Honnavar: ಕಡಲ ತೀರಕ್ಕೆ ತೇಲಿಬಂದ ಅಪರೂಪ ಪ್ರಭೇದದ ನೀಲಿ ತಿಮಿಂಗಿಲದ ಮೃತದೇಹ!
ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಅಪರೂಪ ಪ್ರಭೇದದ ಬೃಹತ್ ತಿಮಿಂಗಿಲದ ಮೃತದೇಹವೊಂದು ಪತ್ತೆಯಾಗಿದೆ.
ಈ ತಿಮಿಂಗಲ ಕುರಿತು ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲ ತಜ್ಞರು ಇದನ್ನು ಬ್ರೈಡ್ ತಿಮಿಂಗಿಲ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಬಲೀನ್ ತಿಮಿಂಗಿಲ ಎಂದು ಹೇಳುತ್ತಿದ್ದಾರೆ.
ನೇತ್ರಾಣಿ ದ್ವೀಪದ ಬಳಿ ಬಲೀನ್ ತಿಮಿಂಗಿಲಗಳು ಕಾಣಿಸಿಕೊಳ್ಳುತ್ತವೆ ಎಂದು ಹೊನ್ನಾವರದ ಸಮುದ್ರ ತಜ್ಞ ಪ್ರಕಾಶ್ ಮೇಸ್ತಾ ಅವರು ಹೇಳಿದ್ದಾರೆ.
ಪ್ರಸ್ತುತ ಪತ್ತೆಯಾಗಿರುವ ತಿಮಿಂಗಿಲದ ಮೃತದೇಹ ಬಲೀನ್ ತಿಮಿಂಗಿಲದ್ದು. ಇದು ಕಠಿಣ ಭೂಪ್ರದೇಶವಾಗಿರುವುದರಿಂದ ಇಲ್ಲಿ ಜನರು ಬರುವುದು ಕಷ್ಟಸಾಧ್ಯ. ಹೀಗಾಗಯೇ ಕರಾವಳಿ ನಿಯಂತ್ರಣ ವಲಯದ ಅಧಿಕಾರಿಗಳು ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದ್ದಾರೆಂದು ತಿಳಿಸಿದ್ದಾರೆ.
ಬಲೀನ್ ತಿಮಿಂಗಿಲಗಳು ಸಮುದ್ರದಲ್ಲಿರುವ ಅತಿದೊಡ್ಡ ಸಸ್ತನಿಗಳಲ್ಲಿ ಒಂದಾಗಿದೆ, ಅವು ಸಾಮಾನ್ಯವಾಗಿ 10 ಮೀಟರ್ನಿಂದ 102 ಮೀಟರ್ ಉದ್ದವಿರುತ್ತವೆ. ಅಲ್ಲದೆ, ಅಳಿವಿನಂಚಿನಲ್ಲಿರುವ ತಿಮಿಂಗಲಗಳಾಗಿವೆ. ಕಡಲತೀರದಲ್ಲಿ ಅವುಗಳು ಅತ್ಯಂತ ವಿರಳವಾಗಿ ಕಂಡುಬರುತ್ತವೆ, ಪಶ್ಚಿಮ ಕರಾವಳಿಯಲ್ಲಿ. ಇವು ದೊಡ್ಡ ತಿಮಿಂಗಿಲಗಳಾಗಿದ್ದು, ಈ ತಿಮಿಂಗಿಲಗಳು ತಮ್ಮ ಬಾಯಿಯಲ್ಲಿ ಬಲೀನ್ ಎಂಬ ಫಿಲ್ಟರ್-ಫೀಡಿಂಗ್ ವ್ಯವಸ್ಥೆಯನ್ನು ಹೊಂದಿರುತ್ತವೆ. ಇದೇ ಕಾರಣಕ್ಕೆ ಈ ತಿಮಿಂಗಿಲಗಳಿಗೆ ಬಲೀನ್ ಎಂದು ಹೆಸರಿಡಲಾಗಿದೆ.
ಹೊನ್ನಾವರದಲ್ಲಿ ಕಂಡು ಬಂದಿರುವ ತಿಮಿಂಗಿಲ ಸುಮಾರು 46 ಅಡಿ ಉದ್ದ ಮತ್ತು 9 ಅಡಿ ಎತ್ತರವಿದೆ ಎಂದು ಸೆಟಾಶಿಯನ್ ಜೀವಶಾಸ್ತ್ರಜ್ಞ ಮತ್ತು ಸೆಟಾಸಿಯನ್ ಸ್ಪೆಷಲಿಸ್ಟ್ ಗ್ರೂಪ್ನ ಸದಸ್ಯರಾದ ದಿಪಾನಿ ಸುತಾರಿಯಾ ಹೇಳಿದ್ದಾರೆ.
ಇದು ಬ್ರೈಡ್ ತಿಮಿಂಗಿಲ ಎಂದೆನಿಸುತ್ತಿದೆ. ತಿಮಿಂಗಿಲ ಕೊಳೆತ ಸ್ಥಿತಿಯಲ್ಲಿದ್ದು, ಮೃತದೇಹ ನೀರಿನಲ್ಲಿ ಬಹುಕಾಲ ಇದ್ದುದ್ದರಿಂದ ವಿಶ್ಲೇಷಣೆ ಮಾಡುವುದು ಕಷ್ಟಸಾಧ್ಯ. ಈ ತಿಮಿಂಗಿಲಗಳು ಕೆಲವು ಸಂದರ್ಭದಲ್ಲಿ ಪಶ್ಚಿಮ ಕರಾವಳಿಯಲ್ಲಿ ಕಂಡು ಬರುತ್ತವೆ ಎಂದು ತಿಳಿಸಿದ್ದಾರೆ.