ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಗಂಡಸರು ನನ್ನನ್ನು ಮುಟ್ಟಬೇಡಿ, ನಾನು ಪವಿತ್ರಳಾಗಿದ್ದೇನೆ’: ರಾಖಿ ಸಾವಂತ್

Twitter
Facebook
LinkedIn
WhatsApp
ಗಂಡಸರು ನನ್ನನ್ನು ಮುಟ್ಟಬೇಡಿ, ನಾನು ಪವಿತ್ರಳಾಗಿದ್ದೇನೆ’: ರಾಖಿ ಸಾವಂತ್

ನಟಿ ರಾಖಿ ಸಾವಂತ್​ (Rakhi Sawant) ಅವರು ಪ್ರತಿ ದಿನವೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಪತಿ ಆದಿಲ್​ ಖಾನ್​ ದುರಾನಿ ಜೊತೆ ಅವರು ಕಿರಿಕ್​ ಮಾಡಿಕೊಂಡು ಹಲವು ತಿಂಗಳುಗಳು ಕಳೆದಿವೆ. ಆ ನೋವಲ್ಲೇ ಅವರು ಕಣ್ಣೀರು ಹಾಕುತ್ತಾ ಮೆಕ್ಕಾ (Mecca) ಮದೀನಾಗೆ ಭೇಟಿ ನೀಡಿ ಬಂದಿದ್ದಾರೆ. ಯಾತ್ರೆ ಮುಗಿಸಿ ಬಂದ ಬಳಿಕ ಅವರ ಮಾತಿನ ಧಾಟಿ ಬದಲಾಗಿದೆ. ವೇಷ-ಭೂಷಣ ಕೂಡ ಬದಲಾಗಿಹೋಗಿದೆ. ರಾಖಿ ಸಾವಂತ್​ ಈಗ ಮೈ ತುಂಬಾ ಬಟ್ಟೆ ಧರಿಸುತ್ತಿದ್ದಾರೆ. ‘ಗಂಡಸರು ಹತ್ತಿರಕ್ಕೆ ಬಂದರೆ ಹುಷಾರ್​’ ಎಂದು ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಆ ರೀತಿ ಅವರು ಕೂಗಾಡಿದ ವಿಡಿಯೋ (Rakhi Sawant Viral Video) ವೈರಲ್​ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಗಂಡಸರು ನನ್ನನ್ನು ಮುಟ್ಟಬೇಡಿ, ನಾನು ಪವಿತ್ರಳಾಗಿದ್ದೇನೆ’: ರಾಖಿ ಸಾವಂತ್

ರಾಖಿ ಸಾವಂತ್​ ಎಲ್ಲಿಯೇ ಹೋದರೂ ಅಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅವರ ವಿಡಿಯೋ ಹಾಗೂ ಫೋಟೋಗೋಸ್ಕರ ನೂಕುನುಗ್ಗಲು ಮಾಡಲಾಗುತ್ತದೆ. ಅದನ್ನು ರಾಖಿ ಸಾವಂತ್​ ಎಂಜಾಯ್​ ಮಾಡುತ್ತಾರೆ ಕೂಡ. ಆದರೆ ಇತ್ತೀಚೆಗೆ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ. ತಮ್ಮ ಫೋಟೋ ಕ್ಲಿಕ್ಕಿಸಲು ಬಂದ ಪಾಪರಾಜಿಗಳು ಮತ್ತು ಪುರುಷ ಅಭಿಮಾನಿಗಳನ್ನು ಕಂಡು ರಾಖಿ ಸಾವಂತ್​ ಕೂಗಾಡಿದ್ದಾರೆ. ಮೆಕ್ಕಾ ಮದೀನಾಗೆ ಹೋಗಿ ಬಂದ ಬಳಿಕ ಅವರಲ್ಲಿ ಆಗಿರುವ ಈ ಬದಲಾವಣೆ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.

