ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಅಘಾ ಸಲ್ಮಾನ್ ಮುಖಕ್ಕೆ ಬಡಿದ ಚೆಂಡು ; ಜಡೇಜಾನ ಸ್ಪಿನ್ ಬೌಲಿಂಗ್ಗೆ ಸಲ್ಮಾನ್ ಹೆಲ್ಮೆಟ್ ಧರಿಸದೇ ಆಡಿದ್ದು ತಪ್ಪು ಎಂದ ಫ್ಯಾನ್ಸ್!

Twitter
Facebook
LinkedIn
WhatsApp
ಅಘಾ ಸಲ್ಮಾನ್ ಮುಖಕ್ಕೆ ಬಡಿದ ಚೆಂಡು ; ಜಡೇಜಾನ ಸ್ಪಿನ್ ಬೌಲಿಂಗ್ಗೆ ಸಲ್ಮಾನ್ ಹೆಲ್ಮೆಟ್ ಧರಿಸದೇ ಆಡಿದ್ದು ತಪ್ಪು ಎಂದ ಫ್ಯಾನ್ಸ್!

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (Virat Kohli, KL Rahul ) ಅವರ ಶತಕದ ಇನ್ನಿಂಗ್ಸ್ ನಂತರ, ಕುಲ್ದೀಪ್ ಯಾದವ್ (Kuldeep Yadav) ಅವರ ಅದ್ಭುತ ಬೌಲಿಂಗ್ ಸಹಾಯದಿಂದ ಟೀಂ ಇಂಡಿಯಾ, ಏಷ್ಯಾಕಪ್​ನ ಸೂಪರ್ -4 ಪಂದ್ಯದಲ್ಲಿ ಪಾಕಿಸ್ತಾನವನ್ನು (India vs Pakistan) 228 ರನ್ ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಅವರ ಅಜೇಯ 122 ಮತ್ತು ಕೆಎಲ್ ರಾಹುಲ್ ಅಜೇಯ 111 ರನ್‌ಗಳ ಆಧಾರದ ಮೇಲೆ ಒಟ್ಟು 50 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 356 ರನ್ ಗಳಿಸಿ ಪಾಕಿಸ್ತಾನಕ್ಕೆ ಪಂದ್ಯವನ್ನು ಗೆಲ್ಲಲು 357 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ಕೇವಲ 128 ರನ್ ಕಲೆಹಾಕಿ ಹೀನಾಯವಾಗಿ ಸೋಲುಂಡಿತು. ಆದರೆ ಪಂದ್ಯದ ನಡುವೆ ಪಾಕ್ ಬ್ಯಾಟರ್ ಮಾಡಿಕೊಂಡ ಎಡವಟ್ಟಿನಿಂದಾಗಿ ಮೈದಾನದಲ್ಲಿ ರಕ್ತ ಕೂಡ ಕಂಡು ಬಂತು.ವಾಸ್ತವವಾಗಿ ಹೆಲ್ಮೆಟ್ ಧರಿಸದೆ ಬ್ಯಾಟಿಂಗ್ ಮಾಡುತ್ತಿದ್ದ ಅಘಾ ಸಲ್ಮಾನ್ (Agha Salman) ಅವರ ಮುಖಕ್ಕೆ ಚೆಂಡು ಬಲವಾಗಿ ಬಡಿದ ಪರಿಣಾಮದಿಂದಾಗಿ ಅವರ ಮುಖಕ್ಕೆ ಗಾಯವಾಗಿ ರಕ್ತಸ್ರಾವವಾಯಿತು. ಇದರಿಂದ ಪಂದ್ಯವನ್ನು ಕೆಲಸಮಯ ನಿಲ್ಲಿಸಬೇಕಾಯ್ತು.

ಆರಂಭಿಕ ಆಘಾತ ಅನುಭವಿಸಿದ ಪಾಕ್

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೀಸಲು ದಿನದಂದು ನಡೆದ ಈ ಪಂದ್ಯದಲ್ಲಿ ಭಾರತ ನೀಡಿದ 357 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನದ ಬ್ಯಾಟಿಂಗ್‌ನ ಸ್ಥಿತಿ ಆರಂಭದಿಂದಲೂ ಕೆಟ್ಟದಾಗಿತ್ತು. ಅಲ್ಲದೆ ನಿರಂತರವಾಗಿ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಹೀಗಾಗಿ ಕೇವಲ 77 ರನ್‌ಗಳಿಗೆ 4 ವಿಕೆಟ್‌ಗಳ ಪತನದ ನಂತರ, ಅಘಾ ಸಲ್ಮಾನ್ ಕ್ರೀಸ್‌ನಲ್ಲಿದ್ದರು, ಇಫ್ತಿಕರ್ ಅಹ್ಮದ್ ಅವರೊಂದಿಗೆ ಇನ್ನಿಂಗ್ಸ್ ಅನ್ನು ಮುನ್ನಡೆಸುವ ಕೆಲಸವನ್ನು ಕೈಗೆತ್ತಿಕೊಂಡರು. ಇಬ್ಬರೂ ಸ್ವಲ್ಪ ಸಮಯದವರೆಗೆ ಈ ಕೆಲಸದಲ್ಲಿ ಯಶ ಕೂಡ ಆದರು. ಆದರೆ ಈ ಸಮಯದಲ್ಲಿ, ಸಲ್ಮಾನ್ ತಾವು ಮಾಡಿಕೊಂಡ ತಪ್ಪಿಗೆ ಬೆಲೆ ತೆರಬೇಕಾಯಿತು

ಮುಖದಿಂದ ಹರಿಯಿತು ನೆತ್ತರು

ಪಾಕಿಸ್ತಾನ ಇನಿಂಗ್ಸ್‌ನ 21ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಮಾಡುತ್ತಿದ್ದರು. ಓವರ್‌ನ ಕೊನೆಯ ಎಸೆತದಲ್ಲಿ, ಅಘಾ ಸಲ್ಮಾನ್ ಚೆಂಡನ್ನು ಆಫ್ ಸ್ಟಂಪ್‌ನ ಹೊರಗೆ ಸ್ವೀಪ್ ಮಾಡಲು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ. ಚೆಂಡು ಅವರ ಬ್ಯಾಟ್‌ನ ಮೇಲ್ಭಾಗಕ್ಕೆ ತಾಗಿ ಮೇಲಕ್ಕೆ ಪುಟಿದು, ಅವರ ಬಲಗಣ್ಣಿನ ಕೆಳಗಿನ ಭಾಗಕ್ಕೆ ಬಲವಾಗಿ ಬಡಿಯಿತು. ತಕ್ಷಣ ಸಲ್ಮಾನ್ ಅವರ ಕಣ್ಣಿನ ಕೆಳಗಿನಿಂದ ರಕ್ತ ಹರಿಯತೊಡಗಿತು. ಭಾರತದ ವಿಕೆಟ್‌ಕೀಪರ್ ಕೆಎಲ್ ರಾಹುಲ್ ತಕ್ಷಣ ಹೋಗಿ ಅವರ ಸ್ಥಿತಿಯನ್ನು ವಿಚಾರಿಸಿದರು. ಸ್ವಲ್ಪ ಸಮಯದ ನಂತರ, ಪಾಕಿಸ್ತಾನಿ ತಂಡದ ವೈದ್ಯರು ಬಂದು, ಅವರ ಮುಖದಿಂದ ಆಗುತ್ತಿದ್ದ ರಕ್ತಸ್ರಾವವನ್ನು ನಿಲ್ಲಿಸಿ, ಚಿಕಿತ್ಸೆ ನೀಡಿದರು. ನಂತರ ಸಲ್ಮಾನ್ ಅವರು ತಮ್ಮ ಬ್ಯಾಟಿಂಗ್ ಮುಂದುವರೆಸಿದರು.

ಹೆಲ್ಮೆಟ್ ಧರಿಸದೆ ಎಡವಟ್ಟು

ವಾಸ್ತವವಾಗಿ ಜಡೇಜಾ ಸ್ಪಿನ್ ಬೌಲರ್ ಆಗಿದ್ದರೂ ಕೂಡ ಅವರ ಬೌಲಿಂಗ್​ನಲ್ಲಿ ಚೆಂಡಿನ ವೇಗ ಹೆಚ್ಚಿರುತ್ತದೆ. ಅಲ್ಲದೆ ಕ್ರಿಕೆಟ್​ ಪುಸ್ತಕದಲ್ಲಿರುವ ಇನ್ನೊಂದು ಪ್ರಮುಖ ಪಾಠವೆಂದರೆ ಅದು ಸ್ವೀಪ್ ಆಡುವ ಬ್ಯಾಟ್ಸ್‌ಮನ್‌ಗಳು ಹೆಲ್ಮೆಟ್ ಧರಿಸಬೇಕೆಂಬುದು. ಆದರೆ ಸಲ್ಮಾನ್ ಹೆಲ್ಮೆಟ್ ಧರಿಸದೇ ಸ್ವೀಪ್ ಆಡಿದ್ದು ಅವರ ದೊಡ್ಡ ತಪ್ಪು. ಸ್ಪಿನ್ನರ್‌ಗಳು ದಾಳಿಗಿಳಿದ ಕಾರಣ ಕ್ಯಾಪ್ ಮಾತ್ರ ಧರಿಸಿದ್ದ ಸಲ್ಮಾನ್, ಸ್ಟಂಪ್ ಲೈನ್‌ನಲ್ಲಿ ವೇಗವಾಗಿ ಬೌಲಿಂಗ್ ಮಾಡುವ ಜಡೇಜಾ ಅವರಂತಹ ಬೌಲರ್ ವಿರುದ್ಧ ಈ ಹೊಡೆತವನ್ನು ಆಡುವ ಯತ್ನದಲ್ಲಿ ತಮ್ಮ ಮುಖದ ಮೇಲೆ ಚೆಂಡಿನ ಮುದ್ರೆ ಒತ್ತಿಸಿಕೊಂಡರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist