ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಣಿಪುರದಲ್ಲಿ ಕರ್ಪ್ಯೂ ವಿರೋಧಿಸಿ ಮಹಿಳೆಯರಿಂದ ಬೀದಿಗಿಳಿದು ಪ್ರತಿಭಟನೆ!

Twitter
Facebook
LinkedIn
WhatsApp
ಮಣಿಪುರದಲ್ಲಿ ಕರ್ಪ್ಯೂ ವಿರೋಧಿಸಿ ಮಹಿಳೆಯರಿಂದ ಬೀದಿಗಿಳಿದು ಪ್ರತಿಭಟನೆ!

ಇಂಫಾಲ್‌: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದದಲ್ಲಿ  ಕರ್ಫ್ಯೂ ವಿರೋಧಿಸಿ ಸಾವಿರಾರು ಮಹಿಳೆಯರು ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಪೊಲೀಸರ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಆಶ್ರವಾಯು ಸಿಡಿಸಿದ್ದು, 25 ಜನರು ಗಾಯಗೊಂಡಿರುವ ಘಟನೆ ಬಿಷ್ಣುಪುರ ಜಿಲ್ಲೆಯ ಚೌಗಕ್‌ಚಾವೊ ಇಖಾಯ್‌ನಲ್ಲಿ ನಡೆದಿದೆ.

ಕರ್ಫ್ಯೂ ಹೇರಿಕೆ ವಿರೋಧಿಸಿ ಬುಧವಾರ ಭದ್ರತಾ ಬ್ಯಾರಿಕೇಡ್‌ಗಳನ್ನು ತಡೆದು ಪ್ರತಿಭಟನೆಗಿಳಿದಿದ್ದ ಸಾವಿರಾರು ಜನರನ್ನು ಚದುರಿಸಲು ಭದ್ರತಾ ಪಡೆಗಳು ಹಲವು ಸುತ್ತಿನ ಆಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದರಿಂದ 25 ಮಂದಿ ಗಾಯಗೊಂಡಿದ್ದಾರೆ. ಬಳಿಕ ಗಾಯಾಳುಗಳನ್ನು ಬಿಷ್ಣುಪುರ ಜಿಲ್ಲಾಸ್ಪತ್ರೆ ಮತ್ತು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಕರ್ಫ್ಯೂ ಧಿಕ್ಕರಿಸಿದ ಜನರು ತಮ್ಮ ಮನೆಗಳಿಂದ ಹೊರಬಂದು, ಇಂಫಾಲ್‌ನಿಂದ ಚೌಗಕ್‌ಚಾವೊ ಇಖಾಯ್‌ಗೆ ಹೋಗುತ್ತಿದ್ದ ಪೊಲೀಸರು ಮತ್ತು ಇತರ ಕೇಂದ್ರೀಯ ಪಡೆಗಳ ಸಿಬ್ಬಂದಿಯನ್ನು ತಡೆಯಲು ರಸ್ತೆ ಮಧ್ಯದಲ್ಲೇ ಕುಳಿತುಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದ ಕುರಿತ ವಿಶ್ವಸಂಸ್ಥೆ ಹೇಳಿಕೆಗೆ ಭಾರತದ ತೀವ್ರ ಆಕ್ಷೇಪ

ಮಣಿಪುರದಲ್ಲಿ ಲೈಂಗಿಕ ಹಿಂಸೆ, ಕೊಲೆ, ಮನೆ ನಾಶ, ಬಲವಂತದ ಸ್ಥಳಾಂತರ ಸೇರಿದಂತೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ವಿಶ್ವಸಂಸ್ಥೆಯ ತಜ್ಞರ ವರದಿಯನ್ನು ಬಲವಾಗಿ ತಿರಸ್ಕರಿಸಿರುವ ಭಾರತ ‘ಮಣಿಪುರದ ಪರಿಸ್ಥಿತಿ ಶಾಂತವಾಗಿದೆ’ ಎಂದು ಪ್ರತಿಪಾದಿಸಿದೆ.

