ಸ್ಪಂದನ ರವರ ಅಂತಿಮ ಪಯಣ ಆರಂಭ ; ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ
Twitter
Facebook
LinkedIn
WhatsApp
ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ರವರ ನಿಧನದ ಸುದ್ದಿ ಎಲ್ಲರಿಗೂ ಆಘಾತ ತಂದಿದೆ .ಹಠಾತ್ ಸಾವಿನಿಂದ ಬಂದಂತಹ ಎಲ್ಲಾ ಗಣ್ಯರು ಕಂಬನಿ ಮಿಡಿದಿದ್ದಾರೆ
ಇದೀಗ ಸ್ಪಂದನ ರವರ ಅಂತಿಮ ಯಾತ್ರೆ ಆರಂಭವಾಗಿದ್ದು ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಸಾಕಷ್ಟು ಅಭಿಮಾನಿ ಬಳಗ, ಚಿತ್ರರಂಗ ಗಣ್ಯರು ,ರಾಜಕೀಯ ಗಣ್ಯರು, ಸಾಕಷ್ಟು ಮಂದಿ ಭಾಗಿಯಾಗಿದ್ದಾರೆ
ನಿನ್ನೆ ರಾತ್ರಿ ಸ್ಪಂದನ ರವರ ಪ್ರಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಿದ್ದು ಇಂದು ಬೆಳಿಗ್ಗೆ ಏಳರಿಂದಲೇ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು
ಇದೀಗ ಹರಿಶ್ಚಂದ್ರ ಘಾಟ್ ಸ್ಥಳಕ್ಕೆ ಪ್ರಾರ್ಥಿವ ಶರೀರವನ್ನು ಮೆರವಣಿಗೆ ಮುಖಾಂತರ ಎಲ್ಲ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಯಾತ್ರೆ ಆರಂಭವಾಗಿದ್ದು ಕೆಲವೇ ಹೊತ್ತಲ್ಲಿ ಅಂತ್ಯಕ್ರಿಯೆ ವಿಧಿ ವಿಧಾನಗಳು ನೆರವೇರುವುದು.