Ind vs Pak: 35 ಓವರ್ ಮುಕ್ತಾಯ ; ಅರ್ಧ ಶತಕ ಪೂರೈಸಿದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ - ಕುತೂಹಲ ಕೆರಳಿಸಿದ ಇಂದಿನ ಪಂದ್ಯ!
ಇಂದಿನ ಭಾರತ ಮತ್ತು ಪಾಕಿಸ್ತಾನದ ರೋಚಕ ಪಂದ್ಯದಲ್ಲಿ 35 ಓವರ್ ಮುಕ್ತಾಯಗೊಂಡು 183 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.ಮೊಹಮ್ಮದ್ ನವಾಝ್ ಎಸೆತದಲ್ಲಿ ಸ್ಟೈಟ್ ಹಿಟ್ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್. ಇದು ಇಶಾನ್ ಬ್ಯಾಟ್ನಿಂದ ಮೂಡಿಬಂದ 2ನೇ ಸಿಕ್ಸರ್. 68 ಎಸೆತಗಳಲ್ಲಿ 65 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಯುವ ಎಡಗೈ ದಾಂಡಿಗ.
62 ಎಸೆತಗಳಲ್ಲಿ 3 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ. ಇದರ ಜೊತೆಗೆ ಇಶಾನ್ ಕಿಶನ್ ಜೊತೆಗೂಡಿ 5ನೇ ವಿಕೆಟ್ ಶತಕದ ಜೊತೆಯಾಟ. ಸುಸ್ಥಿತಿಯಲ್ಲಿ ಟೀಮ್ ಇಂಡಿಯಾ. ಇನ್ನು 16 ಓವರ್ಗಳು ಬಾಕಿ. ಬೃಹತ್ ಮೊತ್ತ ಪೇರಿಸಲು ಕೊನೆಯ 10 ಓವರ್ಗಳು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.
ಶಾದಾಬ್ ಖಾನ್ ಎಸೆತದಲ್ಲಿ ಸಿಂಗಲ್ ರನ್ ತೆಗೆಯುವ ಮೂಲಕ ಅರ್ಧಶತಕ ಪೂರೈಸಿದ ಇಶಾನ್ ಕಿಶನ್. 54 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ ಇಶಾನ್.ಶಾದಾಬ್ ಖಾನ್ 5ನೇ ಎಸೆತದಲ್ಲಿ ಮಿಡ್ ಆನ್ನತ್ತ ಬೌಂಡರಿ ಬಾರಿಸಿದ ಇಶಾನ್ ಕಿಶನ್.5ನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಜೊತೆ 80 ರನ್ಗಳ ಜೊತೆಯಾಟ. ಉತ್ತಮ ಸ್ಥಿತಿಯಲ್ಲಿ ಟೀಮ್ ಇಂಡಿಯಾ.
ರೋಹಿತ್ ಶರ್ಮಾ (11), ವಿರಾಟ್ ಕೊಹ್ಲಿ (4), ಶ್ರೇಯಸ್ ಅಯ್ಯರ್ (14) ಹಾಗೂ ಶುಭ್ಮನ್ ಗಿಲ್ (6) ಔಟ್.