ಬುಧವಾರ, ಮೇ 15, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಶಾಕ್ ; ರಾಜ್ಯದಲ್ಲಿ 15% ರಷ್ಟು ಏರಿಕೆಯಾದ ಅಕ್ಕಿ ಬೆಲೆ!

Twitter
Facebook
LinkedIn
WhatsApp
ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಶಾಕ್ ; ರಾಜ್ಯದಲ್ಲಿ 15% ರಷ್ಟು ಏರಿಕೆಯಾದ ಅಕ್ಕಿ ಬೆಲೆ!

ಕಳೆದ ಕೆಲವು ವಾರಗಳಿಂದ ಅಕ್ಕಿಯ ಬೆಲೆಯು ಸರಾಸರಿ 15% ರಷ್ಟು ಏರಿಕೆ ಕಂಡಿದೆ(Rice Price Rises). ಅದರಲ್ಲೂ ಇಡೀ ಏಷ್ಯಾದಲ್ಲಿ ಅಕ್ಕಿ ಬೆಲೆ ದಾಖಲೆ ಏರಿಕೆ ಕಂಡಿದ್ದು, ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ. ಅಕ್ಕಿಯನ್ನು ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಜುಲೈ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ. ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ ₹ 50 ರಿಂದ ₹ 60 ರೂಗೆ ಏರಿಕೆಯಾಗಿದೆ. ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ಅಕ್ಕಿ ಕೆ.ಜಿಗೆ ₹ 62 ರಿಂದ ₹ 64 ಇತ್ತು. ಆದ್ರೆ ಈಗ ₹ 70 ರಿಂದ ₹ 74 ರವರೆಗೆ ತಲುಪಿದೆ. ಅನಿಯಮಿತ ಮಳೆಯಿಂದಾಗಿ ಭತ್ತದ ಉತ್ಪಾದನೆ ಆಗಿಲ್ಲ. ಇದು ಈಗ ಆತಂಕ ತಂದಿದೆ. ಹಲವೆಡೆ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಸ್ಟೀಮ್ ರೈಸ್ ಮತ್ತು ಭಕ್ತ ಇತರವುಗಳಲ್ಲಿ 20% ರಷ್ಟು ಹೆಚ್ಚಳವಾಗಿದೆ ಎಂದು ಯಶವಂತಪುರ ಎಪಿಎಂಸಿ ಯಾರ್ಡ್ ಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಹೇಳಿದರು.

ಇಡ್ಲಿ, ದೋಸೆ ಮತ್ತು ಬಿಪಿಎಲ್ ಕುಟುಂಬಗಳು ಬಳಸುವ ಅಕ್ಕಿ ಕೆಜಿಗೆ ₹ 30 ರಿಂದ ₹ 36 ಕ್ಕೆ ಏರಿದೆ, ಅದು ಸುಮಾರು 20% ಹೆಚ್ಚಳವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಅಕ್ಕಿಯ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಅದು ಕಡಿಮೆಯಾಗಬಹುದು ಎಂದು ಉದ್ಯಮದ ಮೂಲಗಳು ತಿಳಿಸಿವೆ. ಕಟಾವು ಪೂರ್ಣಗೊಂಡಾಗ ನವೆಂಬರ್ ವೇಳೆಗೆ ಅಕ್ಕಿ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಅಕ್ಕಿ ಪೂರೈಕೆ ಕಡಿಮೆಯಾಗಿದ್ದು, ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಹೆಚ್ಚಿನ ದರದಲ್ಲಿ ಅಕ್ಕಿ ಬರುತ್ತಿದೆ ಎಂದು ಅಕ್ಕಿ ವ್ಯಾಪಾರಿಗಳು ತಿಳಿಸಿದ್ದಾರೆ. ಕೇಂದ್ರವು ಬಾಸ್ಮತಿಯೇತರ ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಬೆಲೆ ಈಗ ಸ್ವಲ್ಪ ಸ್ಥಿರವಾಗಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ.

ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣರಾವ್ ಪ್ರಕಾರ, ಕೇಂದ್ರವು ಪರಿಷ್ಕರಿಸಿದ ಅಕ್ಕಿ ಬೆಲೆ ಈ ವರ್ಷ ಹೆಚ್ಚಾಗಿದೆ. ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು 7% ರಷ್ಟು ಕಡಿಮೆಗೊಳಿಸಲಾಗಿದೆ. ಏಕೆಂದರೆ ಅದು MSP ಅನ್ನು ಪ್ರತಿ ಕ್ವಿಂಟಲ್‌ಗೆ ₹2,040 ರಿಂದ ₹2,183 ಕ್ಕೆ ಹೆಚ್ಚಿಸಿದೆ. “ಸಾಮಾನ್ಯವಾಗಿ, ಜೂನ್ ಮತ್ತು ಆಗಸ್ಟ್ ನಡುವೆ ಬೆಲೆಗಳು ಹೆಚ್ಚಾಗುತ್ತವೆ. ಕಳೆದ ವರ್ಷ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಕಂಡ್‌ನಲ್ಲಿ ಮಳೆಗೆ ಬೆಳೆ ಹಾನಿಯಿಂದಾಗಿ ದಾಸ್ತಾನು ಕಡಿಮೆಯಾಗಿದೆ. ರಫ್ತು ನಿಷೇಧವು ಬೆಲೆಗಳನ್ನು ಕಡಿಮೆಯಾಗಿಸಿದೆ ಮತ್ತು ವೈವಿಧ್ಯತೆಯ ಆಧಾರದ ಮೇಲೆ ಪ್ರತಿ ಕೆಜಿಗೆ ₹ 2 ರಿಂದ ₹ 4 ರ ನಡುವೆ ಬೆಲೆ ಕಡಿಮೆಯಾಗುತ್ತದೆ ಎಂದರು.

ಕಳೆದ 44 ವರ್ಷಗಳಲ್ಲಿ ಬೆಂಗಳೂರು ಶೇ 1,005 ರಷ್ಟು ಬೆಳೆದಿದೆ: ವರದಿ

ಬೆಂಗಳೂರು: 1973 ರಿಂದ 2017ರ ವರೆಗೆ ಬೆಂಗಳೂರು (Bengaluru) ಶೇ 1,005ರಷ್ಟು ಬೆಳೆದಿದೆ. ನಗರದಲ್ಲಿ ರಾಜ್ಯದ ಜನಸಂಖ್ಯೆಗಿಂತ ಶೇ 15 ಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ ಎಂದು ಕಾರ್ಪರೇಟ್ಸ್​ ಇನ್​ ರಿಯಲ್​ ಎಸ್ಟೆಟ್​ (CIRE) ಎಂದು ಕರೆಯಲ್ಪಡುವ ಲೀಡರ್​​ಶಿಪ್​​ ನೆಟ್​ವರ್ಕ್​​ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖವಾಗಿದೆ. ಇನ್ನು ಬೆಂಗಳೂರು ನಗರವು ಉದ್ಯೋಗಿಗಳಿಗೆ ಪ್ರಮುಖ ಕೇಂದ್ರವಾಗಿದೆ ಮತ್ತು ನೈಜ ಅಭಿವೃದ್ಧಿಗೆ ಕೇಂದ್ರಬಿಂದುವಾಗಿದೆ.

ಕಳೆದ ವರ್ಷ ಭಾರತದ ವಾಣಿಜ್ಯ ಗುತ್ತಿಗೆಗಳಲ್ಲಿ ನಗರವು ಶೇ 20 ರಷ್ಟು ಭಾಗ ಹೊಂದಿದೆ. 2022 ರಲ್ಲಿ, ನಗರದ 12.5 ಮಿಲಿಯನ್ ಚದರ ಅಡಿ ಭೂಮಿಯಲ್ಲಿ ಕಚೇರಿಗಳೇ ಇವೆ. ಈ ವರ್ಷದ ಅಂತ್ಯದ ವೇಳೆಗೆ ಇದು 8-7 ಮಿಲಿಯನ್ ಚದರ​​ ಅಡಿಗೆ ಏರುವ ನಿರೀಕ್ಷೆ ಇದೆ. ಕಳೆದ ವರ್ಷ ಒಂದರಲ್ಲೇ 8.5 ಮಿಲಿಯನ್ ಚದರ ಅಡಿ ಭೂಮಿ ವಾಣಿಜ್ಯ ರಿಯಲ್ ಎಸ್ಟೇಟ್​​ಗಾಗಿ ಬಳಕೆಯಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆ (IT-BPM) ವಲಯವು ಕಳೆದ ವರ್ಷ ಶೇ 40ರಷ್ಟು ಭೂಮಿಯನ್ನು ಬಾಡಿಗೆ ಪಡೆದುಕೊಂಡಿದೆ. ನಂತರ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಲಯ ಶೇ 25 ರಷ್ಟು ಭೂಮಿಯನ್ನು ಬಾಡಿಗೆ ಪಡೆದುಕೊಂಡಿದೆ. ನಗರದ ಒಟ್ಟು ಗುತ್ತಿಗೆಯ ಶೇ 17 ರಷ್ಟು ಭೂಮಿಯು ಕಚೇರಿಗಳಿವೆ. ಹೊರ ವರ್ತುಲ ರಸ್ತೆ, ಪೆರಿಫೆರಲ್ ಈಸ್ಟ್ (ಆನೇಕಲ್) ಮತ್ತು ಪೆರಿಫೆರಲ್ ಸೌತ್ (ಕನಕಪುರ) ಪ್ರದೇಶಗಳ ಒಟ್ಟು ಭೂಮಿಯಲ್ಲಿ ಶೇ 50 ರಷ್ಟು ಅನ್ನು ರಿಯಲ್ ಎಸ್ಟೇಟ್​​ಗಾಗಿ ಮೀಸಲಾಗಿದೆ.

ಇನ್ನು 2022ರಲ್ಲಿ ನಗರದಲ್ಲಿ 1.8 ಮಿಲಿಯನ್​​ ಚದರ ಅಡಿ ಭಾಮಿಯಲ್ಲಿ ಅಂಗಡಿಗಳೇ ಇವೆ. ಸಣ್ಣಪುಟ್ಟ ಅಂಗಡಿಗಳು ಹೆಚ್ಚಾಗಿ ಇಂದಿರಾನಗರ, ಜಯನಗರ ಮತ್ತು ಕೋರಮಂಗಲದಲ್ಲಿವೆ. ಚಿಲ್ಲರೆ ಮಾರುಕಟ್ಟೆ 2022ರಲ್ಲಿ 65 ರಿಂದ 70 ಪ್ರತಿಶತದಷ್ಟು ಆಕ್ರಮಿಸಿಕೊಂಡಿದೆ. ಈ ಮಾರುಕಟ್ಟೆಯಿಂದ ಇಲ್ಲಿಯ ಭೂಮಿಗೆ ಹೆಚ್ಚು ಬೇಡಿಕೆ ಬಂದಿದೆ.

ಬಾಡಿಗೆಗಳು ಹೆಚ್ಚಳ

ಕಳೆದ ಎರಡು-ಮೂರು ವರ್ಷಗಳಲ್ಲಿ ವಾಣಿಜ್ಯ ಮಳಿಗೆಗಳು ಮತ್ತು ಬಾಡಿಗೆ ಮನೆಗಳ ಬಾಡಿಗೆ 2019 ರಿಂದ 2021ರ ಅಂತ್ಯದವರೆಗೆ ಸ್ಥಿರವಾಗಿತ್ತು. ಆದರೆ 2022 ರ ನಂತರ ಬಾಡಿಗೆ ಏರಿಕೆ ಕಂಡಿದೆ. ಹೂಡಿಕೆ, ಮೂಲಸೌಕರ್ಯ ಮತ್ತು ಇನ್ನಿತರ ಸೌಲಭ್ಯಗಳು ಸುಲಭವಾಗಿ ದೊರೆಯುವುದರಿಂದ ಬಾಡಿಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಲೈವ್​​​ಬಿಲಿಟಿ ಇಂಡೆಕ್ಸ್​​ ವರದಿ ಪ್ರಕಾರ 1991ರಲ್ಲಿ 16 ಕೋಟಿ ರೂ. ಅಷ್ಟು ಸಾಪ್ಟ್​​ವೇರ್​ ರಪ್ತಾಗಿದ್ದು, 2022ರಲ್ಲಿ 6.3 ಲಕ್ಷ ಕೋಟಿ ರೂ. ನಷ್ಟು ಸ್ಪಾಪ್ಟ್​​ವೇರ್​ ರಪ್ತಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