ಅಲ್ಲದೇ ವರದಿಯು ‘ತಪ್ಪುದಾರಿಗೆಳೆಯುವ ಮತ್ತು ಊಹೆಗಳಾಗಿದೆ’ ಎಂದಿದೆ. ವಿಶ್ವಸಂಸ್ಥೆಯ ವರದಿಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮಾನವ ಹಕ್ಕುಗಳ ಆಯೋಗ ‘ಮಣಿಪುರದ ಸ್ಥಿತಿ ಶಾಂತ ಮತ್ತು ಸ್ಥಿರವಾಗಿದೆ. ಅಲ್ಲದೇ ಮಣಿಪುರ ಸೇರಿದಂತೆ ಭಾರತದ ಜನರ ಹಕ್ಕುಗಳನ್ನು ರಕ್ಷಿಸಲು ಮತ್ತು ಶಾಂತಿ ಕಾಪಾಡಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದೆ. ಕಳೆದ 4 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿದ್ದ ಮಣಿಪುರ ಕುರಿತು ಕಳವಳ ವ್ಯಕ್ತಪಡಿಸಿದ್ದ ವಿಶ್ವಸಂಸ್ಥೆಯ ತಜ್ಞರು ಈ ಬಗ್ಗೆ ಭಾರತಕ್ಕೆ ಮುಜುಗರವೆನಿಸುವಂತ ವರದಿ ನೀಡಿದ್ದರು. 

2019ರಲ್ಲಿ 3 ಲಕ್ಷ ಕೋಟಿಗಾಗಿ ಸರ್ಕಾರ ಆರ್‌ಬಿಐ ಮಧ್ಯೆ ಜಟಾಪಟಿ ನಡೆದಿತ್ತು: RBI ಮಾಜಿ ಉಪ ಗವರ್ನರ್

ನವದೆಹಲಿ: 2019ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರವೂ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನಿಂದ 2ರಿಂದ 3 ಲಕ್ಷ ಕೋಟಿ ರು. ಹಣ ಕೇಳಿತ್ತು. ಅದನ್ನು ಕೊಡಲು ಆರ್‌ಬಿಐ ನಿರಾಕರಿಸಿದ್ದರಿಂದ ತಿಕ್ಕಾಟ ಏರ್ಪಟ್ಟಿತ್ತು ಎಂದು ಕೇಂದ್ರೀಯ ಬ್ಯಾಂಕ್‌ನ ಮಾಜಿ ಉಪಗವರ್ನರ್‌ ವಿರಳ್‌ ಆಚಾರ್ಯ ಅವರು ಹೇಳಿದ್ದಾರೆ. ಕ್ವೆಸ್ಟ್‌ ಫಾರ್‌ ರೆಸ್ಟೋರಿಂಗ್‌ ಫೈನಾನ್ಷಿಯಲ್‌ ಸ್ಟೆಬಿಲಿಟಿ ಇನ್‌ ಇಂಡಿಯಾ ಎಂಬ ಹೆಸರಿನ ಪುಸ್ತಕವನ್ನು 2020ರಲ್ಲಿ ಹೊರ ತಂದಿದ್ದ ವಿರಳ್‌ ಅವರು, ಇದೀಗ ಆ ಪುಸ್ತಕದ ಮುನ್ನುಡಿಗೆ ತಿದ್ದುಪಡಿ ತಂದಿದ್ದಾರೆ. ಅದರಲ್ಲಿ ಆರ್‌ಬಿಐ- ಸರ್ಕಾರದ ಸಂಘರ್ಷ ವಿಚಾರದ ಪ್ರಸ್ತಾಪವಿದೆ. ಗಮನಾರ್ಹ ಎಂದರೆ, 2018ರಲ್ಲಿ ಉಪನ್ಯಾಸ ಕಾರ್ಯಕ್ರಮವೊಂದರಲ್ಲೂ ಇದೇ ವಿಷಯವನ್ನು ಅವರು ಹೇಳಿದ್ದರು.

