ಬುಧವಾರ, ಮಾರ್ಚ್ 12, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Jacqueline Fernandez ನಿರಾಳ; ಇನ್ನು ಮುಂದೆ ಅನುಮತಿ ಇಲ್ಲದೆಯೇ ವಿದೇಶ ತೆರಳಬಹುದು ಯಾಕೆ ಗೊತ್ತಾ?

Twitter
Facebook
LinkedIn
WhatsApp
Jacqueline Fernandez ನಿರಾಳ; ಇನ್ನು ಮುಂದೆ ಅನುಮತಿ ಇಲ್ಲದೆಯೇ ವಿದೇಶ ತೆರಳಬಹುದು ಯಾಕೆ ಗೊತ್ತಾ

ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez)  ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ರುವಾರಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಜೊತೆ ಜಾಕ್ವೆಲಿನ್ ಆತ್ಮೀಯತೆ ಬೆಳೆಸಿಕೊಂಡಿದ್ದರು. ಈತನಿಂದ ಜಾಕ್ವೆಲಿನ್ ಉಡುಗೊರೆ ಕೂಡ ಪಡೆದಿದ್ದರು. ಇದು ಅವರಿಗೆ ಮುಳುವಾಗಿದೆ. ಈ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡ ವಿಚಾರಣೆ ಎದುರಿಸುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ವಿದೇಶಕ್ಕೆ ತೆರಳಲು ನಿರ್ಬಂಧ ಇತ್ತು. ಬಳಿಕ ಒಪ್ಪಿಗೆ ಪಡೆದು ವಿದೇಶಕ್ಕೆ ಹೋಗಲು ಅವಕಾಶ ನಿಡಲಾಯಿತು. ಈಗ ಒಪ್ಪಿಗೆ ಇಲ್ಲದೆಯೂ ಅವರು ವಿದೇಶಕ್ಕೆ ತೆರಳಬಹುದು ಎಂದು ಕೋರ್ಟ್ ಆದೇಶ ನೀಡಿದೆ. ಇದರಿಂದ ಜಾಕ್ವೆಲಿನ್ ಫರ್ನಾಂಡಿಸ್ ಅವರು ನಿರಾಳ ಆಗಿದ್ದಾರೆ.

Jacqueline Fernandez ನಿರಾಳ; ಇನ್ನು ಮುಂದೆ ಅನುಮತಿ ಇಲ್ಲದೆಯೇ ವಿದೇಶ ತೆರಳಬಹುದು ಯಾಕೆ ಗೊತ್ತಾ

ದೆಹಲಿ ಹೈಕೋರ್ಟ್​ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಲ್ಲಿಕೆ ಮಾಡಿದ ಅರ್ಜಿ ವಿಚಾರಣೆಗೆ ಬಂದಿದೆ.  ಈ ವೇಳೆ ವಿಶೇಷ ನ್ಯಾಯಮೂರ್ತಿ ಶೈಲೇಂದ್ರ ಮಲಿಕ್ ಅವರು ಹೊಸ ಆದೇಶ ನೀಡಿದ್ದಾರೆ. ‘ಜಾಮೀನಿನ ಷರತ್ತುಗಳನ್ನು ಜಾಕ್ವೆಲಿನ್ ದುರ್ಬಳಕೆ ಮಾಡಿಕೊಂಡಿಲ್ಲ. ಇನ್ನುಮುಂದೆ ವಿದೇಶಕ್ಕೆ ತೆರಳಬೇಕಾದರೆ ಜಾಕ್ವೆಲಿನ್ ಒಪ್ಪಿಗೆ ಪಡೆಯಬೇಕು ಎಂದಿಲ್ಲ. ಮೂರು ದಿನ ಮೊದಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸಾಕು’ ಎಂದು ಶೈಲೇಂದ್ರ ಮಲಿಕ್ ಹೊಸ ಆದೇಶದಲ್ಲಿ ಹೇಳಿದ್ದಾರೆ.

‘ಕೆಲಸದ ಕಾರಣದಿಂದ ನಟಿ ತಕ್ಷಣಕ್ಕೆ ವಿದೇಶಕ್ಕೆ ತೆರಳುವ ಪರಿಸ್ಥಿತಿಗಳು ಬಂದೊದಗುತ್ತವೆ. ಈಗಿರುವ ತೊಡಕಿನಿಂದ ಅವರಿಗೆ ಅವಕಾಶ ಕೈತಪ್ಪಬಹುದು. ಹೀಗಾಗಿ, ಇನ್ನುಮುಂದೆ ಅವರು ಒಪ್ಪಿಗೆ ಪಡೆಯಬೇಕಿಲ್ಲ’ ಎಂದು ಶೈಲೇಂದ್ರ ಮಲಿಕ್ ಹೇಳಿದ್ದಾರೆ. ‘ಕೋರ್ಟ್​ನ ಒಪ್ಪಿಗೆ ಇಲ್ಲದೆ ವಿದೇಶಕ್ಕೆ ತೆರಳಬಾರದು’ ಎಂದು ಜಾಮೀನು ನೀಡುವಾಗ ಆದೇಶಿಸಲಾಗಿತ್ತು.

Jacqueline Fernandez ನಿರಾಳ; ಇನ್ನು ಮುಂದೆ ಅನುಮತಿ ಇಲ್ಲದೆಯೇ ವಿದೇಶ ತೆರಳಬಹುದು ಯಾಕೆ ಗೊತ್ತಾ

‘ಜಾಕ್ವೆಲಿನ್ ಫರ್ನಾಂಡಿಸ್ ಶ್ರೀಲಂಕಾದ ಪೌರತ್ವ ಹೊಂದಿದ್ದಾರೆ. ಅವರು ಭಾರತದಲ್ಲಿ 2009ರಿಂದ ವಾಸಿಸುತ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರು ತಪ್ಪದೇ ತೆರಿಗೆ ಪಾವತಿ ಮಾಡುತ್ತಿದ್ದಾರೆ’ ಎಂದು ಜಡ್ಜ್ ಹೇಳಿದ್ದಾರೆ.

ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಆತನ ಜೊತೆ ಜಾಕ್ವೆಲಿನ್ ಹೆಸರು ಕೇಳಿ ಬಂದಿದ್ದರಿಂದ ನಟಿಗೆ ಸಾಕಷ್ಟು ತೊಂದರೆ ಆಗಿದೆ. ಹಲವು ಆಫರ್​ಗಳನ್ನು ಅವರು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಬರ್ತ್​ಡೇ ಪ್ರಯುಕ್ತ ಜಾಕ್ವೆಲಿನ್​ಗೆ ಸುಕೇಶ್ ಪ್ರೇಮಪತ್ರ ಬರೆದಿದ್ದ.

Jacqueline Fernandez ನಿರಾಳ; ಇನ್ನು ಮುಂದೆ ಅನುಮತಿ ಇಲ್ಲದೆಯೇ ವಿದೇಶ ತೆರಳಬಹುದು ಯಾಕೆ ಗೊತ್ತಾ
ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ Samantha- Vijay Deverakonda ಅವರ ರೋಮ್ಯಾಂಟಿಕ್ ನೃತ್ಯ !
Samantha- Vijay Deverakonda : ಖ್ಯಾತ ನಟರಾದ Samantha- Vijay Deverakonda ಕುಶಿ ಚಿತ್ರದಲ್ಲಿ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಬಹು ನಿರೀಕ್ಷಿತ ಶಿವ ನಿರ್ವಾಣ ನಿರ್ದೇಶನದ, ಒಂದು ರೊಮ್ಯಾಂಟಿಕ್ ಕಾಮಿಡಿ ಎಂದು ಬಿಂಬಿಸಲಾಗಿದೆ, ಈ ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳನ್ನು ಪ್ರವೇಶಿಸಲಿದೆ. ಅದರ ಭಾವಪೂರ್ಣ ಪ್ಲೇಪಟ್ಟಿಯೊಂದಿಗೆ, ಕುಶಿ ಈಗಾಗಲೇ ಸಿನಿಮಾ ಅಭಿಮಾನಿಗಳು ಮತ್ತು ಸಂಗೀತ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಂದು ಹೈದರಾಬಾದ್‌ನಲ್ಲಿ ನಡೆದ ಬೃಹತ್ ಸಂಗೀತ ಕಚೇರಿಯಲ್ಲಿ ಚಿತ್ರದ ಆಡಿಯೊವನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಾಯಿತು.

ಕಳೆದ ಕೆಲವು ವರ್ಷಗಳಿಂದ ವಿಜಯ್- ರಶ್ಮಿಕಾ ಲವ್ವಿ ಡವ್ವಿ ಸ್ಟೋರಿ ನಡೆಯುತ್ತಿತ್ತು. ಈಗ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಸಮಂತಾ ನನ್ನ ಕ್ರಶ್, ನನ್ನ ನೆಚ್ಚಿನ ನಟಿ ಎಂದು ‘ಖುಷಿ’ (Kushi) ಸಿನಿಮಾ ಟ್ರೈಲರ್ ಇವೆಂಟ್‌ನಲ್ಲಿ ವಿಜಯ್ ವರಸೆ ಬದಲಿಸಿದ್ದರು. ಈಗ ಅದು ನಿಜ ಎಂಬುದನ್ನ ಹೈದರಾಬಾದ್‌ನಲ್ಲಿ ನಡೆದ ಖುಷಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರೂವ್ ಮಾಡಿದ್ದಾರೆ. ವೇದಿಕೆಯಲ್ಲಿ ಸಮಂತಾರನ್ನು ವಿಜಯ್ ಮುದ್ದಾಡಿದ್ದಾರೆ.

ಟಾಲಿವುಡ್ ನಟಿ ಸಮಂತಾ (Samantha) ಜೊತೆ ವಿಜಯ್ ದೇವರಕೊಂಡ (Vijay Devarakonda) ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಸಮಂತಾ ನನ್ನ ಕ್ರಶ್ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ವಿಜಯ್, ಈಗ ನೆಚ್ಚಿನ ನಟಿ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ಲವ್- ರೊಮ್ಯಾನ್ಸ್ ನೋಡಿ ರಶ್ಮಿಕಾ(Rashmika Mandanna) ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. 

ವೇದಿಕೆಯಲ್ಲಿ ನೃತ್ಯಕ್ಕೂ ಮುನ್ನ ವಿಜಯ್ ದೇವರಕೊಂಡ ಅವರು ತಮ್ಮ ಶರ್ಟ್ ಅನ್ನು ತೆಗೆದು ಕೇವಲ ಬನಿಯನ್‌ನಲ್ಲಿ ಮಿಂಚಿದರು. ಹೀಗಾಗುತ್ತಿದ್ದಂತೆಯೇ ಶಿಳ್ಳೆಗಳ ಸುರಿಮಳೆಯಾಗಿದೆ. ನಂತರ ವಿಜಯ್ ಅವರು, ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್ ಮುಂದುವರೆಯಿತು. ಕೆಲವರು ವಿಜಯ್ ಅವರ ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದರೆ, ಸಮಂತಾ ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ಪರಿಗೆ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಇಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ‌ ಈಗ ಸದ್ದು ಮಾಡುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist