ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Tiger 3 ಸಿನಿಮಾದ ಮೊದಲ ಪೋಸ್ಟರ್‌ ರಿಲೀಸ್‌; ಸಲ್ಮಾನ್ ಖಾನ್, ಕತ್ರೀನಾ ಕೈಫ್ ಗನ್‌ನೊಂದಿಗೆ ..!

Twitter
Facebook
LinkedIn
WhatsApp
Tiger 3 ಸಿನಿಮಾದ ಮೊದಲ ಪೋಸ್ಟರ್‌ ರಿಲೀಸ್‌; ಸಲ್ಮಾನ್ ಖಾನ್, ಕತ್ರೀನಾ ಕೈಫ್ ಗನ್‌ನೊಂದಿಗೆ

ಮುಂಬಯಿ: ಬಾಲಿವುಡ್‌ ನ ಸೂಪರ್‌ ಹಿಟ್‌ ʼಟೈಗರ್‌ʼ ಸರಣಿಯ ಮೂರನೇ ಭಾಗದ ಮೊದಲ ಪೋಸ್ಟರ್‌ ಶನಿವಾರ(ಸೆ.2 ರಂದು) ರಿಲೀಸ್‌ ಆಗಿದೆ. ಸಲ್ಮಾನ್‌ ಖಾನ್‌ ಅವರ ʼಟೈಗರ್‌ʼ ಸರಣಿಗೆ ಬಾಲಿವುಡ್‌ ನಲ್ಲಿ ಪ್ರತ್ಯೇಕ ಫ್ಯಾನ್‌ ಬೇಸ್‌ ಇದೆ. ಸ್ಪೈ ಥ್ರಿಲ್ಲರ್‌ ಕಥಾಹಂದರದ ʼಟೈಗರ್‌ʼ ಸರಣಿಯ ಮೂರನೇ ಭಾಗದ ಸಿನಿಮಾದ ಮೊದಲ ಪೋಸ್ಟರ್‌ ರಿಲೀಸ್‌ ಆಗಿದೆ.

ಟೈಗರ್ ಮತ್ತು ಜೋಯಾ ಪಾತ್ರಗಳಲ್ಲಿ ಈ ಹಿಂದಿನ ʼಟೈಗರ್‌ʼ ಸಿನಿಮಾದಲ್ಲಿ ಕತ್ರೀನಾ ಹಾಗೂ ಸಲ್ಮಾನ್‌ ಕಾಣಿಸಿಕೊಂಡಿದ್ದರು. ಈ ಬಾರಿ ಮತ್ತೆ ಸಲ್ಮಾನ್‌ – ಕತ್ರೀನಾ ಮತ್ತೊಂದು ರೋಮಾಂಚನ ಸ್ಪೈ ಥ್ರಿಲ್ಲರವ ಜರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯಶ್‌ ರಾಜ್ ಫಿಲ್ಮ್ಸ್‌ ನಿರ್ಮಾಣದ ʼಟೈಗರ್-3‌ʼ ಇದೇ ವರ್ಷದ ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಪೋಸ್ಟರ್‌ ರಿಲೀಸ್‌ ಮಾಡಿ ಹೇಳಿದೆ.

ಮನೀಶ್‌ ಶರ್ಮಾ ʼಟೈಗರ್-3‌ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ. ಸ್ಪೈ ಯೂನಿವರ್ಸ್‌ ನಲ್ಲಿ ಬಂದ ಈ ಹಿಂದಿನ ʼಟೈಗರ್‌ ಜಿಂದಾ ಹೈʼ, ʼವಾರ್‌ʼ, ʼಪಠಾಣ್‌ʼ ಸಿನಿಮಾಗಳ ಕಥೆಯ ಹಿನ್ನೆಲೆ ಹಾಗೂ ಕಥೆಯಲ್ಲಿನ ಘಟನೆಗಳ ಸುತ್ತ ʼಟೈಗರ್-3‌ʼ ಸಿನಿಮಾ ಬರಲಿದೆ.

