BANTWALA: ಕಾಂಗ್ರೆಸ್ ನಾಯಕ ಸುಧಾಕರ್ ಶೆಣೈ ಅವರ ಕಾರು ಅಪಘಾತ; ಅಪಾಯದಿಂದ ಪಾರು!
Twitter
Facebook
LinkedIn
WhatsApp
BANTWALA: ಕಾಂಗ್ರೆಸ್ ನಾಯಕ ಸುಧಾಕರ್ ಶೆಣೈ ಅವರ ಕಾರು ಅಪಘಾತ; ಅಪಾಯದಿಂದ ಪಾರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಶೆಣೈ ಅವರ ಕಾರು ಅಪಘಾತವಾಗಿದ್ದು ಅಪಾಯದಿಂದ ಪಾರಾಗಿದ್ದರೆ ಎಂಬ ಮಾಹಿತಿ ತಿಳಿದುಬಂದಿದೆ.
ಪರಂಗಿಪೇಟೆಯ ಯಶಸ್ವಿನಿ ಮದುವೆ ಮಂಟಪದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಾರು ಡಿವೈಡ್ಡರಿಗೆ ಡಿಕ್ಕಿ ಹೊಡೆದು ಮುಗುಚಿಬಿದ್ದಿದೆ. ಮಹೇಂದ್ರ ಕಂಪನಿ ಗೆ ಸೇರಿದ ಬುಲೆರೋ ಕಾರ್ ಆಗಿದ್ದು ಸ್ವತಃ ಸುಧಾಕರ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದರು. ಬುಲೆರೋ ವಾಹನದಲ್ಲಿ ಒಬ್ಬರೇ ಇದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅವರು ಬಂಟ್ವಾಳ ತಾಲೂಕಿನ ಅವರ ಮನೆಯಿಂದ ಮಂಗಳೂರು ರೈಲು ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಅಪಘಾತವು ಬೆಳಗಿನ ಸಮಯ 10:30 ಗಂಟೆಗೆ ನಡೆದಿದೆ. ಜೆಪ್ಪಿನಮೊಗರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.