ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ದುನಿಯಾ ವಿಜಯ್ ಪುತ್ರಿ ಮೋನಿಷಾ ಫೋಟೋ ವೈರಲ್!

Twitter
Facebook
LinkedIn
WhatsApp
ದುನಿಯಾ ವಿಜಯ್ ಪುತ್ರಿ ಮೋನಿಷಾ ಫೋಟೋ ವೈರಲ್!

ಕನ್ನಡ ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ (Duniya Vijay) ಪುತ್ರಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ನಟ ದುನಿಯಾ ವಿಜಯ್‌ಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಜೇಷ್ಠ ಪುತ್ರಿ ಮೋನಿಷಾ ಫೋಟೋ ವೈರಲ್ ಆಗುತ್ತಿದೆ.

ದುನಿಯಾ ವಿಜಯ್ ಪುತ್ರಿ ಮೋನಿಷಾ ಫೋಟೋ ವೈರಲ್!

ಹೊಸ ಕ್ರಶ್ ಸಿಕ್ಕದ್ಲು ಹೊಸ ನಾಯಕಿ ಸಿಕ್ಕಿದಳು ಹೊಸ ಮಾಡಲ್ ಸಿಕ್ಕದಳು ನನ್ನ ಕನಸಿನ ರಾಣಿ ಸಿಕ್ಕಿದಳು ಎಂದು ಟ್ರೋಲ್ ಪೇಜ್‌ಗಳಲ್ಲಿ ಫೋಟೋ ಹಾಕಲಾಗಿದೆ. 

ಮೋನಿಷಾ ಓದುತ್ತಿದ್ದಾರಾ ಅಥವಾ ಕೆಲಸ ಮಾಡುತ್ತಿದ್ದಾರಾ ಎಂದು ಯಾರಿಗೂ ತಿಳಿದು ಬಂದಿಲ್ಲ ಆದರೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆಂದು ಮೇಲ್ನೋಟಕ್ಕೆ ಕಾಣಿಸುತ್ತದೆ.. 

ದುನಿಯಾ ವಿಜಯ್ ಪುತ್ರಿ ಮೋನಿಷಾ ಫೋಟೋ ವೈರಲ್!

ಅಲ್ಲದೆ ತಂದೆ ನಟನೆಯ ಮುಂದಿನ ಬಹು ನಿರೀಕ್ಷಿತ ಭೀಮಾ ಸಿನಿಮಾದ ಸೆಟ್‌ನಲ್ಲಿ ಮೋನಿಷಾ ಕೆಲಸ ಮಾಡುತ್ತಿದ್ದಾರೆ. ಪಾಕೆಟ್‌ನಲ್ಲಿ ವಾಕಿಟಾಕಿ ಧರಿಸಿರುವ ಫೋಟೋ ಹಾಕಿದ್ದರು. 

ಸುಮಾರು ನಾಲ್ಕು ಸಾವಿರ ಫಾಲೋವರ್ಸ್‌ ಹೊಂದಿರುವ ಮೋನಿಷಾ ಸುಮಾರು 10 ಫೋಟೋಗಳನ್ನು ಅಪ್ಲೋಡ್ ಮಾಡಿ ಒಂದು ರೀಲ್ಸ್ ಹಾಕಿದ್ದಾರೆ.

ಆದಷ್ಟು ಬೇಗ ಸಿನಿಮಾ ಮಾಡಿ …ಮೊದಲ ಚಿತ್ರಕ್ಕೆ ತಂದೆನೇ ಆಕ್ಷನ್ ಕಟ್ ಹೇಳಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಅಡ್ವಾನ್ಸ್‌ ವಿಶ್ ಮಾಡುತ್ತಿದ್ದಾರೆ.

ದುನಿಯಾ ವಿಜಯ್ ಪುತ್ರಿ ಮೋನಿಷಾ ಫೋಟೋ ವೈರಲ್!
ತಮ್ಮ ಹುಟ್ಟಿನ ರಹಸ್ಯ ಬಿಚ್ಚಿಟ್ಟು ಭಾವುಕರಾದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ!

