Gold Rate : ಸತತ ಇಳಿಕೆ ಕಂಡ ಚಿನ್ನದ ದರ ; ಹೇಗಿದೆ ಇಂದಿನ ಚಿನ್ನ - ಬೆಳ್ಳಿಯ ದರ
![Gold Rate : ಸತತ ಇಳಿಕೆ ಕಂಡ ಚಿನ್ನದ ದರ ; ಹೇಗಿದೆ ಇಂದಿನ ಚಿನ್ನ - ಬೆಳ್ಳಿಯ ದರ](https://urtv24.com/wp-content/uploads/2023/09/Hunar-Online-jewellery-design-course.jpg)
ಬೆಂಗಳೂರು, ಸೆಪ್ಟೆಂಬರ್ 14: ಭಾರತ ಹಾಗೂ ವಿವಿಧ ದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಗಣನೀಯವಾಗಿ ಇಳಿದಿವೆ. ಅಮೆರಿಕದ ಫೆಡರಲ್ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರ ಏರಿಕೆ ಮಾಡುತ್ತದೋ ಇಲ್ಲವೋ ಎಂಬ ಅನುಮಾನಗಳ ಮಧ್ಯೆ ಚಿನ್ನಕ್ಕಿರುವ ಬೇಡಿಕೆ ತುಸು ಕಡಿಮೆ ಆಗಿದೆ. ಪರಿಣಾಮವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ನಿಂದ ಹೊಸ ಬಡ್ಡಿದರ ಪ್ರಕಟವಾಗುವವರೆಗೂ ಚಿನ್ನದ ಬೆಲೆಯ ಹೊಯ್ದಾಟ ಹೀಗೆಯೇ ಮುಂದುವರಿಯಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,350 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,325 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 14ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,450 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 735 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,450 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 732.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,500 ರೂ
- ಚೆನ್ನೈ: 54,800 ರೂ
- ಮುಂಬೈ: 54,500 ರೂ
- ದೆಹಲಿ: 54,650 ರೂ
- ಕೋಲ್ಕತಾ: 54,500 ರೂ
- ಕೇರಳ: 54,500 ರೂ
- ಅಹ್ಮದಾಬಾದ್: 54,550 ರೂ
- ಜೈಪುರ್: 54,650 ರೂ
- ಲಕ್ನೋ: 54,650 ರೂ
- ಭುವನೇಶ್ವರ್: 54,500 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,850 ರಿಂಗಿಟ್ (50,528 ರುಪಾಯಿ)
- ದುಬೈ: 2142.50 ಡಿರಾಮ್ (48,423 ರುಪಾಯಿ)
- ಅಮೆರಿಕ: 590 ಡಾಲರ್ (48,941 ರುಪಾಯಿ)
- ಸಿಂಗಾಪುರ: 809 ಸಿಂಗಾಪುರ್ ಡಾಲರ್ (49,295 ರುಪಾಯಿ)
- ಕತಾರ್: 2,215 ಕತಾರಿ ರಿಯಾಲ್ (50,400 ರೂ)
- ಓಮನ್: 234 ಒಮಾನಿ ರಿಯಾಲ್ (50,430 ರುಪಾಯಿ)
- ಕುವೇತ್: 184 ಕುವೇತಿ ದಿನಾರ್ (49,471 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,325 ರೂ
- ಚೆನ್ನೈ: 7,700 ರೂ
- ಮುಂಬೈ: 7,350 ರೂ
- ದೆಹಲಿ: 7,350 ರೂ
- ಕೋಲ್ಕತಾ: 7,350 ರೂ
- ಕೇರಳ: 7,700 ರೂ
- ಅಹ್ಮದಾಬಾದ್: 7,350 ರೂ
- ಜೈಪುರ್: 7,350 ರೂ
- ಲಕ್ನೋ: 7,350 ರೂ
- ಭುವನೇಶ್ವರ್: 7,700 ರೂ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.