ಬುಧವಾರ, ಮೇ 22, 2024
ಮನೆಯೊಂದರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮಹಿಳೆಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ.!-Rain Alert: ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ; ಸಮುದ್ರ ತೀರದಲ್ಲಿ ಹೈ-ಅಲರ್ಟ್.!-Rave Party :ಇಂದು ಮತ್ತೊಂದು ವಿಡಿಯೋ ಹರಿಬಿಟ್ಟ ನಟಿ ಹೇಮಾ; ರೇವ್ ಪಾರ್ಟಿಯಲ್ಲಿ ಇದ್ದಿದ್ದು ನಿಜಾನಾ.?-ಬ್ರಹ್ಮ ಅಡ್ಡಬಂದರೂ ರಘುಪತಿ ಭಟ್ ನೈಋತ್ಯ ಪಧವೀಧರ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ; ಕೆ.ಎಸ್ ಈಶ್ವರಪ್ಪ-2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರ ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು-ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿ. ಇಲ್ಲಾದ್ರೆ ಜಾಗ ಖಾಲಿ ಮಾಡಿ, ಹೊಸ ಮುಖಗಳನ್ನು ಬೆಳೆಸುತ್ತೇವೆ-ನಾಯಕರುಗಳಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ-ದ್ವೇಷ ರಾಜಕಾರಣಕ್ಕೆ ಬೆಳ್ತಂಗಡಿಯಲ್ಲಿ ಅಖಾಡ ಸಿದ್ಧವಾಗಿದೆಯೇ? ಹರೀಶ್ ಪೂಂಜ V/S ರಕ್ಷಿತ್ ಶಿವರಾಂ..!-ಭಜರಂಗಿ ಸಿನೆಮಾದಲ್ಲಿ ನಟಿಸಿದ್ದ ನಟಿ ಪತಿಯಿಂದಲೇ ಭೀಕರ ಹತ್ಯೆ..!-ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ; ಸಚಿವರು ಅನಗತ್ಯವಾಗಿ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚನೆ..!-ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ -ಮಗ ಮೃತ್ಯು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Realme GT 5 ಅತ್ಯದ್ಭುತ ಸ್ಮಾರ್ಟ್​ಫೋನ್ ; ಶೀಘ್ರದಲ್ಲೇ ಬಿಡುಗಡೆ!

Twitter
Facebook
LinkedIn
WhatsApp
Realme GT 5 ಅತ್ಯದ್ಭುತ ಸ್ಮಾರ್ಟ್​ಫೋನ್ ; ಶೀಘ್ರದಲ್ಲೇ ಬಿಡುಗಡೆ!

ಪ್ರಸಿದ್ಧ ರಿಯಲ್ ಮಿ ಕಂಪನಿ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ನೂತನ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತದೆ. ಈಗಾಗಲೇ ತನ್ನ ರಿಯಲ್ ಮಿ 11 ಮತ್ತು ರಿಯಲ್ ಮಿ 11X ಫೋನನ್ನು ಆಗಸ್ಟ್ 23 ರಂದು ಭಾರತದಲ್ಲಿ ಅನಾವರಣ ಮಾಡುವುದಾಗಿ ಘೋಷಿಸಿದೆ. 

Realme GT 5 ಅತ್ಯದ್ಭುತ ಸ್ಮಾರ್ಟ್​ಫೋನ್ ; ಶೀಘ್ರದಲ್ಲೇ ಬಿಡುಗಡೆ!

ಹೀಗಿರುವಾಗ ರಿಯಲ್ ಮಿ ಸಂಸ್ಥೆಯ ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಬಗ್ಗೆ ಸುದ್ದಿ ಹೊರಬಿದ್ದಿದೆ. ಇದರ ಹೆಸರು ರಿಯಲ್ ಮಿ ಜಿಟಿ 5 (Realme GT 5). ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿರುವ ಈ ಸ್ಮಾರ್ಟ್​ಫೋನ್​ನಲ್ಲಿ ಬರೋಬ್ಬರಿ 24GB RAM ಆಯ್ಕೆ ನೀಡಲಾಗಿದೆಯಂತೆ. ಜೊತೆಗೆ ಹೊಚ್ಚ ಹೊಸ ಕ್ವಾಲ್ಕಂನ ಪ್ರೊಸೆಸರ್ ಕೂಡ ಅಳವಡಿಸಲಾಗಿದೆ.

Realme GT 5 ಅತ್ಯದ್ಭುತ ಸ್ಮಾರ್ಟ್​ಫೋನ್ ; ಶೀಘ್ರದಲ್ಲೇ ಬಿಡುಗಡೆ!

ರಿಯಲ್ ಮಿ ಜಿಟಿ 5 ಸ್ಮಾರ್ಟ್​ಫೋನ್ ಬಿಡುಗಡೆ ಯಾವಾಗ ಎಂಬ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದು ಮುಂಬರುವ ದಿನಗಳಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಂನ ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್​ನಿಂದ ಕಾರ್ಯನಿರ್ವಹಿಸುತ್ತದೆ. ಇದನ್ನು ರಿಯಲ್ ಮಿಯ ಚೀನಾ ಅಧ್ಯಕ್ಷ ಕ್ಸು ಕಿ ಚೇಸ್ ಖಚಿತ ಪಡಿಸಿದ್ದಾರೆ. ಈ ಫೋನ್​ನಲ್ಲಿ “ಕಿಲ್ಲರ್ ವೈಶಿಷ್ಟ್ಯ” ಇರಲಿದೆ ಎಂದು ಕೂಡ ಹೇಳಿದ್ದಾರೆ.