ಗಂಡಸರು ನನ್ನನ್ನು ಮುಟ್ಟಬೇಡಿ, ನಾನು ಪವಿತ್ರಳಾಗಿದ್ದೇನೆ’: ರಾಖಿ ಸಾವಂತ್

ಇತ್ತೀಚೆಗೆ ರಾಖಿ ಸಾವಂತ್​ ಅವರು ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ‘ನಾನು ಮೆಕ್ಕಾ ಮದೀನಾಗೆ ಹೋಗಿ ಬಂದಿದ್ದೇನೆ. ಗಂಡಸರು ದೂರ ನಿಲ್ಲಿ. ನನ್ನನ್ನು ಮುಟ್ಟಬೇಡಿ. ನಾನು ಪವಿತ್ರಳಾಗಿದ್ದೇನೆ’ ಎಂದು ರಾಖಿ ಸಾವಂತ್​ ಗರಂ ಆಗಿದ್ದಾರೆ. ಅಲ್ಲಿದ್ದ ಕೆಲವು ಅಭಿಮಾನಿಗಳು ರಾಖಿಯ ವೇಷಭೂಷಣಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ‘ನಾನು ಸೌದಿಯವಳ ರೀತಿ ಕಾಣ್ತೀನಾ’ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಅಭಿಮಾನಿಯೊಬ್ಬರು, ‘ಇಲ್ಲ.. ದುಬೈ ಮಹಿಳೆ ರೀತಿ ಕಾಣುತ್ತಿದ್ದೀರಿ’ ಎಂದಿದ್ದಾರೆ. ‘ರೇಖಾ ರೀತಿ ಅಲ್ಲ.. ಶೇಖಾ ರೀತಿ ಕಾಣುತ್ತಿದ್ದೇನೆ’ ಎಂದು ರಾಖಿ ಸಾವಂತ್​ ಅವರು ತಮ್ಮನ್ನು ತಾವು ಹೊಗಳಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ರಾಖಿ ಸಾವಂತ್​ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ವೈಯಕ್ತಿಕ ಜೀವನದ ಕಾರಣಕ್ಕೆ ಅವರು ಆಗಾಗ ಸುದ್ದಿ ಆಗುತ್ತಾರೆ. ಮೈಸೂರು ಮೂಲದ ಆದಿಲ್​ ಖಾನ್​ ದುರಾನಿ ಜೊತೆ ನಡೆದಿದ್ದ ಅವರ ಮದುವೆಯು ಈಗ ಮುರಿದು ಬಿದ್ದಿದೆ. ಶೀಘ್ರದಲ್ಲೇ ಅವರು ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಪತಿಯಿಂದ ದೂರಾಗಿದ್ದರೂ ಕೂಡ ರಾಖಿ ಸಾವಂತ್​ ಅವರು ಸದ್ಯಕ್ಕೆ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾರೆ.

ಗಂಡಸರು ನನ್ನನ್ನು ಮುಟ್ಟಬೇಡಿ, ನಾನು ಪವಿತ್ರಳಾಗಿದ್ದೇನೆ’: ರಾಖಿ ಸಾವಂತ್
ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ ʻಐರಾವತʼಬೆಡಗಿ – ಊರ್ವಶಿ ರೌಟೇಲಾ ಕಾಲೆಳೆದ ಟ್ರೋಲ್‌ ಗೆಳೆಯರು
 

ಕ್ಯಾಂಡಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಪಾಕಿಸ್ತಾನಿ ಬೌಲರ್ ನಸೀಮ್ ಶಾ (Naseem Shah) ಜೊತೆಗೆ ಊರ್ವಶಿ ಹೆಸರು ಸಖತ್ ಸದ್ದು ಮಾಡಿತ್ತು. ಇವರಿಬ್ಬರ ಮಧ್ಯೆ ಪ್ರೀತಿಯಿದೆ ಎಂಬರ್ಥದಲ್ಲಿ ಜಾಲತಾಣದಲ್ಲಿ ಪೋಸ್ಟ್‌ಗಳು ಸಖತ್ ಹರಿದಾಡುತ್ತಿದ್ದವು. ಇದೀಗ ಇಂಡೋ-ಪಾಕ್‌ ಪಂದ್ಯದ ವೇಳೆ ಮತ್ತೆ ನೆಟ್ಟಿಗರು ಊರ್ವಶಿ ರೌಟೇಲಾ ಅವರ ಕಾಲೆಳೆದಿದ್ದಾರೆ.

