ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಂ ಲ್ಯಾಂಡರ್ ಯಶಸ್ವಿ
ಚಂದ್ರಯಾನ – 3 ಚಂದ್ರನ ಅಂಗಳದಲ್ಲಿ ಇಂದು ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳಿಗೆ ಶತಕೋಟಿ ನಮನಗಳು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮೂಲಕ ಯಶಸ್ವಿಯಾಗಿದ್ದಾರೆ. ಸುದೀರ್ಘ 40 ದಿನಗಳಕಾಲ ಅದರ ಚಲನವಲನವನ್ನು ವೀಕ್ಷಿಸಿದ್ದ ವಿಜ್ಞಾನಿಗಳಿಗೆ ಇದು ಸುದಿನ. ಚಂದಿರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದನ್ನು ಭಾರತೀಯರು ಕಣ್ತುಂಬಿಕೊಂಡಿದ್ದಾರೆ.
Chandrayaan-3 Mission:
— ISRO (@isro) August 23, 2023
'India??,
I reached my destination
and you too!'
: Chandrayaan-3
Chandrayaan-3 has successfully
soft-landed on the moon ?!.
Congratulations, India??!#Chandrayaan_3#Ch3
ಚಂದ್ರನ ಅಂಗಳದಲ್ಲಿ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದೆ. ಸಾಕಷ್ಟು ಪರಿಶ್ರಮ ಹಾಕಿದ್ದಕ್ಕೆ ಫಲ ಸಿಕ್ಕಿದೆ ಎಂದು U.R.ರಾವ್ ಸ್ಯಾಟಲೈಟ್ ಸೆಂಟರ್ ಮುಖ್ಯಸ್ಥ ಶಂಕರನ್ ಹೇಳಿದ್ದಾರೆ. ಚಂದ್ರಯಾನ-2ರಲ್ಲಿ ಆಗಿದ್ದ ನೋವು ಈಗ ಮರೆಯಾಗಿದೆ. ಚಂದ್ರಯಾನ-3 ನಮಗೆ ಹೊಸ ಟಾಸ್ಕ್ ಕೊಟ್ಟಿದೆ ಎಂದು ತಿಳಿಸಿದರು.
ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಕೆಯಾಗಿದೆ. ಆ ಮೂಲಕ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ ಎಂದು ಚಂದ್ರಯಾನ-3 ಪ್ರಾಜೆಕ್ಟ್ ನಿರ್ದೇಶಕ ವೀರ ಮುತ್ತುವೇಲ್ ಹೇಳಿದರು. ಲಾಂಚ್ನಿಂದ ಲ್ಯಾಂಡ್ ಆಗುವ ತನಕ ಅಂದುಕೊಂಡಂತೆ ನಡೆದಿದೆ ಎಂದರು.
ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಬಹುದೂರದಲ್ಲಿರುವ ಚಂದ್ರನ ತಲುಪಲು ನಾವು ಯಶಸ್ವಿಯಾಗಿದ್ದೇವೆ. ಇದರ ಯಶಸ್ಸು ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತೆ. ಚಂದ್ರಯಾನ-3 ಯಶಸ್ಸಿಗೆ ಶ್ರಮಿಸಿದ ಪ್ರತಿ ವಿಜ್ಞಾನಿಗೂ ಧನ್ಯವಾದ. ಭಾರತದ ಯಶಸ್ಸಿನಿಂದ ಉಳಿದ ದೇಶಗಳಿಗೂ ಅನುಕೂಲವಾಗುತ್ತೆ. ಚಂದ್ರನ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗುತ್ತೆ ಎಂದು ಪ್ರಧಾನಿ ಮೋದಿ ಹೇಳಿದರು.