Munesh Gurjar: ಪತಿ ಲಂಚ ಪಡೆದಿದ್ದಕ್ಕೆ ಜೈಪುರ ಮೇಯರ್ ಅಮಾನತು!

ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಆಗಿರುವ ಮುನೇಶ್ ಗುರ್ಜಾರ್ ಅವರ ಪತಿ ಸುಶೀಲ್ ಗುರ್ಜರ್ ಅವರನ್ನು ನಿನ್ನೆ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವು, ಭೂ ಗುತ್ತಿಗೆಗೆ ಸಂಬಂಧಿಸಿದಂತೆ 2 ಲಕ್ಷ ರೂ. ಲಂಚ ಪಡೆದ ಆರೋಪದಲ್ಲಿ ಬಂಧಿಸಿದೆ. ಪರಿಣಾಮವಾಗಿ ಗುರ್ಜರ್ ಅವರನ್ನು ನಾಗರಿಕ ಸಂಸ್ಥೆಯ ಸ್ಥಾನದಿಂದ ವಜಾಗೊಳಿಸಲಾಗಿದೆ.
ಮೇಯರ್ ನಿವಾಸದಲ್ಲಿ ಅವರ ಪತಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಮೇಯರ್ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಮೇಯರ್ ವಜಾಗೊಂಡಿದ್ದಾರೆ.
ಲಂಚ ಪಡೆದ ಪ್ರಕರಣದಲ್ಲಿ ಎಸಿಬಿ ಸುಶೀಲ್ ಗುರ್ಜಾರ್ ಸಹಿತ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ. ಸುಶೀಲ್ ಗುರ್ಜರ್ ತನ್ನ ಸಹಾಯಕರಾದ ನಾರಾಯಣ್ ಸಿಂಗ್ ಮತ್ತು ಅನಿಲ್ ದುಬೆ ಮೂಲಕ ಪ್ಲಾಟ್‌ಗಾಗಿ ಗುತ್ತಿಗೆ ಅರ್ಜಿಯನ್ನು ತ್ವರಿತವಾಗಿ ಅಂಗೀಕರಿಸಲು ದೂರುದಾರರಿಂದ 2 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಅಧಿಕಾರಿಗಳು ಬಲೆ ಬೀಸಿ ಬಂಧಿಸಿದ್ದಾರೆ.
ಸುಶೀಲ್ ಗುರ್ಜರ್ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 40 ಲಕ್ಷಕ್ಕೂ ಹೆಚ್ಚು ನಗದು ಪತ್ತೆಯಾಗಿದೆ. ನಾರಾಯಣ ಸಿಂಗ್ ಅವರ ಮನೆಯಲ್ಲಿ 8 ಲಕ್ಷಕ್ಕೂ ಹೆಚ್ಚು ನಗದು ಪತ್ತೆಯಾಗಿದೆ. ನೋಟುಗಳನ್ನು ಎಣಿಸಲು ಬ್ಯಾಂಕ್‌ನಿಂದ ಎಣಿಕೆ ಯಂತ್ರ ತರಲಾಗಿತ್ತು.
ಕಾಂಗ್ರೆಸ್‌ನ ಪ್ರತಿಯೊಂದು ಧಾಟಿಯಲ್ಲಿ, ಮೇಲಿನಿಂದ ಕೆಳಗಿನವರೆಗೆ, ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ಮಾತ್ರ ಇದೆ" ಎಂದು ಗುರ್ಜರ್ ಬಂಧನದ ನಂತರ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ ಹೇಳಿದ್ದಾರೆ.
कांग्रेस के रग रग में, ऊपर से लेकर नीचे तक हर विभाग में, चारों ओर सिर्फ भ्रष्टाचार ही समाहित है।
— C. P. Joshi (@cpjoshiBJP) August 4, 2023
जयपुर हेरिटेज नगर निगम की मेयर श्रीमती मुनेश गुर्जर के घर एसीबी की कार्रवाई में मेयर पति सुशील गुर्जर को गिरफ्तार किया गया है। (1/2) pic.twitter.com/NBZPukOxvm