ಸಿನಿಮಾದ ಪೋಸ್ಟರ್‌ ನ್ನು ಸಲ್ಮಾನ್‌ ಖಾನ್‌ ಅವರು ಹಂಚಿಕೊಂಡಿದ್ದಾರೆ. “ಈ ವರ್ಷದ ದೀಪಾವಳಿ ಹಬ್ಬಕ್ಕೆ ʼಟೈಗರ್-3‌ʼ ಯೊಂದಿಗೆ ಬರುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಯಶ್‌ ರಾಜ್‌ ಫಿಲ್ಮ್ಸ್‌ ಅವರ 50ನೇ ಚಿತ್ರ ಇದಾಗಿದ್ದು, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.

Jailer ಸಿನಿಮಾ ಹಿಟ್: ರಜಿನಿಕಾಂತ್‌,ನೆಲ್ಸನ್‌ಗೆ ದುಬಾರಿ ಕಾರು ಗಿಫ್ಟ್‌ ಕೊಟ್ಟ ನಿರ್ಮಾಪಕರು

ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ‘ಜೈಲರ್’ ಬಿಗೆಸ್ಟ್ ಹಿಟ್ ಆಗಿದೆ. 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ‌ನಲ್ಲಿ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ.

ನಿರ್ದೇಶಕ ನೆಲ್ಸನ್ ದಿಲೀಪ್ ‌ಕುಮಾರ್ , ರಜನಿಕಾಂತ್ ಇಬ್ಬರಿಗೂ ‘ಜೈಲರ್’ ಕಂಬ್ಯಾಕ್ ಸಿನಿಮಾವೆಂದೇ ಹೇಳಬಹುದು. ‘ಬೀಸ್ಟ್’ ಸೋಲಿನಿಂದ ಟೀಕೆಗೆ ಒಳಗಾಗಿದ್ದ ನೆಲ್ಸನ್ ‘ಜೈಲರ್’ ಮೂಲಕ ದೊಡ್ಡ ಹಿಟ್ ಕೊಟ್ಟಿದ್ದಾರೆ. ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿದ ಬೆನ್ನಲ್ಲೇ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ನೆಲ್ಸನ್ ಹಾಗೂ ರಜನಿಕಾಂತ್ ಇಬ್ಬರಿಗೂ ಭರ್ಜರಿ ಗಿಫ್ಟ್ ನೀಡಿದೆ.

ಸನ್ ಪಿಕ್ಚರ್ಸ್ ಸಿಇಒ ಕಲಾನಿತಿ ಮಾರನ್ ಅವರು ಇತ್ತೀಚೆಗೆ ‘ತಲೈವಾ’ ಅವರನ್ನು  ಚೆನ್ನೈನ ಪೋಯಸ್ ಗಾರ್ಡನ್ ಮನೆಯಲ್ಲಿ ಭೇಟಿ ಮಾಡಿ ಸಿನಿಮಾದ ಲಾಭಾಂಶದ ಚೆಕ್ ಹಾಗೂ ‘BMWX7 ‘ ದುಬಾರಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಂದಾಜು 100 ಕೋಟಿ ರೂಪಾಯಿಯ ಚೆಕ್ ನ್ನು ರಜಿನಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಇದಲ್ಲದೆ ‌ಕಲಾನಿತಿ ಮಾರನ್ ಅವರು ‘ಜೈಲರ್’ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರನ್ನು ಭೇಟಿಯಾಗಿ ದುಬಾರಿ ಗಿಫ್ಟ್ ನ್ನು ನೀಡಿದ್ದಾರೆ.

ಜಗತ್ತಿನಲ್ಲಿ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಬ್ಲ್ಯಾಕ್ ಪೋರ್ಷೆ ಕಾರನ್ನು ಹಾಗೂ ಸಿನಿಮಾದ ಲಾಭಾಂಶದ ಚೆಕ್ ನ್ನು ನೆಲ್ಸನ್ ಅವರಿಗೆ ನೀಡಿದ್ದಾರೆ.

ಸನ್ ಪಿಕ್ಚರ್ಸ್ ನಟ ,ನಿರ್ದೇಶಕನಿಗೆ ನೀಡಿರುವ ಗಿಫ್ಟ್ ನ ವಿಡಿಯೋವನ್ನು ಹಂಚಿಕೊಂಡಿದ್ದು, ಸೋಶಿಯಲ್ ‌ಮೀಡಿಯಾದಲ್ಲಿ ಇದು ಭಾರೀ ವೈರಲ್ ಆಗಿದೆ.‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist