ಮುಂಬೈ: ಸ್ಕೂಟರ್ನಲ್ಲಿ 7 ಮಕ್ಕಳನ್ನು ಒಟ್ಟಿಗೆ ಕರೆದೊಯ್ದ ವ್ಯಕ್ತಿ ವಿರುದ್ಧ ಎಫ್‍ಐಆರ್ ದಾಖಲು
ಮುಂಬೈ: ಸ್ಕೂಟರ್ನಲ್ಲಿ 7 ಮಕ್ಕಳನ್ನು ಒಟ್ಟಿಗೆ ಕರೆದುಕೊಂಡು ಹೋದ ಪ್ರಕರಣ ಸಂಬಂಧ ಇದೀಗ ವ್ಯಕ್ತಿ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ. 7 ರಲ್ಲಿ ನಾಲ್ವರು ಮುನವ್ವರ್ ಮಕ್ಕಳಾಗಿದ್ದು, ಉಳಿದವರು ನೆರೆಹೊರೆಯವರ ಮಕ್ಕಳು.
ವ್ಯಕ್ತಿಯನ್ನು ಮುನವ್ವರ್ ಶಾ (Munavvar Shah) ಎಂದು ಗುರುತಿಸಲಾಗಿದೆ. ತೆಂಗಿನಕಾಯಿ ಮಾರಾಟ ಮಾಡುವ ಇವರ ವೀಡಿಯೋವೊಂದು ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಈ ಸಂಬಂಧ ಇದೀಗ ಮುನವ್ವರ್‍ನನ್ನು ಪೊಲೀಸರು ಬಂಧಿಸಿದ್ದಾರೆ.
Not the ride we support!
— Mumbai Traffic Police (@MTPHereToHelp) June 25, 2023
This rider had put the life of all pillion riders and others in danger.
A serious offence u/sec 308 IPC for attempt to commit culpable homicide not amounting to murder has been registered against the accused rider. #FollowRules #SetRightExample https://t.co/PKgCY0grhN pic.twitter.com/q2VmoRi8oj
ವೈರಲ್ ವೀಡಿಯೋದಲ್ಲೇನಿದೆ..?: ಮುನವ್ವರ್ ತನ್ನ ಸ್ಕೂಟಿನಲ್ಲಿ ಬರೋಬ್ಬರಿ 7 ಮಕ್ಕಳನ್ನು ಕೂರಿಸಿಕೊಂಡು ಹೋಗಿದ್ದಾರೆ. ಇದರ ವೀಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೆ ಸವಾರನ ವಿರುದ್ಧ ಆಕ್ರೊಶದ ಮಾತುಗಳು ಕೇಳಿಬಂದವು.
ಈ ವೀಡಿಯೋವನ್ನು ಸ್ಥಳೀಯರು ಮುಂಬೈ ಪೊಲೀಸರಿಗೆ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಕೂಟರ್ ಸವಾರನನ್ನು ಹುಡುಕಿ ಬಂಧಿಸಿದ್ದಾರೆ.