ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು
ದಾವಣಗೆರೆ: ಅಶ್ಲೀಲ ವಿಡಿಯೋ (Video) ಹರಿಬಿಡುವ ಬೆದರಿಕೆಗೆ (Threat) ಬೇಸತ್ತ ವಿದ್ಯಾರ್ಥಿನಿಯೊಬ್ಬಳು (Student) ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಜಗಳೂರು (Jagaluru) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಲೆಗೆ ಹೋಗುವ ವೇಳೆ 17 ವರ್ಷದ ವಿದ್ಯಾರ್ಥಿನಿಗೆ ಇಬ್ಬರು ಯುವಕರು ಪರಿಚಯವಾಗಿದ್ದರು. ಒಂದು ದಿನ ಬೇಕರಿ ತಿನಿಸಿನಲ್ಲಿ ಮತ್ತು ಬರುವ ಔಷಧಿ ಹಾಕಿದ ಯುವಕರು ಆಕೆಯ ಅಶ್ಲೀಲ ವಿಡಿಯೋವನ್ನು ಮಾಡಿದ್ದರು. ಅಲ್ಲದೇ ತಾವು ಕರೆದಾಗ ಬರದಿದ್ದರೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಯುವಕರ ಈ ಬೆದರಿಕೆಗೆ ಬೇಸತ್ತ ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಘಟನೆಯ ಬಳಿಕ ಆಕೆಯನ್ನು ಉಡುಪಿಯ (Udupi) ಮಣಿಪಾಲ ಆಸ್ಪತ್ರೆಗೆ (Manipal Hospital) ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಆರೋಪಿಗಳಿಗೆ ಶಿಕ್ಷೆ ಆಗಲಿ ಎಂಬ ಗಾಯಾಳು ವಿದ್ಯಾರ್ಥಿನಿ ಹೇಳಿಕೆ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಪೊಲೀಸರಿಂದ ಕಿರುಕುಳ ಆರೋಪ – ಸೆಲ್ಫಿ ವೀಡಿಯೋ ಮಾಡಿ ಮಹಿಳೆ ಆತ್ಮಹತ್ಯೆ
ರಾಮನಗರ: ಪೊಲೀಸರು (Police) ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚನ್ನಪಟ್ಟಣದ (Channapatna) ಕೋಟೆ ಬಡಾವಣೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಮಾಧುರಿ ಎಂದು ಗುರುತಿಸಲಾಗಿದೆ. ನಿದ್ರೆ ಮಾತ್ರೆ ಸೇವಿಸಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ವೀಡಿಯೋದಲ್ಲಿ ಚನ್ನಪಟ್ಟಣ ಟೌನ್ ಪೊಲೀಸರ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾಳೆ.
ಗಲಾಟೆ ವಿಚಾರವಾಗಿ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದು, ಈ ವೇಳೆ ಪೊಲೀಸರು ಅವಮಾನ ಮಾಡಿದ್ದಾರೆ. ನಿನ್ನ ಮೇಲೆಯೇ ಹಲವು ಕೇಸ್ಗಳಿವೆ ಎಂದು ಮೊಬೈಲ್ ಕಿತ್ತುಕೊಂಡು ಕಳುಹಿಸಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಅಲ್ಲದೇ ನನಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಳು.
ಬಳಿಕ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ಮಪ್ಪಿದ್ದಾಳೆ. ಈ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.