ಎಆರ್ ರೆಹಮಾನ್ ಮೇಲಿರುವ ಅಭಿಮಾನ ಸತ್ತು ಹೋಯಿತು ; ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್! ಕಾರಣ ಏನು?
ಸಂಗೀತ ಸಂಯೋಜಕ ಎಆರ್ ರೆಹಮಾನ್ (AR Rahman) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಒಮ್ಮೆ ನೋಡಿದರೆ ಸಾಕು ಎಂದು ಕನಸು ಕಂಡವರು ಅನೇಕರು. ಈ ಕನಸನ್ನು ನನಸು ಮಾಡಿಕೊಳ್ಳಲು ಅನೇಕರು ಚೆನ್ನೈನ ಮರಕ್ಕುಮಾ ನೆಂಜಮ್ನಲ್ಲಿ ಆಯೋಜನೆಗೊಂಡಿದ್ದ ರೆಹಮಾನ್ ಅವರ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಅನೇಕರಿಗೆ ಬೇಸರ ಆಗುವಂಥ ಘಟನೆಯೊಂದು ನಡೆದಿದೆ. ಟಿಕೆಟ್ ಇದ್ದ ಹೊರತಾಗಿಯೂ ಅನೇಕರನ್ನು ಒಳಗೆ ಬಿಡಲೇ ಇಲ್ಲ. ಈ ಬಗ್ಗೆ ಅನೇಕರು ಟ್ವಿಟರ್ನಲ್ಲಿ ಬೇಸರ ಹೊರಹಾಕಿದ್ದಾರೆ.
ಎಆರ್ ರೆಹಮಾನ್ ಹಾಗೂ ಅವರ ತಂಡದವರಿಂದ ಭಾನುವಾರ ವಿಶೇಷ ಕಾರ್ಯಕ್ರಮ ಇತ್ತು. ಆದರೆ, ಇದನ್ನು ಸರಿಯಾಗಿ ಮ್ಯಾನೇಜ್ ಮಾಡಲಿಲ್ಲ. ದುಡ್ಡಿನ ಆಸೆಗಾಗಿ ಹೆಚ್ಚಿನ ಟಿಕೆಟ್ ಮಾರಾಟ ಮಾಡಲಾಗಿತ್ತು. ಟಿಕೆಟ್ ಪಡೆದ ಬಹುತೇಕರು ಆಗಮಿಸಿದ್ದರು. ಹೀಗಾಗಿ, ಒಳಗೆ ಜಾಗವೇ ಇಲ್ಲದಂತೆ ಆಗಿತ್ತು. ಟಿಕೆಟ್ ಇದ್ದ ಹೊರತಾಗಿಯೂ ಅನೇಕರನ್ನು ಒಳಗೆ ಬಿಡಲಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
‘2000 ಸಾವಿರ ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿದ್ದೇವೆ. ಆದರೆ, ಒಳಗೆ ಬಿಡಲೇ ಇಲ್ಲ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ‘ಅತ್ಯಂತ ಕೆಟ್ಟದಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹಣ, ಶಕ್ತಿ ಎಲ್ಲವೂ ವ್ಯರ್ಥವಾಗಿದೆ’ ಎಂದು ವ್ಯಕ್ತಿಯೋರ್ವ ಬರೆದುಕೊಂಡಿದ್ದಾರೆ.
#MarakkumaNenjam yemana Kannula paathadhuku Apram marakumma nenjam… @actcevents Beyond your greed for money, at least you should have warned that elderly and little kids are not allowed. So sad to have witnessed what they went through.. @arrahman #ARRConcert @Udhaystalin pic.twitter.com/22nri6ZBDo
— Ashok Ramadass (@ashokrbp) September 10, 2023
‘ರೆಹಮಾನ್ ನೀಡಿದ ಅತ್ಯಂತ ಕೆಟ್ಟ ಕಾರ್ಯಕ್ರಮ. ಮಾನವೀಯತೆಯನ್ನು ಗೌರವಿಸಿ. 30 ವರ್ಷಗಳಿಂದ ರೆಹಮಾನ್ ಮೇಲಿರುವ ನನ್ನ ಅಭಿಮಾನ ಇಂದು ಸತ್ತು ಹೋಯಿತು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಈ ಬಗ್ಗೆ ಆಯೋಜಕರು ಹಾಗೂ ಎಆರ್ ರೆಹಮಾನ್ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.
Very very bad audio systems. Couldn't hear any song or music. Too crowded, worst organisation, stampede, parking jammed, could not even return, need refund.#MarakkaveMarakathaNenjam#arrahman | #isaipuyal | #marakkumanenjam pic.twitter.com/ROHBCS5sTu
— Jay (@jp15may) September 10, 2023