ಇಸ್ರೊ ವಿಜ್ಞಾನಿ ಮತ್ತು ಚಂದ್ರಯಾನ-3 ಉಡಾವಣೆಯ ಕೌಂಟ್ ಡೌನ್ ಧ್ವನಿಯಾಗಿದ್ದ ಎನ್ ವಲರ್ಮತಿ ನಿಧನ!
ಚೆನ್ನೈ: ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಯ ಹಿಂದೆ ಸಮಯವನ್ನು ಕೌಂಟ್‌ಡೌನ್ ಮಾಡಲು ಧ್ವನಿ ನೀಡುತ್ತಿದ್ದ ವಿಜ್ಞಾನಿ ಶ್ರೀಮತಿ ವಲರ್ಮತಿ (Scientist Valarmathi) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ವಲರ್ಮತಿ ಅವರು ರಾಕೆಟ್‌ಗಳ ಉಡಾವಣೆ ವೇಳೆ ಸಮಯವನ್ನು ಕೌಂಟ್‌ಡೌನ್ ಮಾಡುವ ವೇಳೆ ಧ್ವನಿ ನೀಡುತ್ತಿದ್ದರು. ಇತ್ತೀಚೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಚಂದ್ರಯಾನ-3ರ ಉಡಾವಣೆ ಮತ್ತು ಲ್ಯಾಂಡಿಂಗ್ ವೇಳೆಯೂ ವಲರ್ಮತಿ ಅವರು ಸಮಯವನ್ನು ಕೌಂಟ್‌ಡೌನ್ ಮಾಡಲು ಧ್ವನಿ ನೀಡಿದ್ದರು. ಇದೀಗ ಅವರು ನಿಧನ ಹೊಂದಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ವಿಜ್ಞಾನಿ ವಲರ್ಮತಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಅದರೆ ಅವರು ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಚಂದ್ರಯಾನ-3 ಯೋಜನೆ ಜುಲೈನಲ್ಲಿ ಉಡಾವಣೆ ಆಗುವ ವೇಳೆ ವಿಜ್ಞಾನಿ ಎನ್ ವಲರ್ಮತಿ ಅವರು ತಮ್ಮ ಅಪ್ರತಿಮ ಕಂಠಸಿರಿಯಲ್ಲಿ ಸಮಯವನ್ನು ಕೌಂಟ್‌ಡೌನ್ ಮಾಡುತ್ತಿದ್ದರು. ಅವರು ಸೆಕೆಂಡ್ಸ್‌ಗಳನ್ನು ಹೇಳುತ್ತಿದ್ದಂತೆ ಜನರ ಎದೆಬಡಿತ ಕೂಡ ಜೋರಾಗುತ್ತಿತ್ತು. ಆದರೆ ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳ ಕ್ಷಣಗಣನೆಯಲ್ಲಿ ಇನ್ನು ಮುಂದೆ ವಲರ್ಮತಿ ಅವರ ಧ್ವನಿ ಇರುವುದಿಲ್ಲ ಎಂಬುದು ವಿಜ್ಞಾನ ಸಮುದಾಯ ಮತ್ತು ಜನಸಾಮಾನ್ಯರನ್ನು ದುಃಖಿತರನ್ನಾಗಿಸಿದೆ.
ತಮಿಳುನಾಡು ಮೂಲದ ವಿಜ್ಞಾನಿ ವಲರ್ಮತಿ ಅವರಿಗೆ 64 ವರ್ಷ ವಯಸ್ಸಾಗಿತ್ತು. ಅವರು ಕಳೆದ ಹತ್ತಾರು ವರ್ಷಗಳಿಂದ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.