ತನ್ನನ್ನು ತಾನು ಹಿಂಸಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂಬಿಬಿಎಸ್ ವಿದ್ಯಾರ್ಥಿ..!
ಹೈದರಾಬಾದ್‌ನ ಜಗದ್ಗಿರಿಗುಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಜರುಗಿದೆ. ಆದರೆ ಈ ಆತ್ಮಹತ್ಯೆ ಮಾಡಿಕೊಂಡಿರುವುದು ಮಾಮೂಲಿ ರೀತಿಯಲ್ಲಿ ಅಲ್ಲ, ಅಸಾಮಾನ್ಯ ರೀತಿಯಲ್ಲಿ. ಯುವಕನೊಬ್ಬ ಶಿಶ್ನವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಭಾರೀ ಸಂಚಲನ ಮೂಡಿಸಿದೆ.
ಜಗದ್ಗಿರಿಗುಟ್ಟ ವ್ಯಾಪ್ತಿಯ ಪಾಪಿರೆಡ್ಡಿ ನಗರ ರಸ್ತೆ ಸಂಖ್ಯೆ 18ರಲ್ಲಿ ಈ ಘಟನೆ ನಡೆದಿದೆ. ಶಿಶ್ನ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದೀಕ್ಷಿತ್ ರೆಡ್ಡಿ ಎಂದು ಪೊಲೀಸರು ಗುರುತಿಸಿದ್ದಾರೆ. ದೀಕ್ಷಿತ್ ರೆಡ್ಡಿ ವಾಸವಿದ್ದ ಮನೆಯಲ್ಲಿಯೇ ಈ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಯುವಕನೊಬ್ಬ ಶಿಶ್ನ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯ ಕುರಿತು ಜಗದ್ಗಿರಿಗುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೀಕ್ಷಿತ್ ರೆಡ್ಡಿ ಆತ್ಮಹತ್ಯೆಗೆ ಕಾರಣಗಳು ಇನ್ನಷ್ಟೇ ತಿಳಿದುಬರಬೇಕಿದೆ. ಯುವಕನ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಸಾಮಾನ್ಯವಾಗಿ ಯಾವುದೇ ಆತ್ಮಹತ್ಯ ಮಾಡಿಕೊಳ್ಳುವ ವ್ಯಕ್ತಿ ತನ್ನನ್ನು ತಾನು ಇಷ್ಟು ತೀವ್ರ ಮಟ್ಟಕ್ಕೆ ಹಿಂಸಿಸಿಕೊಳ್ಳಲು ಧೈರ್ಯ ಮಾಡುವುದಿಲ್ಲ. ಸಾಯುವ ಮುನ್ನ ಆ ದೈಹಿಕ ಮತ್ತು ಮಾನಸಿಕ ನೋವನ್ನು ಯಾರೂ ಸಹಿಸಲಾರರು. ಆದರೆ ಈ ಘಟನೆಯಲ್ಲಿ ಯುವಕ ತನ್ನ ಲಿಂಗವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೇಲಾಗಿ ಈ ರೀತಿಯ ಆತ್ಮಹತ್ಯೆ ಕೇವಲ ಆತ್ಮಹತ್ಯೆಯಷ್ಟೇ ಅಲ್ಲ ಸಮಾಜದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ವೈದ್ಯಕೀಯ ವಿದ್ಯಾರ್ಥಿಯಾಗಿರುವ ದೀಕ್ಷಿತ್ ಇದೆಲ್ಲ ಗೊತ್ತಿಲ್ಲದ ಯುವಕನಲ್ಲ. ಇದೆಲ್ಲ ಗೊತ್ತಿದ್ದರೂ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯ ಯಾರಿಗೂ ಬರುವುದಿಲ್ಲ. ಈ ಹಿಂದೆ ಇಂತಹ ಘಟನೆಗಳು ನಡೆದಿದ್ದರೂ ತೀರಾ ಅಪರೂಪ. ಹಾಗಾದಲ್ಲಿ ಇದು ನಿಜಕ್ಕೂ ಆತ್ಮಹತ್ಯೆಯೇ ಅಥವಾ ಈ ಘಟನೆಯ ಹಿಂದೆ ಯಾರಾದರೂ ಇದ್ದಾರಾ ಎನ್ನುವ ಕುರಿತು ತನಿಖೆ ನಡೆಯಬೇಕಿದೆ.
ಸ್ಕೂಟಿ, ಬೈಕ್‍ಗೆ ಟೆಂಪೋ ಡಿಕ್ಕಿ- ದಂಪತಿ ಸ್ಥಳದಲ್ಲೇ ಸಾವು
ಚಿಕ್ಕಬಳ್ಳಾಪುರ: ದಂಪತಿ ಹಾಗೂ ಅವರ ಮೂವರು ಮಕ್ಕಳು ಪ್ರತ್ಯೇಕವಾಗಿ ತೆರಳುತ್ತಿದ್ದ ಸ್ಕೂಟಿ ಹಾಗೂ ಬೈಕ್‍ಗೆ (Bike) ಟೆಂಪೋ (Tempo) ಡಿಕ್ಕಿಯಾಗಿ (Accident) ಗಂಡ ಹಾಗೂ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಕಾಚನಹಳ್ಳಿ ಬಳಿ ನಡೆದಿದೆ.
ಕುರಬೂರು ಗ್ರಾಮದ ಶ್ರೀರಾಮ್ (40) ಹಾಗೂ ಶ್ಯಾಮಲ (35) ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ. ಕೋಲಾರದ ಕಡೆಯಿಂದ ಚಿಂತಾಮಣಿ (Chintamani) ಕಡೆಗೆ ಸ್ಕೂಟಿ ಹಾಗೂ ಬೈಕ್ ಮೂಲಕ ಮಕ್ಕಳಾದ ಮೋಕ್ಷ ಹಾಗೂ ತುಷಾರ್ ಸೇರಿದಂತೆ ಅಣ್ಣನ ಮಗ ತೇಜಸ್‍ನನ್ನು ಕೂರಿಸಿಕೊಂಡು ತೆರಳುತ್ತಿದ್ದರು. ಈ ವೇಳೆ ಚಿಂತಾಮಣಿ ಕಡೆಯಿಂದ ಕೋಲಾರದ ಕಡೆಗೆ ತೆರಳುತ್ತಿದ್ದ ಟೆಂಪೋ ಡಿಕ್ಕಿಯಾಗಿದೆ. ಪರಿಣಾಮ ಘಟನೆಯಲ್ಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಮೂವರು ಮಕ್ಕಳು ಗಾಯಗೊಂಡಿದ್ದು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಟೆಂಪೋ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರಿಂದ ಟೆಂಪೋಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಸಿಪಿಐ ಸುಧಾಕರ್ ರೆಡ್ಡಿ, ಎಎಸ್ಪಿ ಕುಶಾಲ್ ಚೋಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.