ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲುಸಬ್ ಮರ್ಸಿಬಲ್ ನಲ್ಲಿ ತೆರಳಿದ್ದ ಐವರು ಜಲಸಮಾಧಿ…!
ವಾಷಿಂಗ್ಟನ್: ಬರೋಬ್ಬರಿ 111 ವರ್ಷಗಳ ಹಿಂದೆ ಜಲಸಮಾಧಿಯಾಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ. ಈ ಜಲ ಪ್ರವಾಸವನ್ನು ಆಯೋಜನೆ ಮಾಡಿದ್ದ ಓಷನ್ ಗೇಟ್ ಸಂಸ್ಥೆಯೇ ಈ ವಿಚಾರವನ್ನು ಖಚಿತ ಪಡಿಸಿದೆ.
ಸಾಹಸಯಾತ್ರೆಯ ಅಂಗವಾಗಿ ಫ್ರಾನ್ಸ್ನ ನಿವೃತ್ತ ನೌಕಾಪಡೆ ಅಧಿಕಾರಿ ಪೌಲ್ ಹೆನ್ರಿ ನಾರ್ಗೊಲೆಟ್, ಬ್ರಿಟನ್ನ ಸಿರಿವಂತ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಕ್ ಉದ್ಯಮಿ ಶೆಹಜಾದಾ ದಾವೂದ್ ಮತ್ತು ಅವರ ಪುತ್ರ ಸುಲೇ ಮಾನ್ ಮತ್ತು ಓಷನ್ ಗೇಟ್ ಕಂಪನಿಯ ಸಿಇಒ ಸ್ಟಾಕ್ಟನ್ ರಶ್ ಜಲಾಂತರ್ಗಾಮಿಯಲ್ಲಿ ತೆರಳಿದ್ದರು. ಅಂದೇ ನಾಪತ್ತೆಯಾಗಿದ್ದ ಈ ನೌಕೆಗಾಗಿ ಸತತ ಶೋಧ ಕಾರ್ಯ ನಡೆಯುತ್ತಲೇ ಇದೆ. ಇದುವರೆಗೂ ಈ ಜಲಾಂತರ್ಗಾಮಿ ಪತ್ತೆಯಾಗಿಲ್ಲ. ಅಲ್ಲದೆ, 92 ಗಂಟೆಗಳ ಕಾಲ ಆಗುವಷ್ಟಿದ್ದ ಆಮ್ಲಜನಕವೂ ಬುಧವಾರ ರಾತ್ರಿ 7.30ರ ವೇಳೆಗೆ ಮುಗಿದಿದೆ.
ಟೈಟಾನಿಕ್ ಗೆ ತೆರಳುತ್ತಿದ್ದ ನಾಪತ್ತೆಯಾದ ಸಬ್ ಮರ್ಸಿಬಲ್ ನಲ್ಲಿದ್ದ ಐದು ಸಿಬ್ಬಂದಿ ಸಾವನ್ನಪ್ಪಿದರು ಎಂದು ವರದಿ ಹೇಳಿದೆ.
ಯುಎಸ್ ಕೋಸ್ಟ್ ಗಾರ್ಡ್ ರಿಮೋಟ್ ನಿಯಂತ್ರಿತ ವಾಹನದ ಮೂಲಕ ನೀರಿನ ಅಡಿಯಲ್ಲಿ ಗುರುವಾರ ಪತ್ತೆಯಾದ ಅವಶೇಷಗಳನ್ನು ಪರಿಶೀಲಿಸಿದ ನಂತರ ಈ ತೀರ್ಮಾನಕ್ಕೆ ಬಂದಿತು. ಅವಶೇಷಗಳು ಟೈಟಾನಿಕ್ ನಿಂದ 1,600 ಅಡಿಗಳು (488 ಮೀಟರ್) ಅಡಿಯಲ್ಲಿ ಕಂಡುಬಂದಿವೆ.
ನಾವು ತಕ್ಷಣವೇ ಸಂಬಂಧಿತರ ಕುಟುಂಬಗಳಿಗೆ ಸೂಚಿಸಿದ್ದೇವೆ” ಎಂದು ರಿಯರ್ ಅಡ್ಮಿರಲ್ ಜಾನ್ ಮೌಗರ್ ಗುರುವಾರ ಬೋಸ್ಟನ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಟೈಟಾನಿಕ್ ದುರಂತದ ಕುಟುಂಬಸ್ಥನೇ ಪೈಲಟ್!
ಸ್ಟಾಕ್ಟನ್ ರಶ್ಎಂಬವರು ನಾಪತ್ತೆಯಾಗಿರುವ ಜಲಾಂತರ್ಗಾಮಿಯ ಪೈಲಟ್.. ವಿಪರ್ಯಾಸವೆಂದರೆ ಟೈಟಾನಿಕ್ ಹಡಗಿನ ಅವಶೇಷಗಳನ್ನು ತೋರಿಸಲು ರಶ್ ಹೋಗಿದ್ದರೋ, ಅದೇ ಹಡಗಿನಲ್ಲಿ ಮುಳುಗಿ ಸತ್ತಂತ ಶ್ರೀಮಂತ ಕುಟುಂಬದವರೇ ರಶ್ ಪತ್ನಿ ವೆಂಡಿ ರಶ್.. ದುರಾದೃಷ್ಟವೆಂಬಂತೆ ಟೈಟಾನಿಕ್ ದುರಂತದಲ್ಲಿ ವೆಂಡಿ, ತಮ್ಮ ಪೂರ್ವಜರನ್ನ ಕಳೆದುಕೊಂಡಿದ್ದರು. ಈಗ ಅದರ ಅವಶೇಷಗಳನ್ನು ತೋರಿಸಲು ಹೋಗಿದ್ದ ಅವರ ಪತಿಯೂ ಅಪಾಯದಲ್ಲಿ ಸಿಲುಕುವಂತಾಗಿದೆ.