ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಚಲಿಸುತ್ತಿರುವ ರೈಲು ಕೆಳಗೆ ಸಿಲುಕಿ ಬದುಕುಳಿದ ಮಹಿಳೆ

Twitter
Facebook
LinkedIn
WhatsApp
ಚಲಿಸುತ್ತಿರುವ ರೈಲು ಕೆಳಗೆ ಸಿಲುಕಿ ಬದುಕುಳಿದ ಮಹಿಳೆ

ಯಲಹಂಕ: ಇಲ್ಲಿಗೆ ಸಮೀಪದ ರಾಜಾನುಕುಂಟೆಯಲ್ಲಿ  ಹಳಿ ದಾಟಲು ಮುಂದಾದ ಮಹಿಳೆ ರೈಲು ಚಲಿಸಲು ಪ್ರಾರಂಭವಾದ ತಕ್ಷಣೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಳಿಯ ಮಧ್ಯದಲ್ಲಿ  ಮಲಗಿ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ವೈರಲ್‌ ಆಗಿದೆ.

ರಾಜಾನುಕಂಟೆಯ ಪಾರ್ವತಿ ಪುರ ಅದ್ದಿಗಾನಹಳ್ಳಿ, ತರಹುಣಸೆ, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು, ಕಾರ್ಮಿ ಕರು ಕೆಲಸಕ್ಕೆ ರಾಜಾನುಕುಂಟೆ ರೈಲನ್ನು ಆಶ್ರಯಿ ಸಿದ್ದು, ರೈಲಿಗೆ ಹೋಗಲು ಹಳಿಗಳನ್ನು ದಾಟಬೇಕಿದೆ.

ರೈಲ್ವೆ ಕ್ರಾಸಿಂಗ್‌ ಸಮಯದಲ್ಲಿ 2-3 ರೈಲುಗಳು ಗೂಡ್ಸ್‌ ಗಾಡಿಗಳು ಇಲ್ಲಿ ಯಾವಾಗಲು ಚಲಿಸುತ್ತಿ ರುತ್ತವೆ. ಅದ್ದಿಗಾನಹಳ್ಳಿಯಲ್ಲಿ ವಾಸವಾಗಿರುವ ಮಹಿಳೆ ತನ್ನ ದಿನನಿತ್ಯದ ಕೆಲಸಕ್ಕೆ ರಾಜಾನುಕುಂಟೆಗೆ ಹೋಗಲು ಹೋಗಿದ್ದು  ಒಂದು ರೈಲು ಕೆಳಗಡೆ ನುಗ್ಗಿ ಬಂದು ಮತ್ತೂಂದು ಗೂಡ್ಸ್‌ ಗಾಡಿಯ ಕೆಳಗಡೆ ಬರುವಟ್ಟರಲ್ಲಿ ರೈಲು ಚಲಿಸಲಾರಂಭಿಸಿದೆ. ಇದರಿಂದ ಎಚ್ಚೆತ್ತ ಮಹಿಳೆ ರೈಲು ಹಳಿಯ ಮಧ್ಯೆ ಉದ್ದವಾಗಿ ಸುಮಾರು ಒಂದು ನಿಮಿಷ ಮಲಗಿದ್ದಾರೆ. ಬೋಗಿಗಳು ಹೊದನಂತರ ಎದ್ದು ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತ ವಿಡಿಯೋ ಸೇರೆ ಮಾಡಿದವರು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಈ ವಿಡಿಯೋ ವೈರಲ್‌ ಆಗಿದೆ.

