ಸೋನು ಶ್ರೀನಿವಾಸ್ ಗೌಡ ಧರಿಸಿದ್ದ ಕೇಸರಿ ಬಟ್ಟೆಗೆ ನೆಟ್ಟಿಗರಿಂದ ತರಾಟೆ!
ಬಿಗ್ ಬಾಸ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಇತ್ತೀಚಿಗೆ ಬಿಕಿನಿ(Bikini) ಧರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದರು. ಇದೀಗ ಮತ್ತೆ ಅವರು ಅದೇ ಬಿಕಿನಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೇಸರಿ ಬಟ್ಟೆ ಬಿಕಿನಿಯಾಗಿ ಧರಿಸಿದ್ದ ಸೋನುಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ಇತ್ತೀಚಿಗೆ ನಟಿ ಮಾಲ್ಡೀವ್ಸ್ (Maldives) ವೆಕೇಷನ್‌ಗೆ ಹೋಗಿದ್ದರು. ಅಲ್ಲಿ ಮೋಜು-ಮಸ್ತಿ ಮಾಡುತ್ತಾ ಇರುವ ಕೆಲವು ಫೋಟೋಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಕೇಸರಿ ಬಟ್ಟೆಯನ್ನ ಬಿಕಿನಿಯಾಗಿ ಧರಿಸಿದ್ದ ಫೋಟೋ- ವಿಡಿಯೋಗಳನ್ನ ನಟಿ ಶೇರ್ ಮಾಡಿದ್ದರು. ಈ ಫೋಟೋ ಈಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ನಿಮ್ಮ ಖುಷಿಗೆ ಯಾವ ಬಟ್ಟೆ ಬೇಕಾದ್ರು ಧರಿಸಿ, ಆದರೆ ಕೇಸರಿ ಬಟ್ಟೆ ಧರಿಸಿ ಅದಕ್ಕೆ ಯಾಕೆ ಅದಕ್ಕೆ ಅವಮಾನ ಮಾಡ್ತೀರಾ? ಅಂತಾ ನೆಟ್ಟಿಗರು ಸೋನುಗೆ ತರಾಟೆ ತೆಗೆದುಕೊಂಡಿದ್ದಾರೆ. ಟ್ರೋಲ್ ಕೂಡ ಮಾಡುತ್ತಿದ್ದಾರೆ. ಇದಕ್ಕೆ ಸೋನು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಶೇರ್ ಮಾಡಿರುವ ಬಿಕಿನಿ ವಿಡಿಯೋ 19 ಮಿಲಿಯನ್‌ಗೂ ಅಧಿಕ ಅಂದರೆ 1 ಕೋಟಿ 90 ಲಕ್ಷ ವಿವ್ ಕಂಡಿದೆ. 10 ಲಕ್ಷ ಇನ್ಸ್ಟಾಗ್ರಾಂ ಫಾಲೋವರ್ಸ್ ಪಡೆದಿರುವ ಸೋನು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ.
ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.
ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು.
ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದರು. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೋ ಮೂಲಕ ತಿಳಿಸಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.
ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ (Bigg Boss Kannada) ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ಇದೀಗ ‘ಕ್ಯಾಡಬರಿಸ್’ ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಅಪ್‌ಡೇಟ್ ಹಂಚಿಕೊಂಡರು.