Realme GT 5 ಅತ್ಯದ್ಭುತ ಸ್ಮಾರ್ಟ್​ಫೋನ್ ; ಶೀಘ್ರದಲ್ಲೇ ಬಿಡುಗಡೆ!

ರಿಯಲ್ ಮಿ ಜಿಟಿ 5 ನಲ್ಲಿ ಅಳವಡಿಸಲಾಗಿರುವ ಸ್ನಾಪ್​ಡ್ರಾಗನ್ 8 Gen 2 ಚಿಪ್‌ಸೆಟ್ ಅನ್ನು ನಿನ್ನೆಯಷ್ಟೆ ಬಿಡುಗಡೆ ಆದ ಒನ್​ಪ್ಲಸ್ ಏಸ್ 2 ಪ್ರೊ ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಆಲ್ಟ್ರಾ ಫೋನ್​ಗಳನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್​ಫೋನ್ LPDDR5x RAM ಮತ್ತು UFS 4.0 ಸಂಗ್ರಹಣೆಯನ್ನು ಹೊಂದಿದೆ. ಇದರಲ್ಲಿ ಬಲಿಷ್ಠ ಪ್ರೊಸೆಸರ್ ಜೊತೆಗೆ 240W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆಯಂತೆ. ಇದು ಪ್ರಸ್ತುತ ರಿಯಲ್ ಮಿ ಜಿಟಿ 3 ಯಲ್ಲಿ ಕಂಡುಬರುತ್ತದೆ (ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ).

ಇನ್ನೊಂದು ವರದಿಯ ಪ್ರಕಾರ, ರಿಯಲ್ ಮಿ ಜಿಟಿ 5 ಎರಡು ವೇಗದ ಚಾರ್ಜಿಂಗ್ ರೂಪಾಂತರಗಳಲ್ಲಿ ಬರಬಹುದು ಎಂದು ಹೇಳಲಾಗಿದೆ. ಇದು 5,200mAh ಬ್ಯಾಟರಿ – 150W ಚಾರ್ಜಿಂಗ್ ಮತ್ತು 4,600mAh ಬ್ಯಾಟರಿ – 240W ವೇಗದ ಚಾರ್ಜಿಂಗ್ ಜೊತೆಗೆ ಅನಾವರಣಗೊಳ್ಳಲಿದೆಯಂತೆ.

Realme GT 5 ಅತ್ಯದ್ಭುತ ಸ್ಮಾರ್ಟ್​ಫೋನ್ ; ಶೀಘ್ರದಲ್ಲೇ ಬಿಡುಗಡೆ!
ರಿಯಲ್ ಮಿ ಜಿಟಿ 5 ಫೀಚರ್ಸ್ ಏನಿರಬಹುದು?:
  • ಡಿಸ್ ಪ್ಲೇ: ರಿಯಲ್ ಮಿ ಜಿಟಿ 5 ಫೋನ್ 6.74-ಇಂಚಿನ 1.5K OLED ಡಿಸ್ ಪ್ಲೇ ಜೊತೆಗೆ 144Hz ರಿಫ್ರೆಶ್ ದರ ಹೊಂದಿರಬಹುದು.
  • ಪ್ರೊಸೆಸರ್: Adreno GPU ನೊಂದಿಗೆ ಜೋಡಿಸಲಾದ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್ ನೀಡಲಾಗಿದೆ.
  • RAM ಮತ್ತು ಸಂಗ್ರಹಣೆ : 24GB ವರೆಗೆ LPDDR5x RAM ಮತ್ತು 1TB UFS 4.0 ಸಂಗ್ರಹಣೆ.
  • OS : ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI ಕಸ್ಟಮ್ ಸ್ಕಿನ್ ಔಟ್ ಆಫ್ ದಿ ಬಾಕ್ಸ್.
  • ಕ್ಯಾಮೆರಾಗಳು : 50MP ಸೋನಿ IMX890 OIS ಜೊತೆಗೆ ಪ್ರಾಥಮಿಕ ಸೆನ್ಸಾರ್, 8MP ಸೆಕೆಂಡರಿ ಲೆನ್ಸ್ ಮತ್ತು 2MP ಮೂರನೇ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಇರಬಹುದು.
  • ಬ್ಯಾಟರಿ : 240W ಚಾರ್ಜಿಂಗ್‌ನೊಂದಿಗೆ 4,600mAh ಬ್ಯಾಟರಿ ಮತ್ತು 150W ಚಾರ್ಜಿಂಗ್‌ನೊಂದಿಗೆ 5,200mAh ಬ್ಯಾಟರಿ ನಿರೀಕ್ಷಿಸಲಾಗಿದೆ.
Realme GT 5 ಅತ್ಯದ್ಭುತ ಸ್ಮಾರ್ಟ್​ಫೋನ್ ; ಶೀಘ್ರದಲ್ಲೇ ಬಿಡುಗಡೆ!

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