ಶನಿವಾರ, ನವೆಂಬರ್ 23, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Beetroot benefits: ಬೀಟ್ರೂಟ್ ಬಗ್ಗೆ ನಿಮಗೆಷ್ಟು ಗೊತ್ತು?

Twitter
Facebook
LinkedIn
WhatsApp
Beetroot benefits

Beetroot benefits: ಬೀಟ್ ರೂಟ್ ಕೂಡ ಮಣ್ಣಿನ ಅಡಿಯಲ್ಲಿ ಸಿಗುವ ತರಕಾರಿಯಾಗಿದ್ದು, ಅದ್ಭುತವಾದ ತರಕಾರಿ ಎಂದೇ ಹೇಳಬಹುದು. ಬೀಟ್ ರೂಟ್ ನಲ್ಲಿ ಹಲವಾರು ವಿಧದ ವಿಟಮಿನ್, ಖನಿಜಾಂಶಗಳಿವೆ. ಸಾಕಷ್ಟು ಜನ ಬೀಟ್ ರೂಟ್ ನೋಡಿದ ಕೂಡಲೇ, ಅದರ ಬಣ್ಣವನ್ನು ನೋಡಿದ ಕೂಡಲೇ ಮೂಗು ಮುರಿಯುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಪರಿಣಾಮ ಹಾಗೂ ಉಪಯೋಗವನ್ನು ತಿಳಿಯುತ್ತಿರುವ ಜನರು, ಬೀಟ್ ರೂಟ್ ಜ್ಯೂಸ್ ಹಾಗೂ ಸಲಾಡ್ ಗಳತ್ತ ಮುಖ ಮಾಡುತ್ತಿದ್ದಾರೆ.

ಬೀಟ್ರೂಟ್ ನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಈ ತರಕಾರಿಯನ್ನು ಆಹಾರದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ (Beetroot benefits) ಸಾಕಷ್ಟು ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ರಕ್ತದೊತ್ತಡ ಕಡಿಮೆ ಮಾಡುತ್ತದೆ
ಬೀಟ್‌ರೂಟ್‌ ಜ್ಯೂಸ್‌ ಕುಡಿಯುವುದರಿಂದ ಕೆಲವೇ ಗಂಟೆಗಳಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಒಂದು ಲೋಟ ಬೀಟ್‌ರೂಟ್‌ ಜ್ಯೂಸ್‌ನಿಂದ 4 – 5 ಅಂಶಗಳಷ್ಟು ಸಂಕೋಚನ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಒಂದು ವರದಿ ಹೇಳಿದೆ. ಇನ್ನು, ಅದರಲ್ಲಿರುವ ನೈಟ್ರಿಕ್‌ ಆಕ್ಸೈಡ್‌ನಿಂದ ವಿಶ್ರಾಂತರಾಗಲು ಸಹಾಯ ಮಾಡುತ್ತದೆ, ರಕ್ತ ಸಂಚಲನ ಉತ್ತಮಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆ ಮಾಡುತ್ತದೆ.

ಪೌಷ್ಠಿಕಾಂಶಗಳು ಹಾಗೂ ನಾರಿನ ಅಂಶ ಹೆಚ್ಚಿರುತ್ತದೆ
ಬೀಟ್‌ರೂಟ್‌ಗಳಲ್ಲಿ ಪ್ರತಿರೋಧಕ ಉತ್ತೇಜನ ವಿಟಮಿನ್ ಸಿ ಅಂಶ, ನಾರಿನಂಶ ಹೆಚ್ಚಿದೆ. ಜತೆಗೆ, ಮ್ಯಾಂಗನೀಸ್‌ ಇದ್ದು, ಇದರಿಂದ ನಿಮ್ಮ ಮೂಳೆಗಳು, ಯಕೃತ್ತು, ಕಿಡ್ನಿಗಳು ಹಾಗೂ ಪ್ಯಾಂಕ್ರಿಯಾಗೆ ಒಳ್ಳೆಯದು. ಅಲ್ಲದೆ, ವಿಟಮಿನ್ ಬಿ, ಫೋಲೇಟ್ ಅಂಶದಿಂದ ಜನ್ಮ ದೋಷಗಳ ಅಪಾಯ ಕಡಿಮೆ ಮಾಡುತ್ತೆ.

ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುತ್ತದೆ

ಬೀಚ್‌ರೂಟ್‌ನಲ್ಲಿ ಪೊಟಾಷಿಯಂ ಮತ್ತು ವಿಟಮಿನ್‌ ಸಿ ಅಧಿಕ ಪ್ರಮಾಣದಲ್ಲಿ ಇವೆ. ಇದರ ಸೇವನೆ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದು ಮಧುಮೇಹಿಗಳಿಗೆ ಉಂಟಾಗುವ ನಿಶ್ಯಕ್ತಿಯನ್ನು ನಿವಾರಿಸುತ್ತದೆ. ರಕ್ತಹೀನತೆಯಿಂದ ನರಳುವವರು ಕಡ್ಡಾಯವಾಗಿ ಬೀಟ್‌ರೂಟ್ ತಿನ್ನಬೇಕು. ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಉರಿಯೂತ ಸಮಸ್ಯೆಯನ್ನು ಎದುರಿಸುತ್ತದೆ
ಬೀಟ್‌ರೂಟ್‌ನಲ್ಲಿ ಬೀಟೈನ್‌ ಎಂಬ ಪೌಷ್ಟಿಕಾಂಶ ಪರಿಸರದ ಒತ್ತಡದಿಂದ ಜೀವಕೋಶಗಳು, ಪ್ರೋಟೀನ್‌ಗಳು ಮತ್ತು ಕಿಣ್ವಗಳನ್ನು ರಕ್ಷಿಸುತ್ತದೆ. ಅಲ್ಲದೆ, ಉರಿಯೂತ ಸಮಸ್ಯೆ ವಿರುದ್ಧ ಹೋರಾಡಲು ರಕ್ಷಿಸುತ್ತದೆ ಹಾಗೂ ಆಂತರಿಕ ಅಂಗಗಳನ್ನು ರಕ್ಷಿಸುತ್ತದೆ. 

ರಕ್ತ ಸಂಚಾರ ಸುಧಾರಿಸುವುದು
ಬೀಟ್ ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವಂತಹ ನೈಟ್ರೇಟ್ ಇದೆ. ಇದು ಪ್ರತಿಕ್ರಿಯೆಗೆ ಒಳಗಾದ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುವುದು ಮತ್ತು ರಕ್ತ ಸಂಚಾರವನ್ನು ಸುಗಮಗೊಳಿಸಲು ನೆರವಾಗುವುದು. ಮೆದುಳಿನ ಸಹಿತ ದೇಹದ ಪ್ರತಿಯೊಂದು ಅಂಗಾಂಗವು ಹೆಚ್ಚಿನ ರಕ್ತ ಸಂಚಾರವನ್ನು ಪಡೆದರೆ, ಆಗ ದೇಹವು ಹೆಚ್ಚು ಆಮ್ಲಜನಕ ಸರಬರಾಜು ಮಾಡಿದೆ ಎಂದರ್ಥವಾಗಿದೆ.

ಚರ್ಮದ ಆರೋಗ್ಯ ವೃದ್ಧಿಸುವುದು
ಬೀಟ್ ರೂಟ್ ಜ್ಯೂಸ್ ನ್ನು ನಿತ್ಯವೂ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಬೀಟ್ ರೂಟ್ ನಲ್ಲಿ ಇರುವಂತಹ ಫಾಲಟೆ ಅಂಶವು ಈ ಕಾರ್ಯಕ್ಕೆ ಕಾರಣವಾಗಿದೆ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ನೀಡುವುದು.

ದೇಹದ ತ್ರಾಣ ಹೆಚ್ಚಿಸುವುದು
ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ದೇಹದ ತ್ರಾಣವು ಹೆಚ್ಚಾಗುವುದು. ಇದೇ ನೈಟ್ರೇಟ್ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಂಡ ಬಳಿಕ ವ್ಯಾಯಾಮ ಮತ್ತು ಇತರ ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಉಪಯೋಗವನ್ನು ತಗ್ಗಿಸುವ ಪರಿಣಾಮವಾಗಿ ದಣಿವು ಕಡಿಮೆ ಆಗುವುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