ಕೇಂದ್ರ ಸರ್ಕಾರಕ್ಕೆ ಲಾಭಾಂಶ ನೀಡಿದ ಬಳಿಕವೂ ಆರ್‌ಬಿಐ (RBI) ಒಂದಷ್ಟು ಹಣವನ್ನು ತನ್ನ ಬಳಿ ಇಟ್ಟುಕೊಳ್ಳುತ್ತದೆ. ಅಪನಗದೀಕರಣಕ್ಕೆ ಮೂರು ವರ್ಷ ಮುನ್ನ ಆರ್‌ಬಿಐ ದಾಖಲೆ ಮಟ್ಟದ ಲಾಭ ಗಳಿಸಿ ಕೇಂದ್ರ ಸರ್ಕಾರಕ್ಕೆ (Union Govt) ಹಣ ವರ್ಗಾವಣೆ ಮಾಡಿತ್ತು. ಅಪನಗದೀಕರಣ ವರ್ಷದಲ್ಲಿ ನೋಟು ಮುದ್ರಣದಿಂದಾಗಿ ಕೇಂದ್ರ ಸರ್ಕಾರಕ್ಕೆ (Central Govt) ನೀಡಬೇಕಿದ್ದ ಹಣದ ಪ್ರಮಾಣ ಕಡಿಮೆಯಾಗಿತ್ತು. ಕೇಂದ್ರ ಸರ್ಕಾರ ಷೇರು ವಿಕ್ರಯದಿಂದ ಹಣ ಹೊಂದಿಸಲು ವಿಫಲವಾಗಿತ್ತು. ಹೀಗಾಗಿ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಲು ಹಣ ನೀಡುವಂತೆ ಆರ್‌ಬಿಐ ಮೇಲೆ ಒತ್ತಡ ಹೇರಿತ್ತು ಎಂದು ಮುನ್ನುಡಿಯಲ್ಲಿ ವಿರಳ್‌ ವಿವರಿಸಿದ್ದಾರೆ.

ಆರ್‌ಬಿಐ ಹಣ ಕೊಡಲು ನಿರಾಕರಿಸಿದಾಗ ರಿಸರ್ವ್ ಬ್ಯಾಂಕ್‌ (Reserve Bank) ಕಾಯ್ದೆಯ ಸೆಕ್ಷನ್‌ 7 ಅನ್ನು ಜಾರಿಗೊಳಿಸಿ ಹಣ ಪಡೆಯುವ ಬಗ್ಗೆ ಚರ್ಚೆಯಾಗಿತ್ತು. ಆ ಸೆಕ್ಷನ್‌ ಜಾರಿಗೊಳಿಸುವುದು ಆರ್‌ಬಿಐನ 80 ವರ್ಷಗಳ ಇತಿಹಾಸದಲ್ಲಿ ಅದೇ ಮೊದಲಾಗಿತ್ತು. ಅದೇ ಸಂದರ್ಭದಲ್ಲಿ ಆರ್‌ಬಿಐ ಗವರ್ನರ್‌ (RBI Governor)ಆಗಿದ್ದ ಊರ್ಜಿತ್‌ ಪಟೇಲ್‌ (Urjith Patel) ಅವರು ತಮ್ಮ ಮೂರು ವರ್ಷಗಳ ಅವಧಿಗೆ ಇನ್ನೂ 9 ತಿಂಗಳು ಇರುವಾಗಲೇ ರಾಜೀನಾಮೆ ನೀಡಿದರು. ಕೊನೆಗೆ 2019ರಲ್ಲಿ ಕೇಂದ್ರ ಸರ್ಕಾರಕ್ಕೆ 1.76 ಲಕ್ಷ ಕೋಟಿ ರು. ಹಣ ವರ್ಗಾವಣೆಯಾಯಿತು ಎಂದು ತಿಳಿಸಿದ್ದಾರೆ.

ವಿರಳ್‌ ಆಚಾರ್ಯ ಅವರು ತಮ್ಮ ಅವಧಿ ಮುಕ್ತಾಯಗೊಳ್ಳಲು ಆರು ತಿಂಗಳು ಇರುವಾಗಲೇ ಉಪ ಗವರ್ನರ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist