ಕುಡಿದ ಅಮಲಿನಲ್ಲಿ ಐಫೆಲ್ ಟವರ್ ಮೇಲೆ ನಿದ್ದೆಹೋದ ಪ್ರವಾಸಿಗರು!
Eiffel Tower : ಕುಡಿದ ಮತ್ತಿನಲ್ಲಿ ಅಮೆರಿಕದ ಇಬ್ಬರು ಪ್ರವಾಸಿಗರು ಐಫೆಲ್ ಟವರಿನ ಮೇಲೆ ನಿದ್ದೆ ಹೋದ ಘಟನೆ ಸೋಮವಾರ ನಡೆದಿದೆ. ಭದ್ರತಾ ನಿಯಮಗಳನ್ನು ಮೀರಿದ ಈ ಪ್ರವಾಸಿಗರು ಐಫೆಲ್ ಟವರಿನ ಮಹಡಿಗಳಲ್ಲಿ ಒಂದಿಡೀ ರಾತ್ರಿಯನ್ನು ಕಳೆದಿದ್ದಾರೆ. ಹಾಗಾಗಿ ಪೊಲೀಸರು ಇವರಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಭದ್ರತಾ ಸಿಬ್ಬಂದಿಯು (Security) ನಿತ್ಯದ ತಪಾಸಣೆಗೆ ಹೋದಾಗ ಈ ವಿಷಯ ಬಹಿರಂಗಗೊಂಡಿದೆ. ಗೋಪುರದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಇವರು ರಾತ್ರಿಯನ್ನು ಕಳೆದಿದ್ದಾರೆ ಎಂದು ಸ್ಥಳೀಯ ಮಾದ್ಯಮ ವರದಿ ಮಾಡಿದೆ. ಐಫೆಲ್ ಟವರ್ಗೆ ಬಾಂಬ್ ಬೆದರಿಕೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಎಡೆಮಾಡಿದೆ.
ಅವರು ಸಾಕಷ್ಟು ಮದ್ಯಪಾನ ಮಾಡಿದ್ದರಿಂದ ಹೀಗೆ ಪೊಲೀಸರ ಕೈಗೆ ಸಿಕ್ಕಿದ್ದಾರೆ ಎಂದು ಪ್ಯಾರೀಸ್ ಪ್ರಾಸಿಕ್ಯೂಟರ್ ಹೇಳಿದ್ದಾರೆ. ಭಾನುವಾರ ರಾತ್ರಿ 10.40ಕ್ಕೆ ಐಫೆಲ್ ಟವರ್ ಪ್ರವೇಶಿಸಲು ಇವರಿಬ್ಬರೂ ಟಿಕೆಟ್ ಖರೀದಿಸಿದ್ದಾರೆ. ಆದರೆ ವಾಪಾಸು ಇಳಿಯುವಾಗ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಲ್ಲಿಯೇ ಮಲಗಿದ್ದಾರೆ.
ಇವರಿಬ್ಬರನ್ನೂ ಅಗ್ನಿಶಾಮಕ ದಳದ ಸಹಾಯದಿಂದ ಕೆಳಗಿಳಿಸಲಾಗಿದೆ. ನಂತರ ಪ್ಯಾರೀಸ್ನ ಪೊಲೀಸ್ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದ್ದು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯಿಂದಾಗಿ ಪ್ರಸಿದ್ಧ ಐಫೆಲ್ ಟವರ್ಗೆ ದೊಡ್ಡ ಎಚ್ಚರಿಕೆ ಘಂಟೆಯಂತೆ ಪರಿಣಮಿಸಿದೆ!
