ಪುತ್ತೂರು : ಇಂದಿರಾ ನಗರ ನಿವಾಸಿ ಕಾವ್ಯ ನೇಣು ಬಿಗಿದು ಆತ್ಮಹತ್ಯೆ.!
ಪುತ್ತೂರು : ಕೆಲ ವರುಷದ ಹಿಂದೆ ಗಂಡ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರುಷರಕಟ್ಟೆ ಇಂದಿರಾನಗರದಲ್ಲಿ ನಡೆದಿದೆ. ಪುರುಷರಕಟ್ಟೆ ಇಂದಿರಾನಗರ ದಿ. ಪ್ರವೀಣ್ ಎಂಬವರ ಪತ್ನಿ ಕಾವ್ಯ (38) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಜ.1 ರಂದು ಮಹಿಳೆಯ ಮೃತದ ಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿವಾಸಿ ಕಾವ್ಯ 7 ವರ್ಷದ ಹಿಂದೆ ಅವರ ಪತಿ ಪ್ರವೀಣ್ ಅವರು ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಕಾವ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೂನ್. 30 ರಂದು ಕಾವ್ಯ ಅವರ ಪುತ್ರ ಪ್ರತೀಕ್ ಎಂಬವರು ಬೆದ್ರಾಳ ಸಮೀಪ ಅಪಘಾತವೊಂದರಲ್ಲಿ ತೀವ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರ ಬೆನ್ನಲೆ ಅವರ ತಾಯಿ ಕಾವ್ಯ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಆರಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಕುಟುಂಬಸರಿಗೆ ಸಾಂತ್ವನ ಹೇಳಿದರು.