Jawan movie: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಜವಾನ್ HD ಕಾಪಿ ಲೀಕ್; ಚಿತ್ರ ತಂಡಕ್ಕೆ ಶಾಕ್!
ಮುಂಬಯಿ: ಶಾರುಖ್ ಖಾನ್ ಅಭಿನಯದ ʼಜವಾನ್ʼ ಸಿನಿಮಾ ವಿಶ್ವದೆಲ್ಲೆಡೆ ಇಂದು (ಸೆ.7 ರಂದು) ಅದ್ಧೂರಿಯಾಗಿ ತೆರೆಕಂಡಿದೆ.
ಶಾರುಖ್ ಖಾನ್ – ಅಟ್ಲಿ ಸಿನಿಮಾವನ್ನು ನೋಡಲು ಥಿಯೇಟರ್ ನತ್ತ ಜನಹರಿದು ಬರುತ್ತಿದ್ದಾರೆ. ಎಲ್ಲೆಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರು ಪಾಸಿಟಿವ್ ರೆಸ್ಪಾನ್ಸ್ ನೀಡುತ್ತಿದ್ದಾರೆ.
ಟ್ವಿಟರ್ ʼಜವಾನ್ʼ ಸಿನಿಮಾದ ವಿಮರ್ಶೆಗಳು ವೈರಲ್ ಆಗುತ್ತಿದೆ. ಸಿನಿಮಾವನ್ನು ನೋಡಿದವರು ಇದೊಂದು ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾವಾಗಲಿದೆ ಎಂದು ಹೇಳಿ ಶಾರುಖ್ ನಟನೆಯನ್ನು ಕೊಂಡಾಡಿದ್ದಾರೆ.
ಯಾವುದೇ ಒಂದು ದೊಡ್ಡ ಸಿನಿಮಾ ರಿಲೀಸ್ ಆದರೆ ಅದಕ್ಕೆ ಪೈರಸಿ ಕಾಟ ತಪ್ಪಿದ್ದಲ್ಲ. ಅದೇ ರೀತಿ ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾಕ್ಕೂ ಪೈರಸಿ ಕಾಟ ತಟ್ಟಿದೆ.
ಸೆ.24ಕ್ಕೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಡೇಟ್ ಫಿಕ್ಸ್
ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಮದುವೆ (Wedding) ಡೇಟ್ ಫಿಕ್ಸ್ ಆಗಿದೆ. ಇದೇ ಸೆಪ್ಟೆಂಬರ್ 24ರಂದು ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ರಾಜಕಾರಣಿ ಜೊತೆ ಸ್ಟಾರ್ ನಟಿಯ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ.
ಇದೇ ಸೆ.23 ಮತ್ತು 24ರಂದು ರಾಜಸ್ಥಾನದ ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸದಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಜರುಗಲಿದೆ. ಈ ಮದುವೆಗೆ 200ಕ್ಕೂ ಹೆಚ್ಚು ಅತಿಥಿಗಳು ಮತ್ತು 50ಕ್ಕೂ ಹೆಚ್ಚು ವಿವಿಐಪಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಹಳದಿ ಶಾಸ್ತ್ರ ಮೆಹೆಂದಿ ಸಂಗೀತ ಕಾರ್ಯಕ್ರಮವು ಸೆ.23ರಂದು ನಡೆಯಲಿದ್ದು, ಸೆ.24ರಂದು ಅದ್ಧೂರಿಯಾಗಿ ವಿವಾಹ ನಡೆಯಲಿದೆ. ಮದುವೆಯ ಬಳಿಕ ಹರಿಯಾಣದಲ್ಲಿ ಈ ಜೋಡಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಮದುವೆಗೆ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತು ನಿಕ್ ಜೋನಸ್ ಸೇರಿದಂತೆ ರಾಜಕೀಯ ರಂಗದ ಪ್ರಮುಖ ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾ ಬಳಿ ಪರಿಣಿತಿ ಜೋಡಿ ಮದುವೆ ಧಿರಿಸಿಗೆ ಆರ್ಡರ್ ನೀಡಿದ್ದಾರೆ. ಮದುವೆಯ ಕಾರ್ಯಗಳು ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ.
ಹಲವು ವರ್ಷಗಳ ಪ್ರೀತಿಗೆ ಪರಿಣಿತಿ- ರಾಘವ್ ಮೇ 13ರಂದು ಉಂಗುರದ ಮುದ್ರೆ ಒತ್ತಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಪರಿಣಿತಿ ಚೋಪ್ರಾ ಎಂಗೇಜ್ ಆಗಿದ್ದರು.