MS Dhoni ಮತ್ತು ಡೊನಾಲ್ಡ್ ಟ್ರಂಪ್ ಅವರ ಅಚ್ಚರಿಯ ಗಾಲ್ಫ್ ಮುಖಾಮುಖಿ; ವಿಡಿಯೋ ಸಖತ್ ವೈರಲ್!
MS Dhoni ಮತ್ತು ಡೊನಾಲ್ಡ್ ಟ್ರಂಪ್ ಅವರ ಅಚ್ಚರಿಯ ಗಾಲ್ಫ್ ಮುಖಾಮುಖಿ:
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Former US President Donald Trump) ಅನಿರೀಕ್ಷಿತ ಭೇಟಿಯಲ್ಲಿ ಒಟ್ಟಿಗೆ ಗಾಲ್ಫ್ (golf) ಆಡಿದರು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಪಂಚದ ಇಬ್ಬರು ಪ್ರಮುಖ ವ್ಯಕ್ತಿಗಳ ಅನಿರೀಕ್ಷಿತ ಬೇಟಿಯಲ್ಲಿ, ಮಾಜಿ ಭಾರತೀಯ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಯುನೈಟೆಡ್ ಸ್ಟೇಟ್ಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ನೇಹಪರತೆಯಿಂದ ಇಬ್ಬರು ಒಟ್ಟಿಗೆ ಗಾಲ್ಫ್ ಆಡಿದರು. ಮಾಜಿ ಯುಎಸ್ ಅಧ್ಯಕ್ಷರ ಆಹ್ವಾನದ ಮೇರೆಗೆ ಈ ಭೇಟಿ ನಡೆದಿದೆ ಎಂದು ವರದಿಯಾಗಿದೆ.
ಧೋನಿಯ ಟ್ರೇಡ್ಮಾರ್ಕ್ ಉದ್ದನೆಯ ಕೂದಲು ಮತ್ತು ಟ್ರಂಪ್ರ ಪರಿಚಿತ ಕೆಂಪು MAGA ಕ್ಯಾಪ್ನೊಂದಿಗೆ ಗಾಲ್ಫಿಂಗ್ ಉಡುಪಿನಲ್ಲಿರುವ ಇವರಿಬ್ಬರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿವೆ. ಧೋನಿ ಟ್ರಂಪ್ ಜೊತೆ ಗಾಲ್ಫ್ ಆಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಇದು ಈಗ ಸಖತ್ ವೈರಲಾಗಿದೆ.
ಕ್ರಿಕೆಟ್ ಮೈದಾನದಲ್ಲಿ ಶಾಂತ ವರ್ತನೆಗೆ ಹೆಸರುವಾಸಿಯಾದ ಧೋನಿ ಮತ್ತು ಅಮೆರಿಕದ ರಾಜಕೀಯದಲ್ಲಿ ಧ್ರುವೀಕರಣದ ವ್ಯಕ್ತಿಯಾಗಿರುವ ಟ್ರಂಪ್ ಇವರ ಜೋಡಿಯು ಸಾಮಾಜಿಕ ಮಾಧ್ಯಮದಲ್ಲಿ ಝೇಂಕರಿಸಿತು.
ವರದಿಗಳ ಪ್ರಕಾರ, ಧೋನಿ ಅವರು ಯುಎಸ್ ಪ್ರವಾಸದಲ್ಲಿ ಇದ್ದಾರೆ ಎಂಬುದನ್ನು ಅರಿತು ಸ್ವತಃ ಟ್ರಂಪ್ ಅವರೇ ಧೋನಿಯನ್ನು ಗಾಲ್ಫ್ ಆಟಕ್ಕೆ ಆಹ್ವಾನಿಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ‘ಥಲಾ ಫೀವರ್ ಅಮೇರಿಕಾದಲ್ಲೂ ಇದೆ’ ಎಂದಿದ್ದಾರೆ.
MS Dhoni and former US President Donald Trump in a Golf Game.
— Mufaddal Vohra (@mufaddal_vohra) September 8, 2023
- MSD, an icon, a legend....!!!! pic.twitter.com/d9o1TfHmSX
ಇತ್ತ ಎಂಎಸ್ ಧೋನಿ ಅಮೆರಿಕಾ ಪ್ರವಾಸದಿಂದ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಗಾಗಿ ತಯಾರಿ ಆರಂಭಿಸಲಿದ್ದಾರೆ. 2023 ರಲ್ಲಿ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ, ಧೋನಿ ಅವರು ಲೀಗ್ನಿಂದ ಇನ್ನೂ ನಿವೃತ್ತಿಯಾಗಿಲ್ಲ ಎಂದು ಹೇಳಿದ್ದರು. ಹೀಗಾಗಿ ಎಂಎಸ್ಡಿ ಅವರು ಐಪಿಎಲ್ 2024 ಆಡಲಿದ್ದಾರೆ ಎನ್ನಲಾಗಿದ್ದು, ಸದ್ಯದಲ್ಲೇ ಪ್ರ್ಯಾಕ್ಟೀಸ್ ಶುರು ಮಾಡಲಿದ್ದಾರೆ.