ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಖ್ಯಾತ ಮೂತ್ರಶಾಸ್ತ್ರಜ್ಞ ಡಾ ವೇಣೋಗೋಪಾಲ್ ನಿಧನ
ಉಡುಪಿ: ಖ್ಯಾತ ಮೂತ್ರಶಾಸ್ತ್ರಜ್ಞ ಮತ್ತು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಸಂಸ್ಥಾಪಕ ಡಾ ವೇಣೋಗೋಪಾಲ್ ಇಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಇವರು ಪ್ರಸ್ತುತ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ.ಆನಂದ್ ವೇಣುಗೋಪಾಲ್ ಅವರ ತಂದೆ.
ಕಸ್ತೂರ್ಬಾ ಆಸ್ಪತ್ರೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಮೂತ್ರಶಾಸ್ತ್ರ ವಿಭಾಗಕ್ಕೆ ಸುಧೀರ್ಘ ಸೇವೆಯು ಮತ್ತು ಅವರು ವಿಭಾಗಕ್ಕೆ ನೀಡಿದ ಕೊಡುಗೆ ಮರೆಯಲಾಗದು. ಅವರ ಜ್ಞಾನವು ಈಗ ದೇಶ ಮತ್ತು ವಿದೇಶಗಳ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂತ್ರಶಾಸ್ತ್ರಜ್ಞರ ಮೂಲಕ ಪಸರಿಸಿದೆ.
ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾರ್ಥಿಸುತ್ತದೆ.
ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ನೈತಿಕ ಪೊಲೀಸ್ಗಿರಿ – ಇಬ್ಬರು ಅರೆಸ್ಟ್
ಮಂಗಳೂರು: ಸರ್ಕಾರದ ಎಚ್ಚರಿಕೆ ನಡುವೆಯೂ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ಗಿರಿ (Moral Policing) ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ. ಇದೀಗ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್ಗಿರಿ ಮಾಡಿರುವ ಪ್ರಕರಣವೊಂದು ಬಂಟ್ವಾಳದ (Bantwal) ಬಿಸಿ ರೋಡ್ನಲ್ಲಿ ನಡೆದಿದೆ.
ಮುಸ್ಲಿಂ ಮತ್ತು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎನ್ನುತ್ತಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿದ ಗುಂಪೊಂದು, ಪೊಲೀಸ್ ಸಿಬ್ಬಂದಿಯ ಪತ್ನಿ ಮೇಲೆ ಮಾನಭಂಗಕ್ಕೂ ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ.
ಮಾನಭಂಗ ಯತ್ನ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬೆನ್ನಲ್ಲೇ ಕಾರ್ಯಚರಣೆ ನಡೆಸಿದ ಪೊಲೀಸರು, ಆರೋಪಿಗಳಾದ ತುಂಬೆ ನಿವಾಸಿ ಮನೀಶ್ ಪುಜಾರಿ, ಮಂಜುನಾಥ್ ಆಚಾರ್ಯನನ್ನು ಬಂಧಿಸಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ಕಚೇರಿಯ ಸಿಬ್ಬಂದಿ ಪ್ರಸ್ತುತ ಎನ್ಐಎ (NIA) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸ್ತಿರುವ ಕುಮಾರ್ ಮೇಲೆ ಈ ಗುಂಪು ಹಲ್ಲೆ ನಡೆಸಿದೆ. ಜೊತೆಗೆ ಕುಮಾರ್ ಕುಟುಂಬದ ಮೇಲೆ ಮಾನಭಂಗ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.
ಕುಮಾರ್ ಆರೋಪವೇನು?
ಗುರುವಾರ ರಾತ್ರಿ ಪತ್ನಿ ಮತ್ತು ಪತ್ನಿಯ ಸಹೋದರಿ ಜೊತೆ ಬಿಸಿ ರೋಡ್ ವಸತಿ ಗೃಹದಲ್ಲಿ ತಂಗಿದ್ದೆ. ರಾತ್ರಿ ಊಟಕ್ಕೆಂದು ಹೊಟೆಲ್ಗೆ ಹೋಗಿ ವಾಪಸ್ ಆಗುವಾಗ ಇಬ್ಬರು ಹಿಂಬಾಲಿಸಿ ಬಂದು ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿದರು. ಮುಸ್ಲಿಂ ಮತ್ತು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಇಲ್ಲಿನ ವಿಚಾರ ನಿನಗೆ ಗೊತ್ತಲ್ಲವೇ ಎಂದು ಬೆದರಿಕೆ ಹಾಕಿ ಹಲ್ಲೆಗೆ ಮುಂದಾದರು. ನನ್ನ ಪತ್ನಿಯ ವಿಡಿಯೋ ಚಿತ್ರೀಕರಣ ಮಾಡಿ ಮಾನಭಂಗಕ್ಕೂ ಯತ್ನಿಸಿದರು.