ಊರ್ವಶಿ ರೌಟೇಲಾ ಹಸಿರು ಸೀರೆಯುಟ್ಟ ಫೋಟೋ ಜೊತೆಗೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಫೋಟೋವನ್ನ ಹಂಚಿಕೊಂಡಿದ್ದು, ಹಿಗ್ಗಾಮುಗ್ಗಾ ಟ್ರೋಲ್‌ ಮಾಡುತ್ತಿದ್ದಾರೆ. ನಸೀಮ್‌ ಶಾ ಇನ್‌ಸ್ಟಾಗ್ರಾಮ್‌ ಖಾತೆಗೂ ಫೋಟೋವನ್ನ ಟ್ಯಾಗ್‌ ಮಾಡಿ, ಊರ್ವಶಿ ರೌಟೇಲಾ ಸೀಕ್ರೆಟ್‌ ಆಗಿ ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ ಅಂತಾ ಟಾಂಗ್‌ ಕೊಡುತ್ತಿದ್ದಾರೆ.

ನೆಟ್ಟಿಗರು ಊರ್ವಶಿ ರೌಟೇಲಾ ಅವರಿಂದ ರಿಷಬ್ ಪಂತ್ ಅವರನ್ನ ಕಾಪಾಡುವಂತೆ ಶುಭಮನ್ ಗಿಲ್ ಇಂದು ನಸೀಮ್ ಶಾ ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಊರ್ವಶಿ ಸಪೋರ್ಟ್‌ ಮಾಡ್ತಿರೋದು ಪಾಕಿಸ್ತಾನಕ್ಕೋ ಅಥವಾ ನಸೀಮ್‌ ಶಾಗೋ? ಅಂತಾ ಕುಟುಕಿದ್ದಾರೆ. 

ಕಳೆದ ವರ್ಷ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬೌಲಿಂಗ್‌ ಮಾಡುತ್ತಿದ್ದ ವೇಳೆ ನಸೀಮ್‌ ಶಾ ಸಣ್ಣ ನಗೆ ಬೀರಿದ್ದ ವೀಡಿಯೋವನ್ನ ಊರ್ವಶಿ ರೌಟೇಲಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು ಟ್ರೋಲ್‌ಗೆ ಗುರಿಯಾಗಿದ್ದರು. ಆದ್ರೆ ಸಂದರ್ಶನದ ವೇಳೆ ಆಕೆ ಯಾರೂ ಅಂತಾನೇ ನನಗೆ ಗೊತ್ತಿಲ್ಲ ಎಂದು ನಸೀಮ್‌ ಶಾ ಊಹಾಪೋಹಗಳಿಗೆ ಬ್ರೇಕ್‌ ಹಾಕಿದ್ದರು. ಇದೀಗ ಮತ್ತೆ ನೆಟ್ಟಿಗರು ಕಾಲೆಳೆದಿದ್ದಾರೆ.

ಈ ಬಾರಿ ಪ್ಯಾರಿಸ್‌ನ ಐಫೆಲ್‌ ಟವರ್‌ ಮುಂಭಾಗದಲ್ಲಿ ಊರ್ವಶಿ ರೌಟೇಲಾ ವಿಶ್ವಕಪ್‌ ಟ್ರೋಫಿಯನ್ನ ಅನಾವರಣಗೊಳಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist