ಭೀಕರ ಅಪಘಾತ: ಲಾರಿಗೆ ಕಾರು ಡಿಕ್ಕಿ, ನಾಲ್ವರ ಸಾವು
ಚಿತ್ರದುರ್ಗ ಸೆ.04: ನಿಂತಿದ್ದ ಲಾರಿಗೆ (Lory) ಹಿಂದಿನಿಂದ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಮಲ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ (National Highway) 150ರಲ್ಲಿ ನಡೆದಿದೆ.
ಇನ್ನುಳಿದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಘಟನೆಯಲ್ಲಿ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ನಿಂತಿದ್ದ ಲಾರಿಗೆ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜು ಆಗಿದೆ. ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಕ್ಕರೆ ಅಂತ ಡ್ರೈನೇಜ್ ಪೈಪ್ ಕ್ಲೀನರ್ ಪೌಡರ್ ತಿಂದ ಮಕ್ಕಳು; ಆಸ್ಪತ್ರೆಗೆ ದಾಖಲು
ಚಿಕ್ಕಬಳ್ಳಾಪುರ: ರಸ್ತೆ ಬದಿಯಲ್ಲಿ ಸಿಕ್ಕ ಡ್ರೈನೇಜ್ ಪೈಪ್ ಕ್ಲೀನರ್ (Drinage Pipe Cleaner) ಪ್ಯಾಕೆಟ್ನಲ್ಲಿದ್ದ ಪೌಡರ್ ಅನ್ನು ಸಕ್ಕರೆ ಎಂದು ತಿಂದ ಮೂವರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ಪಟ್ಟಣದಲ್ಲಿ ನಡೆದಿದೆ.
ದೇವನಹಳ್ಳಿಯ ವಿನಾಯಕನಗರದ ಸುಚಿತ್ರಾ (3), ಲೋಹಿತ್ಯಾ (4) ಹಾಗೂ ವೇದಾಂತ್ (2) ಅಸ್ವಸ್ಥರಾಗಿರುವ ಮಕ್ಕಳು. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗಿದ್ದರು. ಮನೆ ಬಳಿ ಆಟವಾಡುತ್ತಿದ್ದ ಮಕ್ಕಳಿಗೆ ರಸ್ತೆ ಬದಿಯಲ್ಲಿ ಡ್ರೈನೇಜ್ ಕ್ಲೀನರ್ ಪ್ಯಾಕೆಟ್ ಸಿಕ್ಕಿದೆ. ಈ ವೇಳೆ ಸಕ್ಕರೆ ಎಂದುಕೊಂಡು ಮೂವರು ಮಕ್ಕಳು ಡ್ರೈನೇಜ್ ಪೈಪ್ ಕ್ಲೀನ್ ಮಾಡುವ ಪೌಡರ್ ಸೇವಿಸಿದ್ದಾರೆ.
ಇದರಿಂದ ವಾಂತಿ ಮಾಡಿಕೊಂಡು ನರಳಾಡುತ್ತಿದ್ದ ಮಕ್ಕಳನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಸದ್ಯ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.