ಪಕ್ಕದ ಮನೆಯ ನಾಯಿ ಕಚ್ಚಿದ ವಿಷಯ ಮುಚ್ಚುತ್ತಾ ಬಾಲಕ; ಚಿಕಿತ್ಸೆ ಫಲಿಸದೆ ತಿಂಗಳ ಬಳಿಕ ಸಾವು!
ಪಕ್ಕದ ಮನೆಯ ನಾಯಿ ಕಚ್ಚಿದ್ದ ವಿಷಯವನ್ನು ಪೋಷಕರಿಂದ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ಒಂದೂವರೆ ತಿಂಗಳ ಬಳಿಕ ರೇಬಿಸ್(Rabies)ನಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ. ಶಾವೇಜ್ನ ಪಕ್ಕದ ಮನೆಯ ಮಹಿಳೆಯೊಬ್ಬರು ಬೀದಿನಾಯಿಗಳನ್ನು ಸಾಕುತ್ತಾರೆ ಮತ್ತು ಆಹಾರ ನೀಡುತ್ತಾರೆ ಮತ್ತು ಐದರಿಂದ ಆರು ನಾಯಿಗಳು ಈ ಪ್ರದೇಶದಲ್ಲೇ ಇರುತ್ತದೆ. ಸಬೇಜ್ ಎಂಬ ಬಾಲಕನನ್ನು ಆ ನಾಯಿಗಳಲ್ಲಿ ಒಂದು ನಾಯಿ ಕಚ್ಚಿದೆ ಎನ್ನಲಾಗಿದೆ. ಈ ಹಿಂದೆಯೂ ಈ ನಾಯಿಗಳು ಇತರರಿಗೆ ಕಚ್ಚಿವೆ ಎನ್ನಲಾಗಿದೆ.
ಭಯದಿಂದ, ಸಬೆಜ್ ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ಹೇಳಲಿಲ್ಲ ಮತ್ತು ನಾಲ್ಕು ದಿನಗಳ ನಂತರ ರೇಬೀಸ್ ರೋಗಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿತ್ತು ಎಂದು ಆತನ ಅಜ್ಜ ಮತ್ಲುಬ್ ಅಹ್ಮದ್ ಹೇಳಿದ್ದಾರೆ. ಕ್ರಮೇಣವಾಗಿ ಸಬೇಜ್ ಗಾಳಿ ಮತ್ತು ನೀರನ್ನು ಕಂಡರೆ ಭಯಪಡುತ್ತಿದ್ದ, ಸದಾ ಕತ್ತಲೆಯಲ್ಲಿಯೇ ಇರುತ್ತಿದ್ದ, ಆಗಾಗ ಭಯಗೊಂಡು ಗಲಾಟೆ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಸಬೇಜ್ ಅವರನ್ನು ಘಾಜಿಯಾಬಾದ್, ಮೀರತ್ ಮತ್ತು ದೆಹಲಿಯ ಏಮ್ಸ್ನ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಚಿಕಿತ್ಸೆಗಾಗಿ ಬುಲಂದ್ಶಹರ್ಗೆ ಕೂಡ ಕರೆದೊಯ್ಯಲಾಯಿತು. ತನ್ನ ತಂದೆ ಯಾಕೂಬ್ನೊಂದಿಗೆ ಬುಲಂದ್ಶಹರ್ನಿಂದ ಹಿಂದಿರುಗುತ್ತಿದ್ದಾಗ ಶಾವೇಜ್ ಮೃತಪಟ್ಟಿದ್ದಾನೆ.
ಶಾವೇಜ್ ಅವರ ಕುಟುಂಬವು ಘಟನೆಯ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದೆ ಮತ್ತು ಇಂತಹ ಘಟನೆಗಳು ನಡೆಯದಂತೆ ಆಡಳಿತ ಮತ್ತು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮಹಿಳೆಗೆ ನೋಟಿಸ್ ಜಾರಿ ಮಾಡಿದೆ, ಅವರು ಅನಧಿಕೃತವಾಗಿ ನಾಯಿಯನ್ನು ಸಾಕುತ್ತಿದ್ದು, ಅವು ಬೀದಿಯಲ್ಲಿ ಓಡಾಡುವವರನ್ನು ಕಚ್ಚುತ್ತಿದೆ ಎಂದು ಹೇಳಿದ್ದಾರೆ.