ಆರು ತಿಂಗಳ ಹಿಂದೆ ವ್ಯಕ್ತಿಯೊಬ್ಬರು ರೈಲು ಹತ್ತಿ ಇಳಿಯುವಾಗ ಕಾಲು ಮುರಿದು ಆಸ್ವತ್ರೆಗೆ ಸೇರಿದ ಘಟನೆ ಒಂದಾದರೆ ಎರಡು ವರ್ಷಗಳ ಹಿಂದೆ ಹಳಿಕೆಳಗೆ ನುಗ್ಗಲು ಹೋಗಿ ರೈಲು ಸಂಚರಿಸಿ ಒಬ್ಬರು ಸಾವಿಗೀಡಾಗಿದ್ದರು. ಪ್ರತಿದಿನ ಇಲ್ಲಿ ಸಾವಿರಾರು ಮಂದಿ ಸಂಚರಿಸುತ್ತಿದ್ದು, ಕೆಳಸೇತುವೆ ನಿರ್ಮಾಣ ಮಾಡಿ ಈ ಅವ್ಯವಸ್ಥೆಗೆ ಮುಕ್ತಿ ನೀಡಬೇಕೆಂದು ಸ್ಥಳೀಯ ನಿವಾಸಿ ಮುನಿರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾಲ ವಾಪಸ್‌ ಬರಲಿಲ್ಲವೆಂದು ಆತ್ಮಹತ್ಯೆ ಯತ್ನ

ಬೆಂಗಳೂರು:  ಸಾಲ ವಾಪಸ್‌ ಕೊಡದೆ ಮಾನಸಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಗಳ ವಿರುದ್ಧ ಆರೋಪಿಸಿ ಇಬ್ಬರು ಮಹಿಳೆಯರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಿಲಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವರ್ತೂರು ನಿವಾಸಿ ಆಶ್ವಿ‌ನಿ (28) ಹಾಗೂ ಸಿದ್ದಾಪುರ ನಿವಾಸಿ ದೀಪು (33) ಆತ್ಮಹತ್ಯೆಗೆ ಯತ್ನಿಸಿದವರು. ಶೃತಿ ಎಂಬ ಮಹಿಳೆ ವಿರುದ್ಧ ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ಗೊತ್ತಾಗಿದೆ. ತಿಲಕನಗರ ಠಾಣೆ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಬಂದ ಮಾಹಿತಿ ಮೇರೆಗೆ ಮೆಮೊ ಪಡೆದುಕೊಂಡು ಸಿದ್ದಾಪುರ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ ಎಂದು ತಿಲಕನಗರ ಠಾಣೆ ಪೊಲೀಸರು ಹೇಳಿದರು.

ಮಹಿಳೆಯರಿಬ್ಬರು ಸಂಬಂಧಿಕರಾಗಿದ್ದಾರೆ. 2020ರಲ್ಲಿ ಕಾರ್ಯಕ್ರಮವೊಂದರಲ್ಲಿ ಅಶ್ವಿ‌ನಿಗೆ ಆರೋಪಿತೆಯಾಗಿರುವ ಶೃತಿ ಪರಿಚಯವಾಗಿತ್ತು. ಆರು ತಿಂಗಳಲ್ಲಿ ಹಣ ವಾಪಸ್‌ ಕೊಡುವುದಾಗಿ ಹೇಳಿ ಹಂತ-ಹಂತವಾಗಿ 28 ಲಕ್ಷ ರೂ. ಪಡೆದುಕೊಂಡಿದ್ದಾಳೆ. ಆದರೆ, ವಿವಿಧ ಕಾರಣಗಳನ್ನು ನೀಡಿ ಹಣ ವಾಪಸ್‌ ನೀಡುತ್ತಿಲ್ಲ. ಹಣ ನೀಡುವಂತೆ ಕೇಳಿದರೆ ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವರ್ತೂರು ಪೊಲೀಸರಿಗೆ ಅಶ್ವಿ‌ನಿ ಸೋಮವಾರ ದೂರು ನೀಡಿದ್ದರು. ಅದರಂತೆ ಪೊಲೀಸರು ಎನ್‌ ಸಿಆರ್‌ ದಾಖಲಿಸಿದ್ದರು. ಈ ನಡುವೆ ಇಬ್ಬರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