ಬಂದ್ ಬಿಸಿ – BMTC ಬಸ್ಸಿನಲ್ಲಿ ಪ್ರಯಾಣ ಮಾಡಿದ ಅನಿಲ್ ಕುಂಬ್ಳೆ!
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble ಅವರಿಗೂ ಬೆಂಗಳೂರು ಖಾಸಗಿ ಸಾರಿಗೆ ಚಾಲಕರ ಒಕ್ಕೂಟದ ಬಂದ್ (Bengaluru Bandh) ಬಿಸಿ ತಟ್ಟಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಸೆಲ್ಫಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿರುವುದಾಗಿ ಅದರಲ್ಲಿ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ದೊಡ್ಡ ಬ್ಯಾಗ್‌ಗಳೊಂದಿಗೆ ಅವರು ಇರುವುದನ್ನು ನೋಡಬಹುದಾಗಿದೆ.
ಬಸ್‌ನಲ್ಲಿ ಕುಂಬ್ಳೆ ನಿಂತುಕೊಂಡೆ ಪ್ರಯಾಣ ಮಾಡಿರುವುದು ಬಸ್‌ಗಳಿಗೆ ಇದ್ದ ಡಿಮ್ಯಾಂಡ್ ನಿದರ್ಶನ ಎಂಬಂತಿದೆ. ಕ್ಯಾಬ್‌ಗಳಿಲ್ಲದ ಕಾರಣ ಬಹುತೇಕ ಪ್ರಯಾಣಿಕರು ಬಸ್‌ನತ್ತ ಮುಖ ಮಾಡಿದ್ದಾರೆ. ಕ್ಯಾಬ್‌ಗಳ ಬಂದ್ ಹಿನ್ನಲೆ ಯಲ್ಲಿ ಏರ್‌ಪೋರ್ಟ್‌ನಿಂದ ಬೆಂಗಳೂರಿಗೆ ಹೆಚ್ಚುವರಿ ವಾಯುವಜ್ರ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ವಾಹನದವರು ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ: ಡಿಸಿಎಂ ಡಿಕೆಶಿ
ಬೆಂಗಳೂರು: ಖಾಸಗಿ ವಾಹನದವರು (Private Transport Strike) ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಖಾಸಗಿ ಬಸ್ಸಿನವರಿಗೆ ಸ್ವಲ್ಪ ತೊಂದರೆಯಾಗಿದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಊಬರ್ ಆಟೋ (Uber Auto) ಪ್ರತಿಭಟನೆ ಬಹುಶಃ ಅದು ರಾಜಕೀಯ ಪ್ರೇರಣೆ ಎಂದು ಹೇಳಿದರು.
ನಾವು ಅವರ ಬಗ್ಗೆ ಬಹಳ ಕರುಣೆಯಿಂದ ಇದ್ದೇವೆ. ಹೆದರಿಸುವುದು, ಪ್ರಯಾಣಿಕರಿಗೆ ತೊಂದರೆ ಮಾಡುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸುತ್ತದೆ. ಯಾವ ರೀತಿ ಅವರಿಗೆ ಸಹಕಾರ ಮಾಡಬಹುದು ನೋಡುತ್ತದೆ ಎಂದರು.