ಶನಿವಾರ ಬೆಳಗ್ಗೆಯಷ್ಟೇ ಐಫೆಲ್ ಟವರ್ನಲ್ಲಿ ಬಾಂಬ್ ಬೆದರಿಕೆಯ ಸುದ್ದಿ ಹರಡಿತ್ತು. ಇಲ್ಲಿಯ ರೆಸ್ಟೋರೆಂಟ್ ಸೇರಿದಂತೆ ಗೋಪುರವನ್ನು ಬಾಂಬ್ ನಿಷ್ಕ್ರಿಯ ತಜ್ಞರು ಮತ್ತು ಪೊಲೀಸರು ಶೋಧನೆ ನಡೆಸಿದ್ದು ತನಿಖೆ ಮುಂದುವರಿದಿದೆ. ಆ ಬೆನ್ನಲ್ಲೇ ಈ ಘಟನೆ ನಡೆದಿದ್ದು ಹೆಚ್ಚಿನ ಭೀತಿಗೆ ಕಾರಣವಾಗಿದೆ. ಫ್ರಾನ್ಸ್ ಇನ್ನು ಫ್ರಾನ್ಸ್ ಆಗಿ ಉಳಿಯಲಾರದು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
#Paris, France; Eiffel Tower has reportedly just been evacuated due to a terroristic bomb threat. This story is developing.#EiffelTower 'France is no longer France' pic.twitter.com/hXy4kisNum
— Kanwaljit Arora (@mekarora) August 12, 2023
ಊಟದ ವಿಚಾರವಾಗಿ ವಾದ, ಕುಡಿದ ನಶೆಯಲ್ಲಿ ಪತ್ನಿ ಎದೆಗೆ ಗುಂಡು ಹಾರಿಸಿದ ನ್ಯಾಯಾಧೀಶ
ಊಟದ ವಿಚಾರವಾಗಿ ನಡೆದ ಜಗಳದಲ್ಲಿ ನ್ಯಾಯಾಧೀಶರೊಬ್ಬರು ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ನಂತರ ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಸಾಕಷ್ಟು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ವರದಿಗಳ ಪ್ರಕಾರ ನ್ಯಾಯಾಧೀಶರ ಮನೆಯಲ್ಲಿ 47 ಬಗೆಯ ಶಸ್ತ್ರಾಸ್ತ್ರಗಳಿದ್ದವು, 26,000 ಗುಂಡುಗಳು ಪತ್ತೆಯಾಗಿವೆ.
ಆರೆಂಜ್ ಕೌಂಟಿಯಾ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಜೆಫ್ರಿ ಫರ್ಗುಸನ್ ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ತಾನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.
ನ್ಯಾಯಾಧೀಶರ ಪುತ್ರನೇ ತನ್ನ ತಾಯಿಯ ಸಾವಿನ ಕುರಿತು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನ್ಯಾಯಾಧೀಶರ ಪತ್ನಿಗೆ 65 ವರ್ಷ ವಯಸ್ಸಾಗಿತ್ತು.
ನ್ಯಾಯಾಧೀಶ ಫರ್ಗುಸನ್ ಮತ್ತು ಅವರ ಪತ್ನಿ ಶೆರಿಲ್ ಅವರು ಹತ್ತಿರದ ರೆಸ್ಟೋರೆಂಟ್ನಲ್ಲಿ ರಾತ್ರಿ ಊಟ ಮಾಡುವಾಗ ಜಗಳವಾಡಿದ್ದರು. ಕೋಪದ ಭರದಲ್ಲಿ ಪತ್ನಿಗೆ ಎದೆಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾರೆ.
ನ್ಯಾಯಾಧೀಶರಿಗೆ ಒಂದು ಮಿಲಿಯನ್ ಡಾಲರ್ ಮೊತ್ತದ ಮೇಲೆ ಜಾಮೀನು ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ. ಫರ್ಗುಸನ್ ಕೊಲೆಯನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ವಕೀಲರು ವಾದಿಸಿದ್ದಾರೆ. ಅವರಿಗೆ ಮದ್ಯಪಾನ ಮಾಡದಂತೆ ಕೋರ್ಟ್ ಸೂಚನೆ ನೀಡಿದೆ.