ನಾನು ಅಪ್ಪ - ಅಮ್ಮನಿಗೆ ಹುಟ್ಟಿದ್ದು ; ಸನಾತನ ಧರ್ಮಕ್ಕೆ ಹುಟ್ಟಿಲ್ಲ : ನಟ ಪ್ರಕಾಶ್ ರಾಜ್!
ಬೆಂಗಳೂರು: ʻʻನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನನ್ನ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ . ನಾನು ಧರ್ಮದ ವಿರುದ್ಧ ಅಲ್ಲ. ಪ್ರಧಾನಿ ನರೇಂದ್ರ ಮೋದಿಯ ವಿರುದ್ಧʼ- ಹೀಗೆಂದು ಹೇಳಿದ್ದಾರೆ ಬಹುಭಾಷಾ ನಟ ಪ್ರಕಾಶ್ ರಾಜ್ . ಹಿಂದು ಧರ್ಮದ ವಿಚಾರದಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿಚಾರದಲ್ಲಿ Just Asking ಹೆಸರಲ್ಲಿ ಹಲವು ಪ್ರಶ್ನೆಗಳನ್ನು ಕೇಳುವ ಪ್ರಕಾಶ್ ರಾಜ್ ಸನಾತನ ಧರ್ಮ ವಿವಾದಕ್ಕೂ ಎಂಟ್ರಿ ಕೊಟ್ಟಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಗ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ನೀಡಿದ್ದ ಹೇಳಿಕೆಗೆ ದೇಶಾದ್ಯಂತ ಬಹುತೇಕ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈ ಮಧ್ಯೆ ಬಹುಭಾಷಾ ನಟ ಪ್ರಕಾಶ್ ರಾಜ್ ಮಾಡಿದ್ದ ಟ್ವೀಟ್ಗಳು ಸಹಾ ಸುದ್ದಿಯಾಗುತ್ತಿವೆ ಮಂಗಳವಾರ ಗೌರಿ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಾವೂ ಹುಟ್ಟಿರುವುದು ಸನಾತನ ಧರ್ಮಕ್ಕಲ್ಲ, ನಮ್ಮ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ ಎಂದು ಖಾಸಗಿ ಚಾನಲ್ನಲ್ಲಿ ವ್ಯಕ್ತಿಯೊಬ್ಬ ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಉದಯನಿಧಿ ಹೇಳಿಕೆ ನಂತರ ಪ್ರಕಾಶ್ ರಾಜ್ ಒಂದೆರಡು ಟ್ವೀಟ್ ಮಾಡಿದ್ದರು. ಅದರಲ್ಲಿ ಸನಾತನ ಧರ್ಮವನ್ನು ವ್ಯಂಗ್ಯ ಮಾಡಿ ತನಾತನಿ ಎಂದು ಹೇಳಿದ್ದರು. ಅದರಲ್ಲಿ ಮೊದಲ ಟ್ವೀಟ್ನಲ್ಲಿ ಹಿಂದುಗಳು ತನಾತನಿಗಳಲ್ಲ, ತನಾತನಿಗಳು ಮಾನವ ವಿರೋಧಿಗಳೆಂದು ಹೇಳಿ ಅಂಬೇಡ್ಕರ್ ಮತ್ತು ಪೆರಿಯಾರ್ ಫೋಟೋವನ್ನು ಹಂಚಿಕೊಂಡಿದ್ದರು. ಮತ್ತೊಂದು ಟ್ವೀಟ್ನಲ್ಲಿ ಮೋದಿ ಸಾಧು-ಸಂತರ ಜೊತೆಯಿರುವ ಫೋಟೋವನ್ನು ಟ್ವೀಟ್ ಮಾಡಿ, ಪ್ರೀತಿಯ ಪ್ರಜೆಗಳೆ .. ಇದು ಭವಿಷ್ಯದ ಸಾಧ್ಯತೆ .. #ತನಾತನಿ ಸಂಸತ್ತು .. ನಿಮಗಿದು ಒಪ್ಪಿಗೆಯೆ ಎಂದು ಬರೆದುಕೊಂಡಿದ್ದರು.
ಗೌರಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ” ನಾನು ಇಲ್ಲಿಗೆ ಬರುವ ಮುನ್ನ ಖಾಸಗಿ ಚಾನೆಲ್ನಲ್ಲಿ ಸಂದರ್ಶನಕ್ಕೆ ಹೋಗಿದ್ದೆ, ಅಲ್ಲಿ ಅದಾಲತ್ ನಡೆಸುತ್ತೇವೆ ಎಂದು ಹೇಳಿದ್ದರು. ಸುಮಾರು 30 ಮಂದಿ ಇದ್ದರು, ಅವರೆಲ್ಲರು ಕಾವಿ ಧರಿಸಿದ್ದರು. ಅದರಲ್ಲೊಬ್ಬ ನೀವು ಕಾಂಗ್ರೆಸ್ನವರ ಎಂದ, ಅದಕ್ಕೆ ನಾನು ನಿಮ್ಮ ಪಕ್ಷದ ವಿರೋಧಿ ಎಂದು ಉತ್ತರಿಸಿದ್ದಾಗಿ ” ಪ್ರಕಾಶ್ ರಾಜ್ ವೇದಿಕೆಯಲ್ಲಿ ತಿಳಿಸಿದರು.
ಮಾತು ಮುಂದುವರಿಸಿ ” ಮತ್ತೊಬ್ಬ ನೀವು ಸನಾತನ ಧರ್ಮ ಅಲ್ವಾ ಎಂದು ಪ್ರಶ್ನೆ ಕೇಳಿದಾ, ಅದಕ್ಕೆ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಾನು ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ” ಎಂದು ಎಂದು ಹೇಳಿದೆ. ನಾನು ಧರ್ಮದ ವಿರುದ್ಧ ಅಲ್ಲ, ಪ್ರಧಾನಿಯ ವಿರುದ್ಧ. ಮೋದಿ ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಹೋಮ ಹವನ ಮಾಡಿಸಿದ್ರು, ಆದರೆ ನಮ್ಮ ಸಂಸತ್, ಅಲ್ಲಿ ಹೋಮ ಹವನ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ದೇಹಕ್ಕೆ ಗಾಯವಾದಾಗ ನಾವು ಮೌನವಾಗಿದ್ದರೆ ನಡೆಯುತ್ತೆ, ಆದರೆ ದೇಶಕ್ಕೆ ಆದಾಗ ಸುಮ್ಮನಿದ್ರೆ, ಅದು ದೇಶವನ್ನ ಸುಡುತ್ತದೆ. ಹಾಗಾಗಿ ನಾವು ಧ್ವನಿ ಎತ್ತಬೇಕಾಗಿದೆ. ಆದರೆ ಧ್ವನಿ ಎತ್ತಿದರೆ ಕೊಲ್ಲುತ್ತೇವೆ ಎನ್ನುತ್ತಾರೆ, ಕೈಯಲ್ಲಿ ಆಯುಧ ಹಿಡಿದು ಬರುತ್ತಾರೆ. ಆದರೆ ಆಯುಧ ಹಿಡಿದು ಬರುವವರೆಲ್ಲಾ, ವೀರರಲ್ಲ, ಅವರೆಲ್ಲರೂ ಹೇಡಿಗಳು ಎಂದು ಹೇಳಿದ್ದಾರೆ.
ಯಾವುದನ್ನೂ ನಮ್ಮ ಮೇಲೆ ಬಲವಂತವಾಗಿ ಏರಬಾರದು, ಆದರೆ ಮೋದಿಯಿಂದ ಅದು ಆಗುತ್ತಿದೆ, ಇದಕ್ಕೆಲ್ಲಾ ನಮ್ಮ ವಿರೋಧ ಇದೆ ಎಂದು ಪ್ರಕಾಶ್ ರಾಜ್ ಹೇಳಿದರು. ಈ ಕಾರ್ಯಕ್ರಮದಲ್ಲಿ ರೈತ ನಾಯಕ ರಾಕೇಶ್ ಟೀಕಾಯತ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕವಿತಾ ಲಂಕೇಶ್, ಮುಸ್ಲಿಂ ಒಕ್ಕೂಟದ ಮುಖಂಡ ಯಾಸಿನ್ ಮಲ್ಪೆ, ಟಿ ಎನ್ ಸೀತಾರಂ, ಬಿಟಿ ಲಲಿತಾ ನಾಯಕ್ ಮುಂತಾದವರು ಭಾಗವಹಿಸಿದ್ದರು.