ಈ ನಾಯಿಗಳಿಗೆ ರೇಬಿಸ್ ಲಸಿಕೆಗಳನ್ನು ನೀಡಲಾಗಿದೆಯೇ ಎಂದು ಕಾರ್ಪೊರೇಷನ್ ಪ್ರಶ್ನಿಸಿದೆ. ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಡಿಯಲ್ಲಿ, ಸಾಕು ನಾಯಿಗಳಿಗೆ ನೋಂದಣಿ ಮತ್ತು ಲಸಿಕೆ ಹಾಕುವುದು ಕಡ್ಡಾಯವಾಗಿದೆ.
ನಾಯಿಗಳ ನೋಂದಣಿ ವಿವರಗಳೊಂದಿಗೆ ನೋಟಿಸ್ಗೆ ಪ್ರತಿಕ್ರಿಯಿಸಲು ಮಹಿಳೆಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ, ವಿಫಲವಾದರೆ 5,000 ರೂ. ದಂಡ ವಿಧಿಸಲಾಗುತ್ತದೆ.
ವರದಕ್ಷಿಣೆ ಬೇಕೆಂದು ಪತ್ನಿ ಕೈಗೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟ ಪತಿ
ಪತ್ನಿ ವರದಕ್ಷಿಣೆ ನೀಡಲಿಲ್ಲ ಎಂದು ಪತಿಯೊಬ್ಬ ಆಕೆಯ ಕೈಗೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತವರುಮನೆಯಿಂದ ಐದು ಲಕ್ಷ ರೂ. ವರದಕ್ಷಿಣೆ ತರುತ್ತೇನೆ ಎಂದು ಹೇಳುವವರೆಗೂ ಮೇಲಕ್ಕೆತ್ತುವುದಿಲ್ಲ ಎಂದು ಚಿತ್ರಹಿಂಸೆ ನೀಡಿದ್ದಾನೆ. ಈ ಘಟನೆ ಆಗಸ್ಟ್ 20 ರಂದು ನೀಮಚ್ನಲ್ಲಿ ಸಂಭವಿಸಿದೆ.
ವಿವರಗಳ ಪ್ರಕಾರ, ರಾಕೇಶ್ ಕಿರ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ಪತ್ನಿ ಉಷಾಳ ಕೈಗಳನ್ನು ಕಟ್ಟಿ ಬಾವಿಯಲ್ಲಿ ತೂಗುಹಾಕಿದ್ದ. ಬಳಿಕ ವಿಡಿಯೋವನ್ನು ಪತ್ನಿಯ ಸಂಬಂಧಿಕರಿಗೆ ಕಳುಹಿಸಿದ್ದು, ಬಳಿಕ ಗ್ರಾಮದ ಕೆಲವರನ್ನು ಸಂಪರ್ಕಿಸಿ ಮಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ರಾಕೇಶ್ನನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಆರೋಪಿ ವರದಕ್ಷಿಣೆಗಾಗಿ 3 ರಿಂದ 5 ಲಕ್ಷ ರೂ. ಸದಾ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಉಷಾ ಅವರಿಗೆ 3 ವರ್ಷಗಳ ಹಿಂದೆ ಮಧ್ಯಪ್ರದೇಶದ ಜಾವಾದ್ನ ಕಿರ್ಪುರ ನಿವಾಸಿ ರಾಕೇಶ್ ಕೀರ್ ಎಂಬುವವರೊಂದಿಗೆ ವಿವಾಹವಾಗಿತ್ತು. ಅಂದಿನಿಂದ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಆಗುತ್ತಿರುವ ಈ 40 ಸೆಕೆಂಡ್ಗಳ ವಿಡಿಯೋದಲ್ಲಿ ಮಹಿಳೆ ತನ್ನನ್ನು ರಕ್ಷಿಸುವಂತೆ ಮನವಿ ಮಾಡಿದ್ದಾಳೆ.