ಬಾಲಿವುಡ್ ನಟಿ, ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಇಂದು ದೊಡ್ಡ ಪ್ರಮಾಣದಲ್ಲಿ ಹೆಸರು ಮಾಡಿದ್ದಾರೆ.  ಅವರು ಸದ್ಯ ಸುಖಿ ಚಿತ್ರದಲ್ಲಿ ಬಿಜಿ ಇದ್ದು, ಚಿತ್ರವು  ಇದೇ 22ರಂದು  ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಹುಟ್ಟಿನ ಕುರಿತು ಕೆಲವೊಂದು ಮಾಹಿತಿ ಹೇಳಿಕೊಂಡಿದ್ದು, ಭಾವುಕರಾಗಿದ್ದಾರೆ. ಈ ಹಿಂದೆ ಅವರು ತಮಗೆ ಮಗ ಹುಟ್ಟಿದ ಮೇಲೆ ಮೂರು ಬಾರಿ ಗರ್ಭಪಾತವಾಗಿ ತಾವು ಅನುಭವಿಸಿದ್ದ ನೋವಿನ ಕುರಿತು ಹೇಳಿಕೊಂಡಿದ್ದರು. 2012ರಲ್ಲಿ ಮಗ ವಿಹಾನ್ ಹುಟ್ಟಿದ ಬಳಿಕ  ಎರಡನೇ ಮಗುವನ್ನು ಬಾಡಿಗೆ ತಾಯ್ತನದ (ಸರೋಗೆಸಿ) ಮೂಲಕ ಬರ ಮಾಡಿಕೊಳ್ಳಲು ನಿರ್ಧರಿಸಿದ್ದು ಏಕೆ ಎನ್ನುವ ಕಾರಣ ಬಿಚ್ಚಿಟ್ಟಿದ್ದರು. ‘ನನ್ನ ಮಗ ಹುಟ್ಟಿದ ಮೇಲೆ ಸಾಕಷ್ಟು ಬಾರಿ ಎರಡನೇ ಮಗು ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡಿದೆ ಆದರೆ ನಾನು ಆಟೋ tomium ಕಾಯಿಲೆ Apla ಯಿಂದ ಬಳಲುತ್ತಿದ್ದೆ. ಇದರಿಂದ ಎರಡು ಮೂರು ಸಲ ಗರ್ಭಪಾತವಾಗಿದೆ. ನಾನು ಸಹೋದರಿಯರ ಜೊತೆ ಹುಟ್ಟಿ ಬೆಳೆದಿರುವುದು ಹೀಗಾಗಿ ನನ್ನ ಮಗ ಒಬ್ಬಂಟಿಯಾಗಿ ಬೆಳೆಯುವುದು ಬೇಡ ಎಂದು ನಿರ್ಧರಿಸಿ ನಾನು ಬಾಡಿಗೆ ತಾಯ್ತನಕ್ಕೆ ಮುಂದಾದೆ ಎಂದಿದ್ದರು.

ಇದೀಗ ಅವರು ತಮ್ಮ ಹುಟ್ಟಿನ ರಹಸ್ಯವನ್ನು ಹೇಳಿದ್ದಾರೆ. ತಾವು ಅಮ್ಮನ ಗರ್ಭದಲ್ಲಿ ಇರುವಾಗಲೇ ಅಮ್ಮನಿಗೂ ಗರ್ಭಪಾತ ಮಾಡಿಕೊಳ್ಳಲು ಹೇಳಿದ್ದರೂ, ತಾವು ಹೇಗೆ ಹುಟ್ಟಿದೆ ಎಂಬ ಕುರಿತು ಇದೇ ಮೊದಲ ಬಾರಿಗೆ ನಟಿ ನೋವು ತೋಡಿಕೊಂಡಿದ್ದಾರೆ. ಸುಖಿ ಚಿತ್ರದ ಪ್ರಮೋಷನ್‌ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಅಮ್ಮನ ಗರ್ಭದಲ್ಲಿದ್ದಾಗ ಗರ್ಭಪಾತ ಮಾಡಿಸಿಕೊಳ್ಳಲು ಅವರ ಅಮ್ಮನಿಗೆ ವೈದ್ಯರು ಸೂಚಿಸಿದ್ದರು ಎನ್ನುವ ಶಾಕಿಂಗ್‌ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.

’ನಾನು ಅಮ್ಮನ ಗರ್ಭದಲ್ಲಿದ್ದಾಗ, ತಾಯಿಯ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ರಕ್ತಸ್ರಾವವಾಗುತ್ತಿತ್ತು. ನಾನು ಹುಟ್ಟಿದರೆ ಅವರ ಜೀವಕ್ಕೇ ಅಪಾಯ ಎಂದೂ ವೈದ್ಯರು ಹೇಳಿದ್ದರು.  ಗರ್ಭಪಾತ ಅನಿವಾರ್ಯವಾಗಿತ್ತು. ಆದ್ದರಿಂದ ನಾನು ಹುಟ್ಟುವುದೇ ಇಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೂ ಅಮ್ಮ ನನಗೆ ಜನ್ಮ ನೀಡಿದಳು’ ಎಂದು ಶಿಲ್ಪಾ ಭಾವುಕರಾಗಿ ನುಡಿದಿದ್ದಾರೆ. ನನ್ನ ಹುಟ್ಟು ಅಮ್ಮನಿಗೆ ಮಾತ್ರವಲ್ಲದೇ, ನನಗೂ ಪುನರ್ಜನ್ಮವೇ. ನನ್ನ ಹುಟ್ಟಿನ ಹಿಂದೆ ಯಾವುದೋ ಬಲವಾದ ಕಾರಣ ಇದ್ದಿರಬೇಕು ಎಂದಿದ್ದಾರೆ ಶಿಲ್ಪಾ. ಪ್ರತಿಯೊಬ್ಬರ ಜೀವನದಲ್ಲೂ ಹಲವು ಕಷ್ಟಗಳು ಇದ್ದೇ ಇರುತ್ತವೆ. ಹಾಗಾಗಿ ಅವರಲ್ಲಿ ಸ್ಫೂರ್ತಿ ತುಂಬಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ. ಬದುಕು ಯಾರಿಗೂ ಸುಲಭವಲ್ಲ ಎಂದು ತಮ್ಮ ಹುಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಅಂದಹಾಗೆ ಸುಖಿ ಚಿತ್ರದ ಮೂಲಕ ಶಿಲ್ಪಾ ಕೆಲ ಕಾಲದ ಬ್ರೇಕ್‌ ಬಳಿಕ ಕಮ್‌ಬ್ಯಾಕ್‌ ಆಗುತ್ತಿದ್ದಾರೆ.  ಸೋನಾಲ್ ಜೋಶಿ ನಿರ್ದೇಶಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.  ಇತ್ತೀಚೆಗೆ ಈ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಅದರ ಪ್ರಕಾರ,  ಶಿಲ್ಪಾ ಇದರಲ್ಲಿ ಅತೃಪ್ತ ಗೃಹಿಣಿಯ ಪಾತ್ರ ನಿರ್ವಹಿಸುತ್ತಿರುವುದನ್ನು ತಿಳಿಯಬಹುದು.  ಅವಳು ತನ್ನ ಕೆಲಸ ಮಾಡುವ ಗಂಡನನ್ನು ನೋಡಿಕೊಳ್ಳುವುದು, ಅವನ ಅನಾರೋಗ್ಯದ ತಂದೆಗೆ ಚಿಕಿತ್ಸೆ ನೀಡುವುದು ಮತ್ತು ಶಾಲೆಗೆ ಹೋಗುವ ಮಗನನ್ನು ಕರೆದುಕೊಂಡು ಹೋಗುವುದು… ಹೀಗೆ  ತನ್ನ ಪ್ರಾಪಂಚಿಕ ದಿನಚರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮಹಿಳೆಯಾಗಿದ್ದಾಳೆ.   ತನ್ನ ಶಾಲೆಯ ಸ್ನೇಹಿತರ ಮರು ಭೇಟಿಯ ಕಾರ್ಯಕ್ರಮಕ್ಕೆ ಕರೆ ಬಂದಾಗ, ಹಳೆಯ ಸ್ನೇಹಿತರನ್ನು ನೋಡಲು ಉತ್ಸುಕಳಾಗಿರುತ್ತಾಳೆ ನಾಯಕಿ. ಆದರೆ  ಪತಿಯು ದೆಹಲಿಗೆ ಭೇಟಿ ನೀಡಬೇಕಿರುವ ಹಿನ್ನೆಲೆಯಲ್ಲಿ ಇದಕ್ಕೆ ಅನುಮತಿ ನೀಡುವುದಿಲ್ಲ.   ಆಗ ನಾಯಕಿ ಸುಖಿ  ತನ್ನ ಪತಿಗೆ ತಿಳಿಸದೆ ಹೋಗುವ  ನಿರ್ಧಾರ ಮಾಡಿದಾಗ ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕುತೂಹಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist