ. ಚತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 27ರಲ್ಲಿ ಪ್ರೈವೇಟ್ ಜೆಟ್ ಲ್ಯಾಂಡ್ ಆಗುವಷ್ಟರಲ್ಲೇ ಅಪಘಾತಕ್ಕೀಡಾಗಿದೆ. ಮಳೆ ಹಾಗೂ ಹವಾಮಾನ ವೈಪರಿತ್ಯದಿಂದ ಗೋಚರತೆ ಕಡಿಮೆಯಾಗಿದೆ. ಇದರ ಪರಿಣಾಮ ರನ್‌ವೇನಲ್ಲೇ ವಿಮಾನ ಅಪಘಾತಕ್ಕೀಡಾಗಿದೆ. ಸದ್ಯ ರಕ್ಷಣಾ ತಂಡ, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. 6 ಪ್ರಯಾಣಿಕರು ಹಾಗೂ ಇಬ್ಬರು ಪೈಲೆಟ್ ಸೇರಿದಂತೆ ಒಟ್ಟು 8 ಪ್ರಯಾಣಿಕರು ಈ ವಿಮಾನದಲ್ಲಿದ್ದರು.
VSR ವೆನ್ಚರ್, ಲೀಯರ್‌ಜೆಟ್ 45 ಎರ್‌ಕ್ರಾಫ್ಟ್ VT-DBL ರನ್‌ವೇನಲ್ಲಿ ಅಪಘಾತಗೊಂಡಿದೆ. ವೈಜಾಗ್ ಹಾಗೂ ಮುಂಬೈ ನಡುವೆ ಸೇವೆ ಸಲ್ಲಿಸುವ ಈ ಪ್ರೈವೇಟ್ ಜೆಟ್ ಸ್ಪಷ್ಟ ಗೋಚರತೆ ಇಲ್ಲದ ಕಾರಣ ಸ್ಕಿಡ್ ಆಗಿದೆ ಎಂದು ಡಿಡಿಸಿಎ ಮಾಹಿತಿ ನೀಡಿದೆ. ಇನ್ನು ವಿಮಾನದಲ್ಲಿನದ್ದ ಒಟ್ಟು8 ಮಂದಿ ಪೈಕಿ ಮೂವರು ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಪ್ರಯಾಣಿಕರಿಗೆ ಸಣ್ಣ ಗಾಯಗಳಾಗಿದ್ದು, ವಿಮಾನ ನಿಲ್ದಾಣದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಲೀಯರ್‌ಜೆಟ್ 45 ಎರ್‌ಕ್ರಾಫ್ಟ್ VT-DBL ಪ್ರೈವೇಟ್ ಜೆಟ್ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ VSR ವೆನ್ಚರ್ ಕಂಪಪನಿಗೆ ಸೇರಿದೆ. ಕೆನಡಾ ಬಾಂಬಡೈರ್ ಏವಿಯೇಶನ್ ನಿರ್ಮಿಸಿರುವ ಈ ವಿಮಾನ ಇದೇ ಮೊದಲ ಬಾರಿಗೆ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ. ಗಾಯಗೊಂಡವರ ಆರೋಗ್ಯ ಸ್ಥಿತಿ ಕುರಿತ ವರ ಇನ್ನಷ್ಟೇ ಲಭ್ಯವಾಗಬೇಕಿದೆ.