Match Fixing: 38ರ ಹರೆಯದ ಸ್ಟಾರ್ ಸ್ಪಿನ್ನರ್ ಬಂಧನ!
ಶ್ರೀಲಂಕಾದ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಬುಧವಾರ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಸಚಿತ್ರ ಸೇನಾನಾಯಕ್ ಅವರನ್ನು ಬಂಧಿಸಲಾಗಿದೆ. ಜನವರಿ 2012 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಆರಂಭಿಸಿದ ಸಚಿತ್ರಾ ಸೇನಾನಾಯಕೆ, ತಮ್ಮ ಬೌಲಿಂಗ್ ಆಕ್ಷನ್’ನಿಂದಾಗಿ ಸಖತ್ ಸುದ್ದಿ ಮಾಡಿದ್ದರು. ಆದರೆ ಇದೀಗ ಸಂಕಷ್ಟದಲ್ಲಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆರೋಪ!
ವಿದೇಶ ಪ್ರಯಾಣ ನಿರ್ಬಂಧ:
ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ತಿಂಗಳು ಸಚಿತ್ರಾ ಸೇನಾನಾಯಕೆ ಅವರ ಮೇಲೆ ಪ್ರಯಾಣ ನಿಷೇಧ ಹೇರುವಂತೆ ವಲಸೆ ಮತ್ತು ವಲಸೆಗಾರರ ನಿಯಂತ್ರಕ ಜನರಲ್’ಗೆ ಆದೇಶಿಸಿತ್ತು. ಅಟಾರ್ನಿ ಜನರಲ್ ಇಲಾಖೆಯು ನ್ಯಾಯಾಲಯದ ಈ ಆದೇಶವನ್ನು ಸ್ವೀಕರಿಸಿತ್ತಿ. ಮಾಜಿ ಆಫ್ ಸ್ಪಿನ್ನರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕದಿಂದ ಅಟಾರ್ನಿ ಜನರಲ್ ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಶ್ರೀಲಂಕಾ ಪರ ಅಂಕಿಅಂಶ:
38 ವರ್ಷ ವಯಸ್ಸಿನ ಸಚಿತ್ರಾ ಸೇನಾನಾಯಕೆ 2012 ಮತ್ತು 2016 ರ ನಡುವೆ ಶ್ರೀಲಂಕಾ ಪರ ಒಂದು ಟೆಸ್ಟ್, 49 ODI ಮತ್ತು 24 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಟೆಸ್ಟ್’ನಲ್ಲಿ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ODI ನಲ್ಲಿ 53 ಮತ್ತು T20 ನಲ್ಲಿ 25 ವಿಕೆಟ್’ಗಳನ್ನು ಪಡೆದಿದ್ದಾರೆ. ಮೇ 2014 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಅನುಮಾನಾಸ್ಪದ ಬೌಲಿಂಗ್ ಕ್ರಮಕ್ಕಾಗಿ ಇವರನ್ನು ಐಸಿಸಿ ನಿಷೇಧಿಸಿತ್ತು.