ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಉತ್ತರ ಭಾರತದಲ್ಲಿ ಹಲವೆಡೆ ಮಳೆಯಿಂದ ಜಲಪ್ರಳಯ ; ಭಾರಿ ಮಳೆ, ಭೂಕುಸಿತ, ಪ್ರವಾಹದಿಂದ ಕಂಗಾಲಾದ ಜನ!

Twitter
Facebook
LinkedIn
WhatsApp
Akanksha Puri looking very hot and sexy stills Indian television actress Akanksha Puri Hot photos 44471 1

ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು 12 ಮಂದಿ ಮೃತಪಟ್ಟಿದ್ದಾರೆ, ಹಿಮಾಚಲ ಪ್ರದೇಶದೊಂದೇ ಕಡೆ 20 ಮಂದಿ ಸಾವನ್ನಪ್ಪಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಲಿದೆ.

ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ನೀರು ನಿಂತಿರುವುದು ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ನಗರವು 24 ಗಂಟೆಗಳಲ್ಲಿ 153 ಮಿಮೀ ಮಳೆಯನ್ನು ದಾಖಲಿಸಿದೆ, ಇದು 1982 ರಿಂದ ಜುಲೈನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ. ಇಂದು ಕೂಡ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಗುರುಗ್ರಾಮದ ಹಲವಾರು ಭಾಗಗಳು ಜಲಾವೃತವಾಗಿದ್ದು, ಹಲವು ಕಡೆ ವಿದ್ಯುತ್ ಕಡಿತವಾಗಿತ್ತು.

ಉತ್ತರ ಭಾರತದಲ್ಲಿರುವ (North India) ಹಿಮಾಚಲಪ್ರದೇಶ, ಉತ್ತರಾಖಂಡ್, ಜಮ್ಮುಕಾಶ್ಮೀರ, ಪಂಜಾಬ್, ಹರ್ಯಾಣ ರಾಜ್ಯಗಳು ಕುಂಭದ್ರೋಣ ಮಳೆಗೆ (Heavy Rainfall) ತತ್ತರಿಸಿವೆ. ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ.

ಇಂದೂ ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರವಾಹ, ಭೂಕುಸಿತ ಸಾಮಾನ್ಯ ಎಂಬಂತಾಗಿದ್ದು ಹಿಮಾಚಲದಲ್ಲಂತೂ (Himachal Pradesh) ಅಲ್ಲೋಲಕಲ್ಲೋಲವಾಗಿದೆ. ನದಿಗಳೆಲ್ಲಾ ಅಪಾಯದ ಮಟ್ಟ ಮೀರಿದ್ದು, ಸಿಕ್ಕಿದ್ದನ್ನೆಲ್ಲಾ ಆಪೋಷನ ಪಡೆಯುತ್ತಿವೆ.

ಬೀಯಾಸ್ ನದಿ (Beas River) ರಣಾರ್ಭಟಕ್ಕೆ ಕಟ್ಟಡವೊಂದು ಕುಸಿದಿದೆ. ಕುಲು ಬಳಿ ಕಾರುಗಳು ಕೊಚ್ಚಿ ಹೋಗಿದ್ದು, ಶಿಮ್ಲಾದ ಡಿಂಗು ಮಾತೆಯ ಮಂದಿರದ ರಸ್ತೆ ನೋಡನೋಡುತ್ತಲೇ ಕುಸಿದುಬಿದ್ದಿದೆ. ಅಟಲ್ ಸುರಂಗದ (Atal Tunnel) ಬಳಿಯೇ ಗುಡ್ಡ ಕುಸಿತವಾಗಿದ್ದು ಕುಲು-ಮನಾಲಿ ನಡುವಿನ ರಸ್ತೆ ಬಂದ್ ಆಗಿದೆ. 

ಪಂಧೋ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನೀರು ಹೊರಗೆ ಬಿಡಲಾಗಿದ್ದು, ಸಣ್ಣ ಸೇತುವೆಯೊಂದು ಮಾಯವಾಗಿದೆ. ಪಂಚವಕ್ತ್ರ ಎಂಬಲ್ಲಿ ಮರದ ದಿಮ್ಮಿಗಳ ಸಮೇತ ಜಲರಕ್ಕಸ ನಗರಕ್ಕೆ ನುಗ್ಗಿದೆ. ನಿರಂತರ ಗುಡ್ಡ ಕುಸಿತದ ಪರಿಣಾಮ ಮಾರ್ಗಮಧ್ಯೆಯೇ ಸಾವಿರಾರು ವಾಹನ ಸಿಲುಕಿವೆ.

ಊಟ ನೀರಿಲ್ಲದೇ ಪ್ರವಾಸಿಗರು ಒದ್ದಾಡುವಂತಾಗಿದೆ. ಪ್ರವಾಹ, ಭೂಕುಸಿತದ ಪರಿಣಾಮ 700ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿವೆ. ಹಿಮಾಚಲದಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದ್ದು, 2 ದಿನ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರಾಖಂಡ್‍ನ (Uttarakhand) ಉಧಾಂಸಿಂಗ್‍ನಗರದಲ್ಲಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ತೆಹ್ರಿಯಲ್ಲಿ ದಕ್ಷಿಣ ಭಾರತೀಯರಿದ್ದ ಪ್ರವಾಸಿ ವಾಹನವೊಂದು ಅಪಘಾತಕ್ಕೀಡಾಗಿದೆ. 11 ಮಂದಿ ಪೈಕಿ ಐವರನ್ನು ರಕ್ಷಣೆ ಆಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ.

ಜಮ್ಮು ಕಾಶ್ಮೀರದ (Jammu Kashmir) ಪೋಶನಾ ನದಿಯಲ್ಲಿ ಇಬ್ಬರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 44 ಹಲವೆಡೆ ಸಮಸ್ಯೆಯಾಗಿದೆ. ಪಂಜಾಬ್‍ನ ಮೊಹಾಲಿ ಜಲಾವೃತವಾಗಿದ್ದು, ಅಪಾರ್ಟ್‍ಮೆಂಟ್‍ಗಳು ಜಲದಿಗ್ಬಂಧನದಲ್ಲಿವೆ. ಬೋಟ್‍ಗಳ ಮೂಲಕ ಜನರನ್ನ ರಕ್ಷಿಸಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist